ಮಾಲೂರು: ವಿಶ್ವಕರ್ಮ ಸಮುದಾಯದವರು ಮಕ್ಕಳ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಿಕ್ಷಣದಿಂದ ಮಾತ್ರ ಸಾಮಾಜಿಕ, ಆರ್ಥಿಕ ಪ್ರಗತಿ ಸಾಧ್ಯ ಎಂದು ವಿಶ್ವಕರ್ಮ ಸಂಘದ ಖಜಾಂಚಿ ಮುನೇಶ್ವರಚಾರಿ ಹೇಳಿದರು.

ಪಟ್ಟಣದ ಮಾರುತಿ ಬಡಾವಣೆಯ ಸಂಘದ ಕಚೇರಿಯಲ್ಲಿ ತಾಲ್ಲೂಕು ವಿಶ್ವಕರ್ಮ ಸೇವಾ ಪ್ರತಿಷ್ಠಾನ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದರು.

ಸಮುದಾಯವು ದೇವರ ವಿಗ್ರಹಗಳಿಗೆ ರೂಪ ನೀಡಿ, ಧೈವಭಕ್ತಿ ರೂಪಿಸುವ ಮಹತ್ವ ಕಾರ್ಯದಲ್ಲಿ ನಿರತವಾಗಿದೆ ಎಂದರು.

ಸಮುದಾಯದ 8 ಮಹಿಳಾ ಸ್ವಸಹಾಯ ಸಂಘಗಳಿಗೆ ಡಿಸಿಸಿ ಬ್ಯಾಂಕ್ನಿಂದ ಪ್ರತಿ ಸಂಘಕ್ಕೆ ತಲಾ ₹ 5 ಲಕ್ಷ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗಿದೆ ಎಂದರು.

ಸಾಲ ಪಡೆದ ಸಂಘದ ಪ್ರತಿನಿಧಿಗಳು ಹಣವನ್ನು ಕುಟುಂಬದ ಆರ್ಥಿಕ ಅಭಿವೃದ್ಧಿಗೆ ಉಪಯೋಗಿಸಿಕೊಂಡು ಸಕಾಲಕ್ಕೆ ಮರುಪಾವತಿ ಮಾಡಬೇಕು ಎಂದರು.

ಸಮುದಾಯದ ಬಡ ಕುಟುಂಬದ ಮಹಿಳೆಯರಿಗೆ ಉಚಿತವಾಗಿ ಹಸುಗಳನ್ನು ನೀಡಿದ್ದು, ಇದರಿಂದ ಅವರ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದೆ ಎಂದರು.

ಸಂಘದ ಗೌರವಾಧ್ಯಕ್ಷ ಚಿಕ್ಕತಿರುಪತಿ ಶ್ರೀಧರಾಚಾರ್, ಕಾರ್ಯಧ್ಯಕ್ಷ ಜಗನ್ನಾಥ್ ಚಾರಿ, ಅಧ್ಯಕ್ಷ ಕೃಷ್ಣಚಾರಿ, ಪ್ರಧಾನ ಕಾರ್ಯದರ್ಶಿ ಕೋಡಿಹಳ್ಳಿ ಚಂದ್ರಶೇಖರ್, ನಗರಾಧ್ಯಕ್ಷ ಶಿವಣ್ಣ, ಮಹದೇವ ಪಾಂಚಲ್, ಪುರುಷೋತ್ತಮಚಾರಿ, ಮೋಹನ್, ವೀರಭದ್ರಚಾರಿ, ಗೌರಿಶಂಕರ್, ಕೆ.ವಿ.ಗಿರಿ, ನಂಜುಂಡಚಾರಿ, ಅಮರೇಶಾಚಾರಿ, ರವಿಶಂಕರಾಚಾರಿ, ಟಿ.ಎನ್.ಜಗದೀಶ್, ಅಂಜನೇಯಚಾರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.