ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಾಲಯಕ್ಕಾಗಿ ಮನೆ ತ್ಯಾಗ

ಮಹದೇವಪುರ ಗ್ರಾಮಸ್ಥರಿಗೆ ಲಕ್ಷ್ಮೀವೆಂಕಟೇಶ್ವರನ ಮೇಲೆ ನಂಬಿಕೆ
Last Updated 25 ಡಿಸೆಂಬರ್ 2020, 6:06 IST
ಅಕ್ಷರ ಗಾತ್ರ

ಬೇತಮಂಗಲ: ಒಂದು ದಶಕದ ಹಿಂದಿನವರೆಗೂ ಗುಡಿಸಿಲು ಮನೆಗಳಲ್ಲಿ ವಾಸ ಮಾಡಿ ಜೀವನ ನಡೆಸುತ್ತಿದ್ದ ಒಂದೇ ಸಮುದಾಯದವರು ವಾಸಿಸುತ್ತಿರುವ ಮಹದೇವಪುರ ಎಂಬ ಗ್ರಾಮಸ್ಥರು ಇತ್ತೀಚಿನ ದಿನಗಳಲ್ಲಿ ತಮ್ಮ ಬದುಕುಗಳನ್ನು ಉತ್ತಮವಾಗಿ ಕಟ್ಟಿಕೊಳ್ಳುವ ಜೊತೆಗೆ ಗ್ರಾಮದ ಹಲವು ಮಂದಿ ಉನ್ನತ ಸ್ಥಾನಕ್ಕೇರಲು ಗ್ರಾಮದಲ್ಲಿನ ಪುರಾತನ ವೆಂಕಟೇಶ್ವರನ ದೇವಾಲಯದ ಮಹಿಮೆಯೇ ಗ್ರಾಮಸ್ಥರ ಕಾರಣವಾಗಿದೆ.

ಕೋಲಾರ ಜಿಲ್ಲೆ ಕೆ.ಜಿ.ಎಫ್ ತಾಲ್ಲೂಕು ರಾಮಸಾಗರ ಗ್ರಾಪಂ ವ್ಯಾಪ್ತಿಯ ಮಹದೇವಪುರ ಎಂಬ ಗ್ರಾಮದಲ್ಲಿ ಸುಮಾರು 400 ಕುಟುಂಬಗಳಿದ್ದು ಎಲ್ಲರೂ ಭೋವಿ ಜನಾಂಗಕ್ಕೆ ಸೇರಿದವರೇ ಆಗಿದ್ದಾರೆ. ಸುಮಾರು 300 ವರ್ಷಗಳ ಹಿಂದೆ ಆಂಧ್ರ-ತಮಿಳುನಾಡುಗಳಿಂದ ಕಲ್ಲು, ಬಂಡೆ, ಮಣ್ಣು ಕೆಲಸಕ್ಕಾಗಿ ಬಂದು ಜೀವನ ನಡೆಸುತ್ತಿದ್ದ ಇವರನ್ನು ಕಳೆದ 30 ವರ್ಷಗಳ ಹಿಂದಿನವರೆಗೂ ಇದನ್ನು ವಡ್ಡರ ಗುಡಿಸಲು ಎಂದೇ ಕರೆಯಲಾಗಿತ್ತು.

ಮನೆಗಳನ್ನೇ ತ್ಯಾಗ ಮಾಡಿದ ಗ್ರಾಮಸ್ಥರು: ಮಹದೇವಪುರ ಗ್ರಾಮದಲ್ಲಿ ಸುಮಾರು ₹2 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣ ಮಾಡುವ ಜೊತೆಗೆ ಅದರ ಸುತ್ತಮುತ್ತಲಿದ್ದ ತಮ್ಮ ಹತ್ತಾರು ಮನೆಗಳನ್ನು ದೇವಾಲಯಕ್ಕಾಗಿ ಬಿಟ್ಟುಕೊಟ್ಟಿದ್ದಾರೆ. ಸಾಮಾನ್ಯವಾಗಿ ದೇವಾಲಯದ ಆಸ್ತಿಯನ್ನೇ ನುಂಗುವಂತಹ ಸಮಾಜದಲ್ಲಿ ತಾವು ವಾಸಿಸುತ್ತಿದ್ದ ಮನೆಗಳನ್ನೇ ಬಿಟ್ಟುಕೊಡುವ ಮೂಲಕ ಇತರೆ ಗ್ರಾಮಗಳಿಗೆ ಮಹದೇವಪುರ ಗ್ರಾಮಸ್ಥರು ಮಾದರಿಯಾಗಿದ್ದಾರೆ.

ಅಶ್ವತ್ಥಕಟ್ಟೆಯಲ್ಲಿ ತೀರ್ಮಾನ: ಮಹದೇವಪುರ ಎಂಬ ಗ್ರಾಮ ಹಲವಾರು ವಿಷಯಗಳಿಗೆ ಸಂಬಂಧಪಟ್ಟಂತೆ ಈಗಾಗಲೇ ಮಾದರಿಯಾಗಿ ಗುರುತಿಸಿಕೊಂಡಿದೆ. ಗ್ರಾಮದಲ್ಲಿ ಯಾರೂ ಮದ್ಯ ಸೇವಿಸುವಂತಿಲ್ಲ, ಪೊಲೀಸ್ ಠಾಣೆಗೆ ಹೋಗುವಂತಿಲ್ಲ, ಗ್ರಾಮದಲ್ಲಿ ಅಶಾಂತಿ ಉಂಟು ಮಾಡಬಾರದು, ಸ್ವಚ್ಛತೆ ಕಾಪಾಡಬೇಕು, ಯಾವುದೇ ಸಮಸ್ಯೆಗಳು ಬಂದರೂ ಅಶ್ವತ್ಥಕಟ್ಟೆಯಲ್ಲಿ ಕುಳಿತು ರಾಜಿ ಪಂಚಾಯ್ತಿ ಮಾಡುವಂತಹ
ಹಳೆಯ ಪದ್ಧತಿಗಳನ್ನು ಅಳವಡಿಸಿಕೊಳ್ಳಲಾಗಿದೆ.

ಗ್ರಾಮಸ್ಥರ ತೀರ್ಮಾನ: ಮಹದೇವಪುರ ಗ್ರಾಮದಲ್ಲಿ ಪೂರ್ವಿಕರು ಸಣ್ಣದಾಗಿ ನಿರ್ಮಿಸಿ ಪೂಜೆ ಮಾಡಿಕೊಂಡು ಹೋಗುತ್ತಿದ್ದ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು ಇದೀಗ ಗ್ರಾಮಸ್ಥರೆ ತಮ್ಮ ಸ್ವಂತ ಹಣ ಹಾಕಿಕೊಂಡು ದೊಡ್ಡದಾಗಿ ನಿರ್ಮಿಸಲು ಗ್ರಾಮಸ್ಥರು ನಿರ್ಧರಿಸಿದ್ದರು.

ಗರ್ಭ ಗುಡಿ ಬಿಟ್ಟು ಉಳಿದೆಲ್ಲವೂ ನೂತನ: ಪೂರ್ವಿಕರು ನಿರ್ಮಿಸಿದ್ದ ಗರ್ಭಗುಡಿ ಹೊರತುಪಡಿಸಿ ಸುಮಾರು 65 ಅಡಿ ಎತ್ತರದ ಆಕರ್ಷಕ, ಸುಂದರವಾದ ವಿಮಾನ ಗೋಪುರ, ರಾಜಗೋಪುರ, ಕಟ್ಟಡ, ಲಕ್ಷಾಂತರ ರೂ ವೆಚ್ಚದ ಬಾಗಿಲುಗಳು ಮತ್ತು ಮಹಾದ್ವಾರ ಸೇರಿದಂತೆ ದೇವಾಲಯವನ್ನು ಅತ್ಯಂತ ಸುಂದರವಾಗಿ ನಿರ್ಮಿಸ
ಲಾಗಿದೆ. ಹೆಲಿಕಾಪ್ಟರ್‌ ಮೂಲಕ ಶಿವರಾತ್ರಿ ಹಬ್ಬದಂದು ಮಹಾ ಕುಂಬಾಭಿ
ಷೇಕದೊಂದಿಗೆ, ಪುಷ್ಪಾರ್ಚನೆ ಮಾಡುವ ಮೂಲಕ ದೇವರಿಗೆ ವಿಶೇಷವಾಗಿ ಪೂಜೆಗಳನ್ನು
ಮಾಡಿದ್ದಾರೆ.

ಮಹದೇವಪುರ ಗ್ರಾಮದಲ್ಲಿ ಯಾವುದೇ ಹಬ್ಬ ಹರಿದಿನಗಳು, ಕಾರ್ಯಕ್ರಮಗಳು ಸೇರಿದಂತೆ ಯಾವುದೇ ಕಾರ್ಯವನ್ನು ಮಾಡಬೇಕಾದರೆ ಗ್ರಾಮದ ಎಲ್ಲಾ ಹಿರಿಯರು ಕುಳಿತುಕೊಂಡು ಚರ್ಚೆ ಮಾಡಿದ ನಂತರ ಗ್ರಾಮಸ್ಥರ ಒಗ್ಗಟ್ಟುನಿಂದ ವಿಶೇಷವಾಗಿ ಆಚರಣೆ ಮಾಡುತ್ತಾರೆ.

ಮಹದೇವಪುರ ಗ್ರಾಮದ ಹುಟ್ಟಿದ ಮೋಹನ್ ಕೃಷ್ಣ ಇವರು ವಿದ್ಯಾಭ್ಯಾಸದ ನಂತರ ಬೆಂಗಳೂರಿನಲ್ಲಿ ತನ್ನದೇ ಆದ ಸ್ವಂತ ಕಚೇರಿಯನ್ನು ಹೊಂದಿದ್ದಾರೆ. ರಿಯಲ್ ಎಸ್ಟೇಟ್ ವ್ಯಾಪಾರ ಮಾಡಿಕೊಂಡು ಬೆಳೆದುಕೊಂಡು ತಮ್ಮ ಕೇತ್ರದಲ್ಲಿ ಸೇವೆ ಮಾಡಬೇಕೆಂಬ ಕನಸು ಕಂಡಿದ್ದಾರೆ. ಅವರ ಪರವಾಗಿ ಗ್ರಾಮಸ್ಥರು ಎಲ್ಲಾರೂ ನಿಂತಿದ್ದಾರೆ.

ದೇವರಿಗೆ ಒಂದು ಭಾಗ

ಪ್ರಸನ್ನ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವರ ಆಶೀರ್ವಾದದಿಂದ ನಮ್ಮ ಗ್ರಾಮದಲ್ಲಿ ಎಲ್ಲಾ ಕುಟುಂಬಗಳು ಉತ್ತಮ ಜೀವನ ಮಾಡುತ್ತಿದ್ದಾರೆ. ಭಗವಂತನ ಕೃಪೆಯಿಂದ ಇತ್ತೀಚಿನ ದಿನಗಳಲ್ಲಿ ನಮ್ಮ ಗ್ರಾಮದ ಸಾಕಷ್ಟು ಮಂದಿ ಶ್ರೀಮಂತರಾಗಿದ್ದಾರೆ. ಇದೆಲ್ಲಾ ಭಗವಂತನ ಕೃಪೆಯೇ ಆಗಿರುವುದರಿಂದ ಈಗ ನಮ್ಮ ಸಂಪಾದನೆಯಲ್ಲಿ ಒಂದು ಭಾಗದಷ್ಟು ದೇವರಿಗಾಗಿ ಮೀಸಲಿಡಲು ನಿರ್ಧರಿಸಿ ದೇವಾಲಯ ಅಭಿವೃದ್ಧಿಯನ್ನು ಮಾಡಿದ್ದೇವೆ.

ಮೋಹನ್ ಕೃಷ್ಣ ವಿ., ಸಮಾಜ ಸೇವಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT