ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಇನ್ನೂ ಆರಂಭವಾಗದ ಮೇವು ಬ್ಯಾಂಕ್‌

Published 9 ಮೇ 2024, 7:09 IST
Last Updated 9 ಮೇ 2024, 7:09 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ವಿವಿಧೆಡೆ ಜಾನುವಾರುಗಳಿಗೆ ಮೇವಿನ ಕೊರತೆ ಕಾಣಿಸಿಕೊಳ್ಳುತ್ತಿದ್ದು, ಇನ್ನೂ ಮೇವಿನ ಬ್ಯಾಂಕ್‌ ಆರಂಭವಾಗಿಲ್ಲ.

ಜಿಲ್ಲೆಯಲ್ಲಿ ಹೈನೋದ್ಯಮ ನಂಬಿಯೇ ಲಕ್ಷಾಂತರ ಕುಟುಂಬಗಳು ಜೀವನ ಸಾಗಿಸುತ್ತಿವೆ. ಹಲವೆಡೆ ಮೇವಿನ ಕೊರತೆಯ ದೂರುಗಳು ಬರುತ್ತಿವೆ. ಮೇವು ಬ್ಯಾಂಕ್‌ ತೆರೆಯುವಂತೆ ರೈತ ಮುಖಂಡರೂ ಆಗ್ರಹಿಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಜಿ.ಟಿ.ರಾಮಯ್ಯ, ‘ಜಿಲ್ಲೆಯ ಎರಡು ಕಡೆ ಮೇವು ಬ್ಯಾಂಕ್‌ ಸ್ಥಾಪಿಸಲು ಟೆಂಡರ್‌ ಕರೆಯಲಾಗಿದೆ. ಈಗಾಗಲೇ ರೈತರಿಗೆ ಮೇವಿನ ಕಿಟ್‌ ವಿತರಿಸಲಾಗಿದೆ. ಕುಡಿಯುವ ನೀರು ಮತ್ತು ಮೇವು ಸಿಗದೆ ಯಾವುದೇ ಜಾನುವಾರುಗಳು ಮೃತಪಟ್ಟಿಲ್ಲ. ಯಾವುದೇ ದೂರುಗಳೂ ಬಂದಿಲ್ಲ’ ಎಂದರು.

‘ಕೆಜಿಎಫ್‌ನ ಬೇತಮಂಗಲ ಹಾಗೂ ಮುಳಬಾಗಿಲಿನ ಆರ್‌ಎಂಸಿ ಯಾರ್ಡ್‌ನಲ್ಲಿ ಮೇವು ಬ್ಯಾಂಕ್ ತೆಗೆಯಲಾಗುವುದು. ಒಂದೊಂದು ಮೇವು ಬ್ಯಾಂಕ್‌ನಲ್ಲಿ 200 ಟನ್ ಮೇವು ಸಂಗ್ರಹಿಸಬಹುದು. ಕೆ.ಜಿಗೆ ₹ 2 ದರದಲ್ಲಿ ಮಾರಾಟ ಮಾಡಲಾಗುವುದು’ ಎಂದು ಹೇಳಿದರು.

‘ನೀರಾವರಿ ಇರುವ ರೈತರಿಗೆ ಈಗಾಗಲೇ 13 ಸಾವಿರ ಮೇವಿನ ಕಿಟ್‌ ವಿತರಿಸಲಾಗಿದೆ. ಈಚೆಗೆ 12 ಸಾವಿರ ಕಿಟ್‌ ಬಂದಿವೆ. ಪಶು ಆಸ್ಪತ್ರೆಗಳ ಮೂಲಕ ವಿತರಿಸಲಾಗುತ್ತದೆ. ಈಗಾಗಲೇ 2.22 ಲಕ್ಷ ಜಾನುವಾರುಗಳಿಗೆ ಕಾಲು ಬಾಯಿ ಜ್ವರದ ಲಸಿಕೆಯನ್ನು ಉಚಿತವಾಗಿ ಹಾಕಲಾಗಿದೆ. ಮತ್ತೆ ಚರ್ಮ ಗಂಟು ರೋಗ ಲಸಿಕೆ ಕೂಡ ಹಾಕಲಾಗುವುದು’ ಎಂದರು.

ಪಶು ನಂದಿನಿ ಆಹಾರದ ದರವೂ ಏರಿಕೆ ಆಗಿರುವುದು ಹೈನುಗಾರರಿಗೆ ಆಘಾತ ಉಂಟು ಮಾಡಿದೆ. ಜೊತೆಗೆ ಪ್ರತಿ ಲೀಟರ್‌ ಹಾಲಿಗೆ ಸರ್ಕಾರ ನೀಡುವ ₹ 5 ಪ್ರೋತ್ಸಾಹ ಧನವೂ ಏಳು ತಿಂಗಳಿಂದ ರೈತರ ಕೈಸೇರಿಲ್ಲ.

ಈಚೆಗೆ ಜಿಲ್ಲೆಯ ಉಷ್ಣಾಂಶ 44 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆ ಆಗಿತ್ತು. ಜೊತೆಗೆ ಬಿಸಿ ಗಾಳಿಯಿಂದ ಸಮಸ್ಯೆ ಎದುರಾಗಿತ್ತು. ಮೇಯುವುದಕ್ಕಾಗಿ ಜಮೀನು, ಗುಡ್ಡ, ಬಯಲಿನಲ್ಲಿ ಸುತ್ತಾಡುವ ಜಾನುವಾರುಗಳಿಗೂ ಬಿಸಿಲಿನ ಝಳ ತಟ್ಟಿತ್ತು. ಕುರಿ ಮೇಕೆಗಳಿಗೂ ನೀರಿನ ಕೊರತೆ ಎದುರಾಗಿತ್ತು. ನರೇಗಾದಿಂದ ನಿರ್ಮಿಸಿರುವ ಕುಡಿಯುವ ನೀರಿನ ತೊಟ್ಟಿಗಳು ಖಾಲಿ ಬಿದ್ದಿದ್ದವು. ಜೊತೆಗೆ ಕೆರೆ ಕಟ್ಟೆಗಳು ಕೂಡ ಒಣಗುವ ಸ್ಥಿತಿ ತಲುಪಿದ್ದವು.

ಜಿಲ್ಲೆಯಲ್ಲಿ ಮೂರು ದಿನಗಳಿಂದ ಮಳೆ ಬರುತ್ತಿರುವುದು ತುಸು ನೆಮ್ಮದಿ ಮೂಡಿಸಿದೆ. ಜಿಲ್ಲೆಯಲ್ಲಿ 2.36 ಲಕ್ಷ ರಾಸುಗಳಿವೆ.ಜಿಲ್ಲೆಯಲ್ಲಿ ಎಲ್ಲೂ ಜಾನುವಾರುಗಳ ಮೇವಿಗೆ ಸಮಸ್ಯೆ ಆಗಿಲ್ಲ. ಯಾವುದೇ ರೀತಿ ದೂರುಗಳು ಬಂದಲ್ಲಿ ತಕ್ಷಣ ಸ್ಪಂದಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಜಿ.ಟಿ.ರಾಮಯ್ಯ ಉಪನಿರ್ದೇಶಕ ಪಶು ಸಂಗೋಪನೆ ಇಲಾಖೆ

ಜಿಲ್ಲೆಯಲ್ಲಿ 2.36 ಲಕ್ಷ ರಾಸು ಬೇತಮಂಗಲ, ಮುಳಬಾಗಿಲಿನಲ್ಲಿ ಮೇವು ಬ್ಯಾಂಕ್‌ ತೆಗೆಯಲು ಟೆಂಡರ್‌ ಜಾನುವಾರುಗಳಿಗೆ ಕಾಲು ಬಾಯಿ ಜ್ವರದ ಲಸಿಕೆ
ಜಿಲ್ಲೆಯಲ್ಲಿ ಎಲ್ಲೂ ಜಾನುವಾರುಗಳ ಮೇವಿಗೆ ಸಮಸ್ಯೆ ಆಗಿಲ್ಲ. ಯಾವುದೇ ರೀತಿ ದೂರುಗಳು ಬಂದಲ್ಲಿ ತಕ್ಷಣ ಸ್ಪಂದಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ
ಜಿ.ಟಿ.ರಾಮಯ್ಯ ಉಪನಿರ್ದೇಶಕ ಪಶು ಸಂಗೋಪನೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT