ಶುಕ್ರವಾರ, ಮೇ 14, 2021
32 °C

ಕ್ರಿಕೆಟ್‌ ಟೂರ್ನಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ‘ಮನುಷ್ಯನ ಬೆಳವಣಿಗೆಯಲ್ಲಿ ಕ್ರೀಡೆಯ ಪಾತ್ರ ಹಿರಿದು. ಮಾನಸಿಕ, ದೈಹಿಕ ಮತ್ತು ಬೌದ್ಧಿಕ ಅಭಿವೃದ್ಧಿಯಲ್ಲಿ ಹೆಚ್ಚು ಪ್ರಾಮುಖ್ಯತೆ ಹೊಂದಿರುವುದರಿಂದ ಕ್ರೀಡೆಗೆ ಎಲ್ಲರ ಸಹಕಾರ ಅಗತ್ಯ’ ಎಂದು ರಾಜ್ಯ ಜೆಡಿಎಸ್ ಮುಖಂಡ ಸಮೃದ್ಧಿ ಮಂಜುನಾಥ್ ನುಡಿದರು.

ತಾಲ್ಲೂಕಿನ ದೇವರಾಯಸಮುದ್ರ ಗ್ರಾ.ಪಂ ವ್ಯಾಪ್ತಿಯ ಮಲ್ಲಪ್ಪನಹಳ್ಳಿಯಲ್ಲಿ ಸಮೃದ್ಧಿ ಮಂಜುನಾಥ್ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ವಿಕ್ಕಿಬಾಲ್ ಕ್ರಿಕೆಟ್ ಪಂದ್ಯಾ ವಳಿಗೆ ಚಾಲನೆ ನೀಡಿ ಮಾತನಾಡಿದರು.

ಕ್ರೀಡಾ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲು ತಾಲ್ಲೂಕಿನ ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಗಳಿಗೆ ವೈಯಕ್ತಿಕವಾಗಿ ತನ್ನಿಂ ದಾಗುವ ಸಹಕಾರ ನೀಡಲಾಗುವುದು ಎಂದರು.

ಮುಖಂಡ ಎಂ.ವಿ. ವೆಂಕಟೇಶನ್ ಮಾತನಾಡಿ, ರಾಜಕೀಯವನ್ನು ಕೇವಲ ಚುನಾವಣಾ ಸಮಯಕ್ಕೆ ಮೀಸಲಿಡಬೇಕು ಎಂದರು.

ಮುಖಂಡರಾದ ನಾರಾಯಣಪ್ಪ, ಕಾಮನೂರು ಶ್ರೀನಾಥ್‌ ಗೌಡ, ಕೆ.ಟಿ. ನಾರಾಯಣಸ್ವಾಮಿ, ಮುಳಬಾಗಿಲು ನವೀನ್, ಕೀಲುಹೊಳಲಿ ಹರೀಶ್, ರವೀಂದ್ರ, ಮಂಜುನಾಥ್, ಜಮ್ಮನಹಳ್ಳಿ ಶ್ರೀನಿವಾಸ್‌ ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು