ಸಮುದಾಯ ಶೌಚಾಲಯವನ್ನು ಪರಿಶೀಲನೆ ಮಾಡಿ ಸಾರ್ವಜನಿಕರ ಬಳಕೆಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡುತ್ತೇವೆ.
ಯಶ್ವಂತ್, ಪಿಡಿಓ, ಕೇತಗಾನಹಳ್ಳಿ ಗ್ರಾಮ ಪಂಚಾಯಿತಿ
ಶೌಚಾಲಯವನ್ನು ಯಾರು ಸ್ವಚ್ಛಗೊಳಿಸಬೇಕು. ಅದರ ಮೇಲ್ವಿಚಾರಣೆ ಯಾರದ್ದು ಎಂಬ ಸ್ಪಷ್ಟತೆ ಗ್ರಾಮ ಪಂಚಾಯಿತಿಯಿಂದ ಸಿಕ್ಕಿಲ್ಲ.
ಶಿವಕುಮಾರ್ ಕೆ., ರೈತ ಕಂತೇಪುರಮಠ
ಸರ್ಕಾರದ ಯೋಜನೆಗಳು ಕೇವಲ ಅಂಕಿ-ಅಂಶಗಳಿಗೆ ಸೀಮಿತವಾಗದೆ ಜನಸಾಮಾನ್ಯರಿಗೆ ತಲುಪಬೇಕಿದೆ. ಕೇತಗಾನಹಳ್ಳಿ ಪಂಚಾಯಿತಿ ಕೂಡಲೇ ಎಚ್ಚೆತ್ತು ಶೌಚಾಲಯದ ಬೀಗ ತೆಗೆಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
ಮುದುಗುಳಿ ಕೃಷ್ಣಪ್ಪ, ಸಾರ್ವಜನಿಕರು
ಸ್ವಚ್ಛ ಭಾರತದ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಖರ್ಚು ಮಾಡಲಾಗುತ್ತಿದೆ. ಆದರೆ ಗೇದಿಗಲ್ ವೃತ್ತದಂತಹ ಆಯಕಟ್ಟಿನ ಜಾಗದಲ್ಲೇ ಶೌಚಾಲಯಕ್ಕೆ ಬೀಗ ಹಾಕಿರುವುದು ಯೋಜನೆಯ ಉದ್ದೇಶಕ್ಕೆ ತಣ್ಣೀರೆರಚಿದಂತಾಗಿದೆ.
ನರಸಿಂಹಮೂರ್ತಿ, ರಾಜ್ಯಾಧ್ಯಕ್ಷ, ಜೈ ಭುವನೇಶ್ವರಿ ಕನ್ನಡ ಸಂಘ