ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಜಿಲ್ಲೆಯಲ್ಲಿ ಬಿರುಸಿನ ಮಳೆ

Published 22 ಮೇ 2023, 4:30 IST
Last Updated 22 ಮೇ 2023, 4:30 IST
ಅಕ್ಷರ ಗಾತ್ರ

ಕೋಲಾರ: ನಗರ ಹಾಗೂ ಗ್ರಾಮಾಂತರ ಪ್ರದೇಶದ ವಿವಿಧೆಡೆ ಭಾನುವಾರ ಬಿರುಸಿನ ಮಳೆಯಾಯಿತು. ಬೆಳಿಗ್ಗೆಯಿಂದಲೇ ಮೋಡದ ವಾತಾವರಣವಿತ್ತು. ಮಧ್ಯಾಹ್ನದ ವೇಳೆಗೆ ಕತ್ತಲು ಆವರಿಸಿತು. ಮಧ್ಯಾಹ್ನ 2.30ರ ಸುಮಾರಿಗೆ ಸಿಡಿಲು ಗುಡುಗಿನಿಂದ ಕೂಡಿದ ಮಳೆ ಆರಂಭವಾಯಿತು.

ಜಿಲ್ಲೆಯ ವಿವಿಧೆಡೆ ವಿದ್ಯುತ್‌ ಅಡಚಣೆ ಉಂಟಾಯಿತು. ಜೋರು ಮಳೆ ಕಾರಣ ಹಲವೆಡೆ ಮರಗಳು ನೆಲಕ್ಕುರುಳಿದವು.

ಸಂಜೆ 5 ಗಂಟೆ ವೇಳೆಗೆ ಕೋಲಾರ ತಾಲ್ಲೂಕಿನ ವಕ್ಕಲೇರಿ ವ್ಯಾಪ್ತಿಯಲ್ಲಿ 6.8 ಸೆ.ಮೀ., ತೋರದೇವಂಡಹಳ್ಳಿ ವ್ಯಾಪ್ತಿಯಲ್ಲಿ 3 ಸೆ.ಮೀ., ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮಿಪುರ ವ್ಯಾಪ್ತಿಯಲ್ಲಿ 5.7 ಸೆ.ಮೀ. ಹಾಗೂ ಮಾಲೂರು ತಾಲ್ಲೂಕಿನ ಅಬ್ಬೇನಹಳ್ಳಿ ವ್ಯಾಪ್ತಿಯಲ್ಲಿ 2.7 ಸೆ.ಮೀ. ಮಳೆ ದಾಖಲಾಗಿದೆ. 

ಕೀಲುಕೋಟೆ ಬಳಿ ರೈಲ್ವೆ ಸೇತುವೆಯಡಿ ನೀರು ತುಂಬಿ ವಾಹನ ಸವಾರರು ಹಾಗೂ ಪಾದಚಾರಿಗಳು ಯಾತನೆ ಅನುಭವಿಸಿದರು. ದ್ವಿಚಕ್ರ ವಾಹನಗಳು ಮುಳುಗುವಷ್ಟು ನೀರು ತುಂಬಿಕೊಂಡಿತ್ತು. ಮಳೆ ಬಂದಾಗಲೆಲ್ಲಾ ಈ ಸಮಸ್ಯೆ ಉಂಟಾಗುತ್ತಿದೆ.  ಬಹುತೇಕ ಕಡೆ ಚರಂಡಿ ತ್ಯಾಜ್ಯ ಹಾಗೂ ನೀರು ರಸ್ತೆಗೆ ಉಕ್ಕಿ ಹರಿದಿದೆ.

ರಸ್ತೆಗಳಲ್ಲಿ, ವೃತ್ತಗಳಲ್ಲಿ ನೀರು ನಿಂತುಕೊಂಡಿತ್ತು, ತ್ಯಾಜ್ಯ ಹರಡಿಕೊಂಡಿತ್ತು. ನಗರದ ಹಲವೆಡೆ ಚರಂಡಿಗಳು ಮುಚ್ಚಿ ಹೋಗಿವೆ, ಇಲ್ಲವೇ ತ್ಯಾಜ್ಯ ತುಂಬಿಕೊಂಡಿದೆ. ಇದರಿಂದ ಮಳೆ ನೀರು ಸರಾಗವಾಗಿ ಹರಿಯಲು ಜಾಗವೇ ಇಲ್ಲದಾಗಿದೆ. ನಗರದಲ್ಲಿನ ಚರಂಡಿ ಅವ್ಯವಸ್ಥೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವಾರದಿಂದ ಬಿಸಿಲ ಬೇಗೆಯಿಂದ ಬಳಲಿದ್ದ ಜನರಿಗೆ ಮಳೆ ತಂಪೆರೆಯಿತು. ಜಿಲ್ಲೆಯ ಹಲವೆಡೆ ಉತ್ತಮವಾದ ಮಳೆ ಆಗಿರುವ ಹಿನ್ನೆಲೆಯಲ್ಲಿ ರೈತರು ‌ತಮ್ಮ ಕೃಷಿ ಭೂಮಿ ಹದ ಮಾಡಿಕೊಳ್ಳಲು ಮುಂದಾಗಿದ್ದಾರೆ.  

ಭಾರಿ ಮಳೆಯಿಂದ ಕೋಲಾರದ ರೈಲ್ವೆ ಕೆಳಸೇತುವೆ ಬಳಿ ನೀರು ಸಂಗ್ರಹವಾಗಿದ್ದು ಆಟೊ ಸಾಗಿದ ರೀತಿ  
ಭಾರಿ ಮಳೆಯಿಂದ ಕೋಲಾರದ ರೈಲ್ವೆ ಕೆಳಸೇತುವೆ ಬಳಿ ನೀರು ಸಂಗ್ರಹವಾಗಿದ್ದು ಆಟೊ ಸಾಗಿದ ರೀತಿ  
 ವಾಹನ ಸವಾರರ ಪರದಾಟ
ವಾಹನ ಸವಾರರ ಪರದಾಟ
ಭಾರಿ ಮಳೆ ಕಾರಣ ಕೋಲಾರದಲ್ಲಿ ಭಾನುವಾರ ಮಧ್ಯಾಹ್ನವೇ ಕತ್ತಲು ಆವರಿಸಿತ್ತು 
ಭಾರಿ ಮಳೆ ಕಾರಣ ಕೋಲಾರದಲ್ಲಿ ಭಾನುವಾರ ಮಧ್ಯಾಹ್ನವೇ ಕತ್ತಲು ಆವರಿಸಿತ್ತು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT