ಮುಳಬಾಗಿಲು: ತಾಲ್ಲೂಕಿನ ಚೆಲುವನಾಯಕನಹಳ್ಳಿ ಸಮೀಪದ ಜಲ್ಲನ ಕೆರೆಯಲ್ಲಿ ಅಕ್ರಮ ಫಿಲ್ಟರ್ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಇದರಿಂದ ಕೆರೆ ಮತ್ತು ಕೆರೆಗೆ ಹೊಂದಿಕೊಂಡಿರುವಂತೆ ಬೋಡಿಗುಟ್ಟೆ ಬೆಟ್ಟಕ್ಕೆ ಕುತ್ತು ಎದುರಾಗಿದೆ.

ಮುಳಬಾಗಿಲು ನಗರದಿಂದ ಗೂಕುಂಟೆ ಮಾರ್ಗವಾಗಿ ಸಾಗುವ ಹಾಗೂ ಮುಳಬಾಗಿಲು ನಗರಕ್ಕೆ ಕೇವಲ 2-3 ಕಿಲೋಮೀಟರ್ ಅಂತರದಲ್ಲಿರುವ ಹಾಗೂ ಗ್ರಾಮಾಂತರ ಪೊಲೀಸ್ ವ್ಯಾಪ್ತಿಗೆ ಒಳ ಪಟ್ಟಿರುವ ಚಲುವನಾಯಕನಹಳ್ಳಿ ಸಮೀಪದ ಜಲ್ಲನ ಕೆರೆಯಲ್ಲಿ ಫಿಲ್ಟರ್ ಮರಳು ದಂಧೆಕೋರರು ಇಡೀ ಕೆರೆಯಲ್ಲಿನ ಮಣ್ಣು ಹಾಗೂ ಮರಳನ್ನು ಕೆರೆಯ ನೀರಿನಲ್ಲೇ ಫಿಲ್ಟರ್ ಮಾಡಿ ಮುಳಬಾಗಿಲು ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಜೆಸಿಬಿ ಹಾಗೂ ಟ್ರ್ಯಾಕ್ಟರ್ನಿಂದ ಸಾಗಿಸುತ್ತಿದ್ದಾರೆ.

ಕೆರೆಯ ನೀರನ್ನು ಡೀಸೆಲ್, ಪೆಟ್ರೋಲ್ ಎಂಜಿನ್ ಮೂಲಕ ನೀರು ಪೂರೈಕೆ ಮಾಡಿಕೊಂಡು ರಾತ್ರಿ ಪೂರ್ತಿ ಫಿಲ್ಟರ್ ಮಾಡಿ ಮುಂಜಾನೆ ಹೊತ್ತಿಗೆ ಮರಳು ಸಾಗಟ ಪೂರ್ಣಗೊಳಿಸಿರುತ್ತಾರೆ. ಇದರಿಂದ ಇಡೀ ಕೆರೆ ಸಂಪೂರ್ಣವಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದ್ದು, ಭಾರೀ ಗಾತ್ರದ ಹಳ್ಳ ದಿನ್ನೆಗಳಿಂದ ಕೂಡಿದೆ.

ಫಿಲ್ಟರ್ ಮರಳು ತಯಾರು ಮಾಡಬಾರದು ಎಂಬ ಕಠಿಣ ನಿಯಮವಿದೆ. ಫಿಲ್ಟರ್ ಅಡ್ಡೆಗೆ ಕೆರೆಯ ನೀರು ಬಳಸುತ್ತಿರುವುದೂ ಸಹ ಅಪರಾಧವಾಗಿದೆ. ಆದರೆ ಆದೇಶ ಹಾಗೂ ಕಾನೂನುಗಳನ್ನು ಗಾಳಿಗೆ ತೂರಿ ಇಲ್ಲಿನ ಬಲಾಡ್ಯರು ಯಾವುದೇ ಭಯ ಇಲ್ಲದೆ ಮರಳು ದಂಧೆ ನಡೆಸುತ್ತಿದ್ದಾರೆ. ಈ ಅಕ್ರಮ ನೆನ್ನೆ, ಮೊನ್ನೆಯದ್ದಲ್ಲ, ಸುಮಾರು ವರ್ಷಗಳಿಂದಲೂ ನಡೆಯುತ್ತಿದೆ. ಇದಕ್ಕಾಗಿ ಕೆರೆಯನ್ನೇ ಬಲಿ ಪಡೆದಿದ್ದಾರೆ. ಈ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದರೂ ಯಾವುದೇ ಅಧಿಕಾರಿಗಳು ತಮಗೆ ಇದಕ್ಕೂ ಏನು ಸಂಬಂಧ ಇಲ್ಲ ಎಂಬಂತೆ ಜಾಣ ಮೌನವಹಿಸಿದ್ದಾರೆ.

ಮರಳು ಗಣಿಗಾರಿಕೆಯಿಂದ ಜನ ಮತ್ತು ಜಾನುವಾರುಗಳಿಗೆ ಕೆರೆಯ ನೀರು ಬಳಕೆಗೆ ಬಾರದಂತೆ ಆಗಿದೆ.

ಕೆರೆಗೆ ಹೊಂದಿಕೊಂಡಂತೆ ಇರುವ ಬೋಡಿಗುಟ್ಟೆದ ಸುತ್ತಲೂ ಇರುವ ಮಣ್ಣನ್ನು ಜೆಸಿಬಿಗಳಿಂದ ಕೊರೆದು ತೆಗೆದು ಗುಟ್ಟೆಯ ಮಣ್ಣನ್ನೂ ಫಿಲ್ಟರ್ ಮಾಡುತ್ತಿರುವುದು ದಂಧೆಕೋರರ ಅಟ್ಟಹಾಸಕ್ಕೆ ಉದಾಹರಣೆಯಾಗಿದೆ.

ಕೆರೆಯಲ್ಲಿ ಮೂರು ಕಡೆ ಫಿಲ್ಟರ್ ಗುಂಡಿ ನಿರ್ಮಿಸಿಕೊಂಡು ಮಣ್ಣನ್ನು ತೊಳೆದು, ತೊಳೆದ ಮಣ್ಣನ್ನು ಪುನಃ ಕೆರೆಯ ನೀರಿನಲ್ಲಿ ಬಿಡುತ್ತಾ, ಫಿಲ್ಟರ್ ಮಾಡಿದ ಮೇಲೆ ಕಬ್ಬಿಣದ ಜಲ್ಲಡಿಗಳ ಮೂಲಕ ಕಸ ಕಡ್ಡಿ ಹಾಗೂ ಕಲ್ಲುಗಳನ್ನು ಬೇರ್ಪಡಿಸುತ್ತಾ ಒಂದು ದಿನಕ್ಕೆ ಸುಮಾರು 9-10 ಲೋಡುಗಳಷ್ಟು ಫಿಲ್ಟರ್ ಮರಳನ್ನು ಮಾರಾಟ ಮಾಡಲಾಗುತ್ತದೆ ಎಂದು ಸ್ಥಳೀಯರು ಹೇಳಿದರು.

ಕರಗುತ್ತಿದೆ ಬೋಡಿಗುಟ್ಟೆ ಫಿಲ್ಟರ್

ಮರಳು ದಂಧೆಯಿಂದ ಕೆರೆಗೆ ಹೊಂದಿಕೊಂಡಂತೆ ಮಣ್ಣಿನ ಬೋಡಿಗುಟ್ಟೆ ಕರುಗುತ್ತಿದೆ. ಬೆಟ್ಟದ ಸುತ್ತಲೂ ಜೆಸಿಬಿ ಮತ್ತಿತರ ಭಾರೀ ಯಂತ್ರದ ಮೂಲಕ ಗಣಿಗಾರಿಕೆ ಮಾಡಲಾಗುತ್ತಿದೆ. ಇದರಿಂದ ಬೆಟ್ಟ ದಿನದಿನೇ ತನ್ನ ರೂಪ ಕಳೆದುಳ್ಳುತ್ತಿದೆ. ಇದು ಗೂಕುಂಟೆ ಹಾಗೂ ಮುಳಬಾಗಿಲು ಕಡೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಎಲ್ಲಾ ಜನ ಪ್ರತಿನಿಧಿಗಳಿಗೂ ಹಾಗೂ ಅಧಿಕಾರಿಗಳಿಗೂ ಕಾಣಿಸುತ್ತಿದ್ದರೂ ಯಾರೂ ಕ್ರಮ ಕೈಗೊಳ್ಳುತ್ತಿದೆ ಎಂದು ಸ್ಥಳೀಯರು ದೂರಿದರು. ಕೊಳವೆ ಬಾವಿಗಳು ದುಸ್ಥಿತಿ ಇದೇ ಕೆರೆಯಿಂದ ಮುಳಬಾಗಿಲು ನಗರಕ್ಕೆ ಕುಡಿಯುವ ನೀರಿನ ಸರಬರಾಜಿಗಾಗಿ ಸುಮಾರು ಆರುಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಸಲಾಗಿದೆ. ಫಿಲ್ಟರ್ ಮರಳು ದಂಧೆಕೋರರು ಕೊಳವೆ ಬಾವಿ ಸುತ್ತಲೂ ಇರುವ ಮಣ್ಣು ಹಾಗೂ ಮರಳನ್ನು ತೆಗೆದಿರುವುದರಿಂದ ಕೊಳಚೆ ಬಾವಿ ಸುತ್ತ ಕುಸಿತ ಉಂಟಾಗಿದೆ. ಕೊಳವೆ ಬಾವಿಗಳು ಕುಸಿಯುವ ಸ್ಥಿತಿಯಲ್ಲಿವೆ. ಪೊಲೀಸ್ ಕಂದಾಯ ಅಧಿಕಾರಿಗಳ ಬೆಂಬಲ ಅಕ್ರಮ ಮರಳು ದಂಧೆಗೆ ಕೆಲವು ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳೇ ಬೆಂಬಲವಾಗಿ ನಿಂತಿದ್ದಾರೆ. ಫಿಲ್ಟರ್ ಮರಳು ದಂಧೆಯನ್ನು ಧೈರ್ಯವಾಗಿ ಮಾಡಲು ಕೆಲವು ಅಧಿಕಾರಿಗಳೇ ಕಾರಣ ಎಂದು ಹೆಸರು ಹೇಳಲು ಇಚ್ಚಿಸದ ಕೆಲವು ಸ್ಥಳೀಯರು ಆರೋಪಿಸಿದರು. ಶಾಶ್ವತವಾಗಿ ಬಂದ್ ಮಾಡಿ ಬರಗಾಲದ ತಾಲ್ಲೂಕು ಎಂಬ ಹಣೆ ಪಟ್ಟಿ ಹೊತ್ತಿರುವ ಮುಳವಾಗಿಲಿನಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆ. ಹೀಗಾಗಿ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಇಂತಹ ಸಮಯದಲ್ಲಿ ಕೆರೆಗಳನ್ನು ಕಾಪಾಡಿ ಅಂತರ್ಜಲ ಹೆಚ್ಚಿಸಲು ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಫಿಲ್ಟರ್ ಮರಳು ದಂಧೆ ಶಾಶ್ವತವಾಗಿ ನಿಲ್ಲಿಸಬೇಕು ಮಂಜುನಾಥ್ ಸ್ಥಳೀಯರ

ಅಕ್ರಮ ಫಿಲ್ಟರ್ ಮರಳು ದಂಧೆ ನಡೆಯುತ್ತಿರುವ ಸ್ಥಳಕ್ಕೆ ಕೂಡಲೇ ರಾಜಸ್ವ ನಿರೀಕ್ಷಕರನ್ನು ಕಳುಹಿಸಿ ದಂಧೆಯನ್ನು ತಡೆಯಲಾಗುವುದು. ದಂಧೆಕೋರರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುವುದು.
ವಿ.ಗೀತಾ, ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.