ಬುಧವಾರ, ಮಾರ್ಚ್ 29, 2023
32 °C

ಮುಳಬಾಗಿಲು: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ: ತಾಳೆ‌ಗರಿಯೇ ಸಾಕ್ಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಗಲು ಸಹಕಾರಿಯಾಗಿದ್ದು ತಾಲ್ಲೂಕಿನ ಮೂಡಿಯನೂರು ಗ್ರಾಮದಲ್ಲಿ ಸಿಕ್ಕಿದ ತಾಮ್ರದ ತಾಳೆಗಿರಿ ಪ್ರಮುಖವಾಗಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ 2018ರಲ್ಲಿ ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲ ಆರ್.ಗಾಂಧಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿತು. ಈ ತಾಳೆಗೆರೆಗಳನ್ನು ಕೋರ್ಟ್‌ಗೆ ಪೂರಕ ದಾಖಲೆಗಳಾಗಿ ಕರ್ನಾಟಕ ಸರ್ಕಾರ ಸಲ್ಲಿಸಿತ್ತು. ಕನ್ನಡಕ್ಕೆ ಪ್ರಾಚೀನ ಇತಿಹಾಸ ಇದೆ ಎಂಬುದಕ್ಕೆ ಈ ತಾಳೆಗಿರಿಗಳೇ ಸಾಕ್ಷಿ ಎಂಬುದನ್ನು ಮದ್ರಾಸ್‌ ಕೋರ್ಟ್‌ ಕೂಡ ಪರಿಗಣಿಸಿತ್ತು.

ಇದೇ ಕೋರ್ಟ್‌ ತೀರ್ಪು ಮಲೆಯಾಳಂ, ತೆಲುಗು ಭಾಷೆಗೂ ಶಾಸ್ತ್ರೀಯ ಸ್ಥಾನಮಾನ ಸಿಗಲು ಸಹಕಾರಿಯಾಗಿತ್ತು. ಈಗ ಈ ತಾಳೆಗರಿಗಳು ಆರ್ಯುವೇದ ವೈದ್ಯ ಡಾ.ದಕ್ಷಿಣಾಮೂರ್ತಿ ಅವರ ಸುಪರ್ದಿಯಲ್ಲಿವೆ.

ಕೆಲವು ತಜ್ಞರ ಪ್ರಕಾರ ಈ ತಾಮ್ರದ ತಾಳೆಗರಿಗಳು ಹಲ್ಮಡಿ ಶಾಸನ ಕ್ರಿ.ಶ 450 ಹಿಂದಿನದ್ದಾಗಿದೆ.

ತಾಳೆಗರಿಯಲ್ಲಿ ಕ್ರಿ.ಶ 263  ಶುಕ್ಲಪಕ್ಷ ಸೋಮವಾರ ಎಂದು ದಾಖಲಾಗಿದೆ. ತಾಲ್ಲೂಕಿನ ಆವಣಿ ಹೋಬಳಿ ಕೊತ್ತಮಂಗಲ ಗ್ರಾಮದ ಪ್ರಸ್ತಾಪವಿದೆ. ಈ ತಾಳೆಗರಿ ವಿವರಗಳನ್ನು ಕರ್ನಾಟಕ ಎಫಿಗ್ರಾಫಿಕ್ ಸಂಪುಟ 10ರಲ್ಲಿ ದಾಖಲಿಸಲಾಗಿದೆ. ಇದನ್ನು ದಾಖಲಿಸಿದವರು ಬಿ.ಎಲ್‌ ರೈಸ್‌. ಗ್ರಾಮಗಳಿಗೆ ನೀಡಲಾದ ದತ್ತಿ ಮತ್ತು ದಾನಗಳ ಬಗ್ಗೆಯೂ ಈ ತಾಳೆಗರಿಯಲ್ಲಿ ಉಲ್ಲೇಖವಿದೆ. ‌

ತಾಳೆಗರಿಯಲ್ಲಿ ಹಳೆಗನ್ನಡದೊಂದಿಗೆ ಸಂಸ್ಕೃತ ಭಾಷೆ ಉಪಯೋಗಿಸಲಾಗಿದೆ ಎನ್ನುತ್ತಾರೆ ಶಾಸನಗಳ ಅಧ್ಯಯನಕಾರ ಪ್ರೊ.ಕೆ.ಆರ್.ನರಸಿಂಹನ್‌. ಈ ತಾಳೆಗರಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ಸಂಬಂಧ ಕುರಿತು ಅರಿವು ಮೂಡಿಸುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು