ಬುಧವಾರ, ಆಗಸ್ಟ್ 17, 2022
28 °C

ಮಿಶ್ರ ಪದ್ಧತಿ ಶಸ್ತ್ರ ಚಿಕಿತ್ಸೆಗೆ ವೈದ್ಯರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್‌: ಆಯುರ್ವೇದ ಮತ್ತು ಅಲೋಪತಿ ಪದ್ಧತಿಯನ್ನು ಮಿಶ್ರ ಮಾಡಿ ಶಸ್ತ್ರ ಚಿಕಿತ್ಸೆ ನಡೆಸುವ ಪ್ರಕ್ರಿಯೆಯನ್ನು ಅವೈಜ್ಞಾನಿಕವಾಗಿದ್ದು, ಈ ಸಂಬಂಧವಾಗಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶವನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘದ ಸದಸ್ಯರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

‘ಅಲೋಪತಿ ಮತ್ತು ಆಯುರ್ವೇದವನ್ನು ಮಿಶ್ರಣಗೊಳಿಸಿ, ಸ್ನಾತಕೋತ್ತರ ಪದವಿಯ ಆಯುರ್ವೇದ ಪದ್ಧತಿಯ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಬಹುದು ಎಂಬ ಸುತ್ತೋಲೆ ವೈದ್ಯಕೀಯ ಕ್ಷೇತ್ರಕ್ಕೆ ಮಾರಕವಾಗಿದೆ’ ಎಂದರು.

ಪ್ರಧಾನಮಂತ್ರಿ ಅವರಿಗೆ ತಹಶೀಲ್ದಾರ್ ಕೆ.ಎನ್‌.ಸುಜಾತ ಅವರ ಮೂಲಕ ಮನವಿ ಸಲ್ಲಿಸಲಾಯಿತು. ಸಂಘದ ಡಾ.ವಿಜಯಕುಮಾರ್‌, ಡಾ.ನಾಗಪ್ಪ, ಡಾ.ಮಂಜುನಾಥ್‌, ಡಾ.ಸತ್ಯಕುಮಾರ್‌, ಡಾ.ಮೈಥಿಲಿ, ಡಾ.ಸರಸ್ವತಿ, ಡಾ.ಮುರಳೀಧರ್‌, ಡಾ.ರತ್ನ, ಡಾ.ಸವಿತ ಪ್ರಭು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು