ಬುಧವಾರ, ನವೆಂಬರ್ 13, 2019
22 °C

ಯೋಗದಿಂದ ಕಲಿಕೆಯಲ್ಲಿ ಏಕಾಗ್ರತೆ

Published:
Updated:
Prajavani

ಕೋಲಾರ: ‘ಸಹಜ ಯೋಗದ ಮೂಲಕ ಜೀವನದಲ್ಲಿ ಶಾಂತಿ ಮತ್ತು ಕಲಿಕೆಯಲ್ಲಿ ಏಕಾಗ್ರತೆ ಪಡೆಯಬಹುದು’ ಎಂದು ಯೋಗ ಗುರು ಚಂದ್ರಶೇಖರ್ ಹೇಳಿದರು.

ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲಾ ಮಕ್ಕಳಿಗೆ ಶನಿವಾರ ಸಹಜ ಯೋಗ ಪ್ರಕ್ರಿಯೆಯ ತರಬೇತಿ ನೀಡಿ ಮಾತನಾಡಿ, ‘ಸಹಜ ಯೋಗದಿಂದ ದೈವತ್ವ ಕಂಡುಕೊಳ್ಳಬಹುದು’ ಎಂದರು.

‘ಯೋಗ, ಧ್ಯಾನದಿಂದ ಕೋಪ, ಆವೇಶ, ದ್ವೇಷ ನಾಶವಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಅತ್ಯಂತ ಖುಷಿಯಿಂದ ಮಾತನಾಡುತ್ತೀರಿ. ಮನಸ್ಸು ಉದ್ವೇಗಕ್ಕೆ ಒಳಗಾಗದೇ ಶಾಂತಿಯಿಂದ ಇರುತ್ತದೆ. ಪ್ರತಿನಿತ್ಯ ಯೋಗ ಮಾಡಿದರೆ ಏಕಾಗ್ರತೆ ಮೂಡುತ್ತದೆ ಮತ್ತು ಕಲಿಕೆಯ ಹಾದಿ ಸುಗಮವಾಗುತ್ತದೆ’ ಎಂದು ಸಲಹೆ ನೀಡಿದರು.

ಯೋಗಪಟು ಶ್ರೀನಿವಾಸ್, ಶಾಲೆ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್, ಶಿಕ್ಷಕರಾದ ಪಿ.ಲೀಲಾ, ಎಸ್.ಅನಂತಪದ್ಮನಾಭ್, ಸಚ್ಚಿದಾನಂದಮೂರ್ತಿ, ಫರೀದಾ, ಸುಗುಣಾ, ಶ್ವೇತಾ, ಶ್ರೀನಿವಾಸಲು, ಡಿ.ಚಂದ್ರಶೇಖರ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)