ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಿಲು: ಕನ್ನಡ ಧ್ವಜಕ್ಕೆ ಹಾನಿ ಪ್ರಕರಣ ಸುಖಾಂತ್ಯ

ತಿಮ್ಮರಾವುತನಹಳ್ಳಿಗೆ ತಹಶೀಲ್ದಾರ್‌ ಭೇಟಿ
Last Updated 23 ಜುಲೈ 2021, 4:46 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನ ಗಡಿಭಾಗದ ತಿಮ್ಮರಾವುತನಹಳ್ಳಿಯಲ್ಲಿ ಮಂಗಳವಾರ ಗ್ರಾಮದ ಕೆಲವರು ಕನ್ನಡ ಧ್ವಜವಿದ್ದ ಸ್ಥಳವನ್ನು ಹಾಳುಗೆಡವಿದ ಪ್ರಕರಣ ಸುಖಾಂತ್ಯ ಕಂಡಿದೆ.

ಈ ಪ್ರಕರಣ ತಾಲ್ಲೂಕಿನಲ್ಲಿ ಉದ್ವಿಗ್ನ ಪರಿಸ್ಥಿತಿಗೆ ದಾರಿ ಮಾಡಿಕೊಟ್ಟಿತ್ತು. ಕನ್ನಡಪರ ಸಂಘಟನೆಗಳ ಮುಖಂಡರು ಗ್ರಾಮಾಂತರ ಪೊಲೀಸ್‌ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ನಡುವೆಯೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ನಾಗನಂದ ಕೆಂಪರಾಜ್ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಠಾಣೆ ಮುಂಭಾಗ ಪ್ರತಿಭಟನೆಗೆ ಮುಂದಾಗಿದ್ದರು. ಪರಿಸ್ಥಿತಿಯ ತೀವ್ರತೆ ಅರಿತ ಕನ್ನಡ ಧ್ವಜವನ್ನು ಹಾಳುಗೆಡವಿದವರೇ ಬುಧವಾರ ಧ್ವಜದ ಸ್ಥಳವನ್ನು ದುರಸ್ತಿ ಮಾಡಿದರು.

ತಹಶೀಲ್ದಾರ್ ಕೆ.ಎನ್. ರಾಜಶೇಖರ್, ತಾ.ಪಂ. ಅಧಿಕಾರಿ ಸಿ. ಶ್ರೀನಿವಾಸ್, ಗ್ರಾಮಾಂತರ ಪೊಲೀಸ್‌ ಸಬ್ಇನ್‌ಸ್ಪೆಕ್ಟರ್ ಪ್ರದೀಪ್‌ ಸಿಂಗ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT