ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ|ಶಾಲಾ ಕೊಠಡಿಯ ಸೀಲಿಂಗ್‌ ಕುಸಿತ: ಪೋಷಕರು ಪ್ರತಿಭಟನೆ

ಕ್ರಮ ವಹಿಸದ ಅಧಿಕಾರಿಗಳ ವಿರುದ್ಧ ಮಕ್ಕಳು, ಪೋಷಕರು ಪ್ರತಿಭಟನೆ
Last Updated 25 ಫೆಬ್ರುವರಿ 2023, 5:24 IST
ಅಕ್ಷರ ಗಾತ್ರ

ಕೋಲಾರ: ನಗರದ ಸುಲ್ತಾನ್ ತಿಪ್ಪಸಂದ್ರದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ ಹಾಗೂ ಚಾವಣಿ ಶಿಥಿಲಗೊಂಡು ಸೀಲಿಂಗ್‌ ಕುಸಿಯುತ್ತಿದ್ದರೂ ಕ್ರಮಕ್ಕೆ ಮುಂದಾಗದ ಅಧಿಕಾರಿಗಳ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿ ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ನಗರಸಭೆಯ ವಾರ್ಡ್ ನಂ 16ರಲ್ಲಿ ರುವ ಶಾಲೆಗೆ ಮಕ್ಕಳು ಬೆಳಿಗ್ಗೆ ಬಂದಾಗ ಕಟ್ಟಡದ ಚಾವಣಿಯ ಸೀಲಿಂಗ್ ಬಿದ್ದಿರುವುದು ಕಂಡುಬಂದಿದೆ.

ಕೂಡಲೇ ಶಿಕ್ಷಕರು ಮಕ್ಕಳನ್ನು ಪಕ್ಕದ ಕೊಠಡಿಗೆ ಕಳುಹಿಸಿದ್ದಾರೆ. ಶಿಥಿಲಗೊಂಡಿದ್ದ ಚಾವಣಿಯ ಸೀಲಿಂಗ್‌ ಗುರುವಾರ ರಾತ್ರಿ ಕುಸಿದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ರಾತ್ರಿ ಘಟನೆ ನಡೆದಿದ್ದರೂ ಬೆಳಿಗ್ಗೆ ಶಾಲೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡದ ಹಿನ್ನೆಲೆಯಲ್ಲಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಮುಖಂಡ ಮೊಯಿದ್ದೀನ್ ಖಾನ್, ‘ರಾತ್ರಿ ವೇಳೆ ಘಟನೆ ನಡೆದಿರುವುದರಿಂದಾಗಿ ಅದೃಷ್ಟವಶಾತ್ ಮಕ್ಕಳು, ಶಿಕ್ಷಕರು ಅನಾಹುತದಿಂದ ಪಾರಾಗಿದ್ದಾರೆ’ ಎಂದರು.

ಬಳಿಕ ಸ್ಥಳಕ್ಕೆ ಬಂದ ಬಿಇಒ ಕನ್ನಯ್ಯ, ತಕ್ಷಣಕ್ಕೆ ಪರ್ಯಾಯ ಬಾಡಿಗೆ ಕೊಠಡಿ ವ್ಯವಸ್ಥೆ ಮಾಡಿ ಶೀಘ್ರ ಶಿಥಿಲ ಕಟ್ಟಡ ದುರಸ್ತಿಪಡಿಸಬೇಕೆಂದು ಸಂಬಂಧಪಟ್ಟ ಎಂಜಿನಿಯರ್‌ಗೆ ಸೂಚಿಸಿದರು.

ಪೋಷಕರಾದ ಆರೀಫ್, ಅಯೂಬ್, ಶಂಷುದ್ದೀನ್, ಆಜಂಖಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT