ಕುಡಿಯುವ ನೀರು ನಲ್ಲಿಯಲ್ಲಿ ಬರುವುದೇ ಇಲ್ಲ. ತಿಂಗಳ ಬಜೆಟ್‌ನಲ್ಲಿ ನೀರಿಗಾಗಿ ಕೂಡ ಹಣ ಮೀಸಲು ಇಡಬೇಕು
ಗೋಪಿನಾಥ್ ಎಸ್‌ಟಿ ಬ್ಲಾಕ್ ನಿವಾಸಿ
ಕೋಟಿಂಗ್ ಇಲ್ಲದ ಟ್ಯಾಂಕರ್
ನಗರದಲ್ಲಿ ಪ್ರತಿನಿತ್ಯ ನೂರಾರು ನಂಬರ್ ಇಲ್ಲದ ಟ್ಯಾಂಕರ್ ಸಂಚರಿಸುತ್ತವೆ. ಆದರೆ ಬಹುತೇಕ ಎಲ್ಲ ಟ್ಯಾಂಕರ್‌ಗಳ ನೀರು ಬಳಕಗೆ ಯೋಗ್ಯವೇ ಎಂಬುದನ್ನು ನಗರಸಭೆ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿಲ್ಲ. ಟ್ಯಾಂಕರ್ ಒಳಗೆ ಎಪೋಕ್ಸಿ ಕೋಟಿಂಗ್ ಮಾಡುವ ಬಗ್ಗೆ ಟ್ಯಾಂಕರ್ ಮಾಲೀಕರಿಗೆ ತಿಳಿವಳಿಕೆ ನೀಡಿಲ್ಲ. ಹಳೆ ಬಣ್ಣ ಕಳೆದುಕೊಂಡ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕರ್ ಮಾಲೀಕರಿಗೆ ಕೋಟಿಂಗ್ ಮಾಡುವಂತೆ ತಿಳಿಸಿದ್ದೇವೆ ಎಂದು ಆರೋಗ್ಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಪರಿಶೀಲನೆ ಮಾತ್ರ ನಡೆದಿಲ್ಲ. ಟ್ಯಾಂಕರ್ ನೀರು ಸೇವನೆ ಮಾಡುತ್ತಿರುವುದರಿಂದ ನಗರದ ಜನರು ಚರ್ಮ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ಸಿಪಿಐ ಮುಖಂಡ ಜ್ಯೋತಿಬಸು ಆರೋಪಿಸುತ್ತಾರೆ.