ಬುಧವಾರ, ಮಾರ್ಚ್ 3, 2021
19 °C
50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮನೆ ಪಾಠ ಮಾಡುವ ಸರೋಜಮ್ಮ

ಬೇತಮಂಗಲ: ನಿವೃತ್ತ ಶಿಕ್ಷಕಿಯ ಉಚಿತ ಟ್ಯೂಷನ್‌

ಸರೇಶ ಎಂ. ಬೇತಮಂಗಲ Updated:

ಅಕ್ಷರ ಗಾತ್ರ : | |

Prajavani

ಬೇತಮಂಗಲ: ನಿವೃತ್ತಿಯ ನಂತರವೂ ಶಿಕ್ಷಕಿಯೊಬ್ಬರು ತಮ್ಮ ಮನೆಯಲ್ಲಿ ಪ್ರತಿದಿನ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿದ್ಯಾಭ್ಯಾಸವನ್ನು ನೀಡುತ್ತಿದ್ದಾರೆ.

ಗ್ರಾಮದ 8ನೇ ಬ್ಲಾಕ್‌ನ ಸರೋಜಮ್ಮ ಅವರು ಸರ್ಕಾರಿ ಶಾಲೆಯ ಶಿಕ್ಷಕಿ ಸೇವೆಯಿಂದ ನಿವೃತ್ತಿ ಹೊಂದಿದ್ದು, ಪ್ರತಿದಿನವೂ ವಿದ್ಯಾರ್ಥಿಗಳಿಗೆ ಶಿಕ್ಷಣ ಧಾರೆ ಎರೆಯುತ್ತಿದ್ದಾರೆ.

ಶಿಕ್ಷಕರಾಗಿ ಸೇವೆ: ಸರೋಜಮ್ಮ ಅವರು 1975 ರಿಂದ 2012ವರಗೆ ಕೆಜಿಎಫ್ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ. ತಾಲ್ಲೂಕಿನ ಬೇತಮಂಗಲದಲ್ಲಿ 10 ವರ್ಷ, ಐಸಂದ್ರ ಮಿಟ್ಟೂರು ಒಂದು ವರ್ಷ, ಎನ್.ಜಿ.ಹುಲ್ಕೂರು ಎರಡು ವರ್ಷ ಸೇರಿದಂತೆ ಇತರ ಕಡೆಯಲ್ಲಿಯೂ ಕೆಲಸ ಮಾಡಿದ್ದರು. ಬೇತಮಂಗಲ ಹಳೆ ಬಡಾವಣೆಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2012ರಲ್ಲಿ ಶಿಕ್ಷಣ ವೃತ್ತಿಯಿಂದ ನಿವೃತ್ತಿಯಾಗಿದ್ದಾರೆ.

ಪ್ರತಿದಿನ 3-4 ತಂಡಕ್ಕೆ ತರಗತಿ: ಸರೋಜಮ್ಮ ಅವರು ತಮ್ಮ ಮನೆಯ ಬಳಿಯೇ ಪ್ರತಿದಿನ ಮಧ್ಯಾಹ್ನ 1 ರಿಂದ ರಾತ್ರಿ 8ರವರೆಗೂ ಸರ್ಕಾರಿ ಮತ್ತು ಖಾಸಗಿ ಶಾಲೆಯ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿ ನಡೆಸುತ್ತಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಮಕ್ಕಳು 3– 4 ತಂಡಗಳಾಗಿ ತರಗತಿಗೆ ಹಾಜರಾಗುತ್ತಿದ್ದಾರೆ.

ಕೊರೊನಾ ರಜೆಯಲ್ಲಿಯೂ ಮಕ್ಕಳಿಗೆ ವಿದ್ಯೆ: ಸುಮಾರು 7-8 ತಿಂಗಳಿಂದ ಕೊರೊನಾದಿಂದಾಗಿ ಯಾವುದೇ ಶಾಲಾ-ಕಾಲೇಜುಗಳಿಗೆ ರಜೆ ಇದ್ದರೂ ಸರೋಜಮ್ಮ ಅವರು ತಮ್ಮ ಮನೆಯಲ್ಲಿ ವಿದ್ಯೆ ನೀಡುತ್ತಾ ಬಂದಿದ್ದಾರೆ.

ವೃತಿ ಜೀವನದಲ್ಲಿ ಅನೇಕ ಪ್ರಶಸ್ತಿಗಳು: ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದಾಗ ಶಿಕ್ಷಕರ ಸಂಘಗಳು, ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮಗಳಲ್ಲಿ, ಲಯನ್ಸ್ ಕ್ಲಬ್ ವತಿಯಿಂದ ಹಾಗೂ ಜಿಲ್ಲಾ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಸರೋಜಮ್ಮ ಮಡಿಲಿಗೆ ಸಂದಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು