ಬೇತಮಂಗಲ: ಸಮೀಪದ ಸುಂದರಪಾಳ್ಯ ಗ್ರಾಮದಲ್ಲಿ ಆರ್ಎಸ್ಎಸ್ ವತಿಯಿಂದ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಮಂಗಳವಾರ ನಡೆಯಿತು.

ಈ ವೇಳೆ ಮಾಜಿ ಸಂಸದ ಎಸ್.ಮುಮಿಸ್ವಾಮಿ ಮಾತನಾಡಿ, ಸನಾತನ ಹಿಂದೂ ಧರ್ಮ ಯಾವುದೇ ಮತ ಮತ್ತು ಪಂಗಡಗಳಿಗೆ ಸೀಮಿತವಲ್ಲ. ಆರ್ಎಸ್ಎಸ್ ಜಾತಿ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿಲ್ಲ ಎಂದರು.

ಪ್ರಸ್ತುತ ಜಾತ್ಯತೀತ ಹೆಸರಿನಲ್ಲಿ ಧರ್ಮ ಬೇಡ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಆದರೆ, ಅವು ಶಾಶ್ವತವಲ್ಲ. ಧರ್ಮ ಆಧಾರದ ಮೇಲೆ ನಡೆಯುವ ಸಂಘಟನೆಗೆ ಸಾರ್ವಜನಿಕರ ಬೆಂಬಲ ಸದಾ ಇರುತ್ತದೆ ಎಂದು ಹೇಳಿದರು.

ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ಸಂಘಟನೆ ಹೆಸರಿನಲ್ಲಿ ಧರ್ಮದ ರಕ್ಷಣೆ ಮಡುವುದು ಇಂದಿನ ತುರ್ತು. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ಹಿಂದೂ ಸಮಾಜೋತ್ಸವದ ಅಂಗವಾಗಿ ನಗರ ಕೇಸರಿಮಯವಾಗಿತ್ತು. ವೆಂಕಟಾಚಲಪತಿ, ಆಂಧ್ರಪ್ರದೇಶ ಭರತ್, ಜಯ ಪ್ರಕಾಶನಾಯ್ಡು, ಮೋಹನ್ ಕೃಷ್ಣ, ಲಕ್ಷ್ಮಿನಾರಾಯಣ, ನವೀನ್ ರಾಮ್, ಚಂದ್ರಕುಮಾರ್, ಸುನೀಲ್ ಕುಮಾರ್, ಹುನುಮಂತಪ್ಪ, ಮಲ್ಲಹಳ್ಳಿ ವೆಂಕಟಾಚಲಪತಿ, ಮಂಜುನಾಥ್, ಉದಯಕುಮಾರ್ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.