ಬುಧವಾರ, ಡಿಸೆಂಬರ್ 8, 2021
18 °C

ಬಿಜೆಪಿಯಿಂದ ರಕ್ತದಾನ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಂಗಾರಪೇಟೆ: ‘ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಿರ್ಣಯಗಳು ದೇಶದ ಅಭಿವೃದ್ಧಿ ಹಾಗೂ ಹಿತರಕ್ಷಣೆಗೆ ಪೂರಕವಾಗಿದ್ದು, ವಿಶ್ವದ ಗಮನ ಸೆಳೆದಿವೆ’ ಎಂದು ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕಾಮಸಮುದ್ರದಲ್ಲಿ ಬಿಜೆಪಿ ಘಟಕ, ಕಾಮಸಮುದ್ರ ಹೋಬಳಿ ಮಹಾಶಕ್ತಿ ಕೇಂದ್ರದಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಮೋದಿ ಶಕ್ತಿಯನ್ನು ನೆಚ್ಚಿಕೊಂಡಿರುವ ಯುವಶಕ್ತಿ ಬಿಜೆಪಿಯತ್ತ ವಾಲುತ್ತಿದೆ ಎಂದರು.

‘ಆರೋಗ್ಯವಾಗಿರುವ ಪ್ರತಿ ಯೊಬ್ಬರೂ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು’ ಎಂದು ಬಿಜೆಪಿ ಜಿಲ್ಲಾ ಘಟಕ ಉಪಾಧ್ಯಕ್ಷ ಬಿ.ವಿ. ಮಹೇಶ್ ಹೇಳಿದರು.

ಬತ್ತಲಹಳ್ಳಿ ಮಂಜುನಾಥ್, ಮಂಡಲ ಕಾರ್ಯದರ್ಶಿ ಪಾರ್ಥಸಾರಥಿ, ಮುಖಂಡರಾದ ವೆಂಕಟೇಶ್, ತಿಪ್ಪರೆಡ್ಡಿ, ಮಂಜುನಾಥ್, ಕೃಷ್ಣಪ್ಪ, ಬಾಬುಗೌಡ ಶಿಬಿರದ ನೇತೃತ್ವವಹಿಸಿದ್ದರು. ನಟರಾಜ್, ಶ್ರೀಧರ್, ಮಹದೇವ್, ಮುನಿಯಪ್ಪ, ಮಂಜುನಾಥ್, ಶ್ರೀರಾಮ್, ಶ್ರೀನಿವಾಸ್, ಮುರಳಿ ವೆಂಕಟರಾಮ್, ಕೃಷ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.