ಜಾತಿ ಕಾರಣಕ್ಕೆ ನಿರ್ಲಕ್ಷಿಸಿದರೆ ಕ್ರಮ
‘ಜಾತಿ ಕಾರಣಕ್ಕೆ ನಿರ್ಲಕ್ಷ್ಯ ಮಾಡಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಹಿಂದೆ ನಡೆದಿರುವ ರೀತಿ ಪ್ರಕರಣ ಮರು ಕಳಿಸುವುದು ಬೇಡ. ಶಾಸಕರು ಶಿಫಾರಸ್ಸು ಮಾಡಿದರೂ ಕೆಲಸ ನೀಡದೆ ಇರುವ ಬಗ್ಗೆ ಗಮನಕ್ಕೆ ಇದೆ. ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಸೂಚಿಸಿದರು. ಸಭೆಯಲ್ಲಿ ಸದಸ್ಯ ವರದೇನಹಳ್ಳಿ ವೆಂಕಟೇಶ್ ಪ್ರಸ್ತಾಪಿಸಿದ ವಿಚಾರಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದರು. ವರದೇನಹಳ್ಳಿ ವೆಂಕಟೇಶ್ ಮಾತನಾಡಿ ‘ಕ್ರೆಡಿಲ್‌ನಲ್ಲಿ ಜೆಇ ಮಂಜುನಾಥ್ ಕೆಲಸದ ವಿಚಾರದಲ್ಲಿ ತಾರತಮ್ಯ ಮಾಡುತ್ತಾರೆ. ಎಸ್‌ಸಿ ಎಸ್‌ಟಿ ಕಡತಗಳು ಹೋದರೆ ವಿಲೇ ಮಾಡುವುದಿಲ್ಲ. ವರದೇನಹಳ್ಳಿಯಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸಿ ಐದು ವರ್ಷ ಕಳೆದಿದ್ದರೂ ಬಿಲ್ ಪಾವತಿಸಿಲ್ಲ’ ಎಂದು ದೂರಿದರು.