ಶ್ರೀನಿವಾಸಪುರ: 4 ಗ್ರಾ.ಪಂ ಕಾಂಗ್ರೆಸ್ ತೆಕ್ಕೆಗೆ

ಶ್ರೀನಿವಾಸಪುರ: ತಾಲ್ಲೂಕಿನ 6 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 4 ಹಾಗೂ ಜೆಡಿಎಸ್ 2 ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಪಡೆದುಕೊಂಡಿದೆ.
ಗೌನಿಪಲ್ಲಿ ಗ್ರಾಮ ಪಂಚಾಯಿತಿಗೆ ಅರುಣಮ್ಮ (ಅಧ್ಯಕ್ಷೆ), ನಾಗರತ್ನಮ್ಮ (ಉಪಾಧ್ಯಕ್ಷೆ), ಮುತ್ತಕಪಲ್ಲಿ ಗ್ರಾಮ ಪಂಚಾಯಿತಿಗೆ ರೆಡ್ಡಿಪ್ರಸನ್ನ (ಅಧ್ಯಕ್ಷ), ವಿ. ನಾಗರಾಜರೆಡ್ಡಿ (ಉಪಾಧ್ಯಕ್ಷ), ನಂಬಿಹಳ್ಳಿ ಗ್ರಾಮ ಪಂಚಾಯಿತಿಗೆ ನರಸಿಂಹಪ್ಪ (ಅಧ್ಯಕ್ಷ), ಸರಸ್ವತಮ್ಮ (ಉಪಾಧ್ಯಕ್ಷೆ), ನೆಲವಂಕಿ ಗ್ರಾಮ ಪಂಚಾಯಿತಿಗೆ ಎಸ್.ಎನ್. ಗೌತಮಿ (ಅಧ್ಯಕ್ಷೆ), ಮಮತಾ (ಉಪಾಧ್ಯಕ್ಷೆ), ರೋಣೂರು ಗ್ರಾಮ ಪಂಚಾಯಿತಿಗೆ ಡಿ.ಬಿ. ಶಿವಣ್ಣ (ಅಧ್ಯಕ್ಷ), ಅಮರಾವತಿ (ಉಪಾಧ್ಯಕ್ಷೆ), ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿಗೆ ಗೀತಮ್ಮ (ಅಧ್ಯಕ್ಷೆ) ಮತ್ತು ಕೆ. ಮಂಜುನಾಥ್ (ಉಪಾಧ್ಯಕ್ಷ) ಆಯ್ಕೆಯಾಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.