ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನದ ಹೆಸರಿನಲ್ಲಿ ಸಾಮರಸ್ಯಕ್ಕೆ ಪೆಟ್ಟು- ಅಂಬೇಡ್ಕರ್ ಕಾಲೊನಿ ನಿವಾಸಿಗಳ ದೂರು

Last Updated 8 ಏಪ್ರಿಲ್ 2022, 3:11 IST
ಅಕ್ಷರ ಗಾತ್ರ

ಮುಳಬಾಗಿಲು: ತಾಯಲೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಾಂಗದವರಿಗೆ ಸ್ಮಶಾನಕ್ಕೆ ಜಮೀನು ಬೇಕೆಂದು ನಾಡ ಕಚೇರಿಯಉಪ ತಹಶೀಲ್ದಾರ್ ಅವರಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಮನವಿ ಪತ್ರ ಸಲ್ಲಿಸಲಾಗಿದೆ. ಇದರಲ್ಲಿ ದಲಿತ ಸಂಘಟನೆಯ ಹೆಸರು ಸೇರಿಸಿರುವುದು ಸರಿಯಲ್ಲ ಎಂದು ಖಂಡಿಸಿ ಶಿರಸ್ತೇದಾರ್‌ ಸಂಪತ್ ಅವರ ಮೂಲಕ ಜಿಲ್ಲಾಧಿಕಾರಿಗೆ ತಾಯಲೂರು ಗ್ರಾಮದ ಅಂಬೇಡ್ಕರ್ ಕಾಲೊನಿ ನಿವಾಸಿಗಳು ಮನವಿ ಪತ್ರ ಸಲ್ಲಿಸಿದರು.

ಗ್ರಾಮದಲ್ಲಿ ಎಲ್ಲರೂ ಅಣ್ಣ, ತಮ್ಮಂದಿ ರಂತೆ ಜೀವನ ಸಾಗಿಸುತ್ತಿದ್ದೇವೆ. ಕೆಲವರು ದಲಿತ ಸಂಘಟನೆಗಳ ಹೆಸರಿನಲ್ಲಿ ಜನರ ಮಧ್ಯೆ ಅಶಾಂತಿ ಉಂಟು ಮಾಡಿ ಅಮಾಯಕರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸ್ಥಳೀಯವಾಗಿಯೇ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಇಷ್ಟಾದರೂ ಕೆಲವರು ಸಂಘಟನೆಗಳ ಮೂಲಕ ಜನಸಾಮಾನ್ಯರ ತಲೆಕೆಡಿಸುತ್ತಿದ್ದಾರೆ. ಅಧಿಕಾರಿಗಳು ತಾಯಲೂರು ಗ್ರಾಮಕ್ಕೆ ಸ್ಮಶಾನ ಬೇಕೆಂದು ಯಾವುದೇ ಸಂಘಟನೆಗಳು ಬಂದರೂ ಅವರ ಮನವಿಗೆ ಕಿವಿಗೊಡಬಾರದು ಎಂದು ಕೋರಿದರು.

ಗ್ರಾಮಸ್ಥರ ನಡುವೆ ಅಶಾಂತಿ, ಅಸಮಾಧಾನ, ಕಿತ್ತಾಟ ತರುವಂತಹ ಸಂಘಟನೆಗಳ ವಿರುದ್ಧ ಗ್ರಾಮಸ್ಥರು ತಿರುಗಿ ಬಿದ್ದಿದ್ದಾರೆ. ಆದ್ದರಿಂದ ಸ್ಥಳೀಯ ಕುಂದುಕೊರತೆ ನಿವಾರಿಸಲು ಸ್ಥಳೀಯರೇ ಕೇಳುತ್ತಾರೆ. ಅದನ್ನು ಬಿಟ್ಟು ಬೇರೆಡೆಯಿಂದ ಬರುವ ಸಂಘಟನೆಗಳ ಮುಖಂಡರಿಗೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಅವಕಾಶ ಕೊಡಬಾರದು ಎಂದರು.

‘ಸ್ಮಶಾನ ಕುರಿತು ಉಪ ತಹಶೀಲ್ದಾರ್, ‌ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿವರೆಗೂ ಗ್ರಾಮಸ್ಥರು ಹೋರಾಟ ಮಾಡಲು ಸಿದ್ಧವಾಗಿದ್ದೇವೆ. ತಾಯಲೂರು ಅಂಬೇಡ್ಕರ್ ಕಾಲೊನಿವರೆಗೂ ಯಾವುದೇ ರೀತಿಯ ಸಂಘಟನೆಗಳು ಬರುವುದು ಬೇಡ. ಏನೇ ಇದ್ದರೂ ಗ್ರಾಮಮಟ್ಟದಲ್ಲಿ ಇತ್ಯರ್ಥ ಮಾಡಿಕೊಳ್ಳಲಾಗುತ್ತದೆ. ಯುವಕರು ಸಂಘಟನೆಗಳಿಗೆ ಬೆಂಬಲ ನೀಡಬಾರದು’ ಎಂದು ಗ್ರಾ.ಪಂ. ಸದಸ್ಯ ಜಾಲಾರಿ ಮಂಜುನಾಥ್ ಸಲಹೆ ನೀಡಿದರು.

ಅಂಬೇಡ್ಕರ್ ಕಾಲೊನಿಯ ಮುಖಂಡರಾದ ಟಿ.ಸಿ. ರಾಜಪ್ಪ, ವೈಟ್ ಶ್ರೀನಿವಾಸ್, ವೆಂಕಟಸ್ವಾಮಿ, ಎಂ. ನಾರಾಯಣಸ್ವಾಮಿ, ಜಿ.ಮುನಿಯಪ್ಪ, ಭೀಮರಾಜ್ ಪಿಳ್ಳಪ್ಪ, ಜಿ. ವೆಂಕಟೇಶ, ಎಸ್. ನಾರಾಯಣಸ್ವಾಮಿ, ಎಂ. ನಾರಾಯಣ, ಗುರುಸ್ವಾಮಿ, ಮುನಿಸ್ವಾಮಿ, ಮದ್ದೇರಿ ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT