ವೇಮಗಲ್: ನಾಲ್ಕಾರು ಬಗೆ ದೋಸೆ, ಇಡ್ಲಿ, ರೈಸ್‌ಬಾತ್, ಪೂರಿ, ಉದ್ದಿನ ವಡೆ ಐಟಂಗಳಿಂದಲೇ ಚಾರಿ ಟಿಫನ್ ಸೆಂಟರ್ ವೇಮಗಲ್ ಪಟ್ಟಣದಲ್ಲಿ ಹೆಸರುವಾಸಿಯಾಗಿದೆ. ಇಲ್ಲಿ ಸಿಗುವ ದೋಸೆ, ಇಡ್ಲಿಗೆ ಕೊಡುವ ಕೆಂಪುಚಟ್ನಿ, ಸಾಗು ತಿನ್ನಲು ಪ್ರತಿ ದಿನವೂ ಸಂಜೆ ಸಮಯ ಜಾತ್ರೆಗೆ ಬಂದಂತೆ ಜನ ಬರುತ್ತಾರೆ. ಬಾಯಿ ಚಪ್ಪರಿಸುತ್ತಾ ತಿನ್ನುತ್ತಾರೆ.