ಬಂಗಾರಪೇಟೆ: ತಾಲ್ಲೂಕಿನ ಬೆಮಲ್ ನಗರದ ಬಳಿ ಇರುವ ಎಂ.ವಿ.ನಗರದಲ್ಲಿ ಕೊಳೆತ ಸ್ಥಿತಿಯಲ್ಲಿ ತಂದೆ, ಮಗನ ಶವ ಪತ್ತೆಯಾಗಿವೆ.
ಎಂ.ವಿ.ನಗರದ ನಿವಾಸಿಗಳಾದ ವಸಂತ ರಾಜುಲು (84) ಮಗ ಸೂರ್ಯ ಪ್ರಕಾಶ್ (44) ಮೃತಪಟ್ಟವರು. ತಮ್ಮ ಮನೆಯಲ್ಲಿಯೇ ಶವ ಪತ್ತೆಯಾಗಿವೆ. ನಾಲ್ಕೈದು ದಿನದ ಹಿಂದೆ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ತಂದೆ ವೃದ್ಧರಾಗಿದ್ದು, ಮಗ ಆಗಾಗ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
ಆದರೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಶಾಂತಕುಮಾರ್, ಇನ್‌ಸ್ಪೆಕ್ಟರ್ ಸಂಜೀವರಾಯಪ್ಪ ಭೇಟಿ ನೀಡಿದ್ದರು. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.