ಮಂಗಳವಾರ, ಸೆಪ್ಟೆಂಬರ್ 28, 2021
21 °C
ಮಿಣಜೇನಹಳ್ಳಿ: ₹ 5 ಲಕ್ಷ ವೆಚ್ಚದಡಿ ನಿರ್ಮಾಣ

ಮುಳಬಾಗಿಲು: ಹೈಮಾಸ್ಟ್‌ ದೀಪ ಅಳವಡಿಕೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ದೇವರಾಯ ಸಮುದ್ರದಿಂದ ಕೀಲುಹೊಳಲ್ಲಿ ಮತ್ತು ದೇವರಾಯಸಮುದ್ರದಿಂದ ಪಿಚ್ಚಗುಂಟ್ಲಹಳ್ಳಿ, ಯಳಗೊಂಡ್ಲಹಳ್ಳಿ ಕ್ರಾಸ್‌ವರೆವಿಗೂ ರಸ್ತೆ ಡಾಂಬರೀಕರಣಕ್ಕೆ ತಲಾ ₹ 3 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಶಾಸಕ ಎಚ್. ನಾಗೇಶ್ ತಿಳಿಸಿದರು.

ತಾಲ್ಲೂಕಿನ ಊರುಕುಂಟೆ ಮಿಟ್ಟೂರು ಗ್ರಾ.ಪಂ ವ್ಯಾಪ್ತಿಯ ಮಿಣಜೇನಹಳ್ಳಿಯಲ್ಲಿ ಭಾನುವಾರ ₹ 5 ಲಕ್ಷ ವೆಚ್ಚದಡಿ ನಿರ್ಮಿಸಲಿರುವ ಹೈಮಾಸ್ಟ್‌ ದೀಪ ಅಳವಡಿಕೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಪಿಚ್ಚಗುಂಟ್ಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಶಾಲಾ ಮಕ್ಕಳು ತಮ್ಮ ಗ್ರಾಮದಿಂದ ಮುಖ್ಯರಸ್ತೆ ಸೇರಲು ರಸ್ತೆ ಸರಿ ಇಲ್ಲ. ಇದರಿಂದ ವಾಹನಗಳು ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮದಿಂದ ಸಂಪರ್ಕ ಕಲ್ಲಿಸುವ ರಸ್ತೆವರೆವಿಗೂ ಸುಮಾರು ಒಂದು ಕಿ.ಮೀ ವರೆವಿಗೂ ರಸ್ತೆ ನಿರ್ಮಿಸಲಾಗುತ್ತಿದೆ ಎಂದು
ತಿಳಿಸಿದರು.

ಇನ್ನು ಉಳಿದಿರುವ ಎರಡು ವರ್ಷಗಳಲ್ಲಿ ತಾಲ್ಲೂಕಿನ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಅವಶ್ಯವಿರುವ ಮೂಲಸೌಲಭ್ಯ ಒದಗಿಸಲು ಶ್ರಮಿಸಲಾಗುವುದು ಎಂದು ಹೇಳಿದರು.

ಮುಖಂಡರಾದ ಮಿಣಜೇನಹಳ್ಳಿ ಬಾಲಕೃಷ್ಣಸ್ವಾಮಿ, ಚಲಪತಿ ನಾಗರಾಜ್, ಆವಣಿ ವಿಜಿ, ಪೆದ್ದಪ್ಪಯ್ಯ, ಎಂ.ಎನ್. ವಾಸುದೇವ್, ಕೋಳಿ ನಾಗರಾಜ್, ಗ್ರಾ.ಪಂ. ಸದಸ್ಯ ವಿಶ್ವನಾಥ್, ವೆಂಕಟರಾಮ್, ಕೊತ್ತೂರು ರಾಜೇಂದ್ರಪ್ರಸಾದ್, ಚನ್ನಪ್ಪ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.