ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನುಮನ ಏಕಾತ್ಮಕ ರಥಯಾತ್ರೆ

Published 11 ಡಿಸೆಂಬರ್ 2023, 16:19 IST
Last Updated 11 ಡಿಸೆಂಬರ್ 2023, 16:19 IST
ಅಕ್ಷರ ಗಾತ್ರ

ಬಂಗಾರಪೇಟೆನಗರದಲ್ಲಿ ಯುವ ಬ್ರಿಗೇಡ್ ವತಿಯಿಂದ ‘ಹನುಮನ ಏಕಾತ್ಮಕ ರಥಯಾತ್ರೆ’ ನಡೆಯಿತು.

ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ವಿ.ಮಹೇಶ್ ಮಾತನಾಡಿ, ಅಯೋಧ್ಯೆಯ ರಾಮ ಮಂದಿರ ಜ.22 ರಂದು ಉದ್ಘಾಟನೆಯಾಗುತ್ತಿದ್ದು, ಅದರ ನಿರ್ಮಾಣಕ್ಕೆ ತನು, ಮನ, ಧನ ಅರ್ಪಿಸಿರುವವರನ್ನು ಸ್ಮರಿಸುವ ಅಂಗವಾಗಿ ‘ಹನುಮನ ಏಕಾತ್ಮಕ ರಥಯಾತ್ರೆ’ ಹಮ್ಮಿಕೊಳ್ಳಲಾಗಿದೆ ಎಂದರು.

ರಥಯಾತ್ರೆಯು ಸಂತೆಗೇಟ್ ಮಾರ್ಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೋದಂಡರಾಮಸ್ವಾಮಿ ದೇವಸ್ಥಾನ ಆವರಣ ತಲುಪಿತು. ಅಲ್ಲಿ ನೂರಾರು ಬಜರಂಗದಳ ಹಾಗೂ ಬಿಜೆಪಿಯ ಕಾರ್ಯಕರ್ತರು ಪೂಜಾ ವಿಧಿ ವಿಧಾನಗಳನ್ನು ನಡೆಸಿ ಶುಭ ಹಾರೈಸಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೊಸರಾಯಪ್ಪ. ಎಸ್‌ಸಿ ಮೋರ್ಚಾ ಅಧ್ಯಕ್ಷ ಅಮರೇಶ್, ವೆಂಕಟೇಶಮೂರ್ತಿ, ಕುಮಾರಗೌಡ, ಬಾಬು, ಯುವ ಬ್ರಿಗೇಡ್ ಸುಭಾಷ್, ಶಿವು, ಉದಯ್, ಗಂಗಾಧರ್, ಕೋಟ್ಯಾಲ್ ವಿನೋದ್, ಜೋಗಿ ,ಹರೀಶ್ ,ಚಂದ್ರು, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT