ಕೋಲಾರ: ‘ಕೋವಿಡ್ನಿಂದ ಹಲವು ಮಕ್ಕಳು ತಂದೆ ತಾಯಿಯನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದು, ಸಂಘ ಸಂಸ್ಥೆಗಳು ಅಂತಹ ಮಕ್ಕಳಿಗೆ ನೆರವಾಗುತ್ತಿರುವುದು ಶ್ಲಾಘನೀಯ’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕೋವಿಡ್ನಿಂದ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಕುಟುಂಬಗಳಿಗೆ ಸ್ಪರ್ಶ ಟ್ರಸ್ಟ್, ಜೆಎಸ್ಎಸ್ ಹಾಗೂ ವಿ ಕೇರ್ ಸಂಸ್ಥೆ ವತಿಯಿಂದ ಇಲ್ಲಿ ಶುಕ್ರವಾರ ದಿನಸಿ ವಿತರಿಸಿ ಮಾತನಾಡಿ, ‘ಕೋವಿಡ್ ಮೊದಲ ಅಲೆಯಲ್ಲಿ ಸಾವಿನ ಪ್ರಮಾಣ ಕಡಿಮೆಯಿತ್ತು. ಆದರೆ, 2ನೇ ಅಲೆಯಲ್ಲಿ ಸೋಂಕಿತರ ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚಿತು’ ಎಂದು ಹೇಳಿದರು.

‘ಕೋವಿಡ್ 2ನೇ ಅಲೆಯಲ್ಲಿ ಹಲವು ಮಕ್ಕಳು ಒಬ್ಬರು, ಇಬ್ಬರು ಪೋಷಕರನ್ನು ಕಳೆದುಕೊಂಡರು. ಜಿಲ್ಲೆಯಲ್ಲಿ 6 ಮಕ್ಕಳು ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಇಂತಹ ಮಕ್ಕಳಿಗೆ ಧೈರ್ಯ ತುಂಬಿ ಆರ್ಥಿಕ ನೆರವು ನೀಡಬೇಕು. ಸಂಘ ಸಂಸ್ಥೆಗಳು ಈ ಮಕ್ಕಳಿಗೆ ಸೌಕರ್ಯ ಕಲ್ಪಿಸಿದರೆ ಅನುಕೂಲವಾಗುತ್ತದೆ’ ಎಂದು ಕಿವಿಮಾತು ಹೇಳಿದರು.

‘ವಿವಿಧ 23 ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯದಲ್ಲಿ 170 ಅಂಗನವಾಡಿ ಮತ್ತು 70 ಶಾಲೆ ಅಭಿವೃದ್ಧಿ, 300 ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು, 300 ಮಕ್ಕಳಿಗೆ ವಿದ್ಯಾರ್ಥಿನಿಲಯ ಸೌಕರ್ಯ ಒದಗಿಸಿದ್ದೇವೆ. ಇದೀಗ ಪಸ್ತುತ ಕೋವಿಡ್ನಿಂದ ಪೋಷಕರನ್ನು ಕಳೆದುಕೊಂಡಿರುವ 2 ಸಾವಿರ ಬಡ ಮಕ್ಕಳನ್ನು ಗುರುತಿಸಿ ಅವರ ಕುಟುಂಬಕ್ಕೆ ಪ್ರತಿ ತಿಂಗಳು ದಿನಸಿ ವಿತರಣೆ ಮಾಡಲಾಗುತ್ತದೆ. ಜತೆಗೆ ಆ ಮಕ್ಕಳ ಶಿಕ್ಷಣ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದೇವೆ’ ಎಂದು ಸ್ಪರ್ಶ ಟ್ರಸ್ಟ್ ನಿರ್ದೇಶಕ ಗೋಪಿನಾಥ್ ವಿವರಿಸಿದರು.

‘ಪೋಷಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳನ್ನು ಸ್ವಾವಲಂಬಿಗಳಾಗಿಸಲು ನಾವೇ ಅವರ ಜವಾಬ್ದಾರಿ ಪಡೆದು ಶಿಕ್ಷಣ ಕೊಡಿಸುತ್ತೇವೆ’ ಎಂದು ಜೆಎಸ್ಎಸ್ ಸಂಸ್ಥೆ ಸದಸ್ಯ ಲಕ್ಷ್ಮೀಶ್ ಭರವಸೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ, ಸಿಡಿಪಿಒ ರಮೇಶ್, ಸಮಾಜ ಸೇವಕ ಶಿವಣ್ಣ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಚೌಡಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.