ಕೋಲಾರ: ₹13.16 ಲಕ್ಷ ಮೌಲ್ಯದ 720 ಚೀಲ ಬೇವು ಲೇಪಿತ ಯೂರಿಯಾ ರಸಗೊಬ್ಬರವನ್ನು ನಕಲಿ ದಾಖಲೆ ಸೃಷ್ಟಿಸಿ ಕಾರ್ಖಾನೆಗಳಲ್ಲಿ ಬಳಸಲು ಬಳ್ಳಾರಿ ಜಿಲ್ಲೆಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ಮಾಲೂರು-ಹೊಸಕೋಟೆ ರಸ್ತೆಯ ಚೊಕ್ಕಂಡಹಳ್ಳಿ ಗ್ರಾಮದ ಬಳಿ ಜಪ್ತಿ ಮಾಡಲಾಗಿದೆ.

ರಸಗೊಬ್ಬರ ನಿಯಂತ್ರಣ ಆದೇಶ ಹಾಗೂ ಅಗತ್ಯ ವಸ್ತುಗಳ ಅಧಿನಿಯಮದಡಿ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಾಣಿಜ್ಯ ತೆರಿಗೆ ಅಧಿಕಾರಿಗಳು ರಸ್ತೆ ಜಾಗೃತಿ ಕಾರ್ಯ ನಿರ್ವಹಿಸುತ್ತಿರುವ ಸಮಯದಲ್ಲಿ ಸರಕು ವಾಹನ ಸಂಖ್ಯೆ ಕೆ.ಎ 34 ಸಿ 6477 ಅನ್ನು ತಡೆದು ತಪಾಸಣೆ ಮಾಡಿದಾಗ ವಿಚಾರ ಗೊತ್ತಾಗಿದೆ. ವಾಹನದ ಚಾಲಕ ತೋರಿಸಿದ ಟ್ಯಾಕ್ಸ್ ಇನ್ವಾಯ್ಸ್ ಮತ್ತು ಇ-ವೇ ಬಿಲ್ಲಿನಲ್ಲಿ ನಮೂದಿಸಿದ್ದ ಸರಕಿಗೂ ಹಾಗೂ ವಾಹನದಲ್ಲಿದ್ದ ಸರಕಿಗೂ ವ್ಯತ್ಯಾಸ ಕಂಡು ಬಂದಿದೆ. ವಾಹನವನ್ನು ವಶಕ್ಕೆ ಪಡೆದು, ವಾಹನದಲ್ಲಿದ್ದ ಸರಕನ್ನು ಪರಿಶೀಲಿಸಿದಾಗ ವಾಸ್ತವವಾಗಿ ವಾಹನದಲ್ಲಿ ರಿಯಾಯಿತಿ ದರದ ₹ 13,16,340 ಮೌಲ್ಯದ 720 ಚೀಲಗಳು ಬೇವು ಲೇಪಿತ ಯೂರಿಯಾ ರಸಗೊಬ್ಬರ ಕಂಡುಬಂದಿದೆ. ಈ ವಾಹನದಲ್ಲಿದ್ದ ರಸಗೊಬ್ಬರವನ್ನು ಅಗತ್ಯ ವಸ್ತುಗಳ ಅಧಿನಿಯಮದಡಿ ಕಾನೂನು ಕ್ರಮ ಕೈಗೊಳ್ಳಲು ಕೃಷಿ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಕೃಷಿ ಇಲಾಖೆಯ ಅಧಿಕಾರಿಗಳು ವಾಹನ ಹಾಗೂ ಯೂರಿಯಾ ರಸಗೊಬ್ಬರವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.

ಬೇವು ಲೇಪಿತ ಯೂರಿಯಾ ರಸಗೊಬ್ಬರವನ್ನು ಹೊರ ರಾಜ್ಯಗಳಿಗೆ ಮತ್ತು ಹೊರ ಜಿಲ್ಲೆಗಳಿಗೆ ಸಾಗಣೆ ಮಾಡುವುದು ನಿಷೇಧವಿದೆ. ಕೃಷಿ ಬಳಕೆಯ ಯೂರಿಯ ರಸಗೊಬ್ಬರವನ್ನು ಕೃಷಿಯೇತರ ಚಟುವಟಿಕೆಗಳಿಗೆ ಕಾರ್ಖಾನೆಗಳಿಗೆ ಬಳಸುವ ಉದ್ದೇಶದಿಂದ ಸಾಗಣೆ ಮಾಡುತ್ತಿರುವುದು ದೃಢಪಟ್ಟಿದೆ. ಜಿಲ್ಲಾಧಿಕಾರಿಯ ಅನುಮತಿಯಂತೆ ರಸಗೊಬ್ಬರ ನಿಯಂತ್ರಣ ಆದೇಶ 1985 ಮತ್ತು ಅಗತ್ಯ ವಸ್ತುಗಳ ಕಾಯ್ದೆ 1985 ರಡಿ ಮಾಲೂರು ಪೊಲೀಸ್ ಠಾಣೆಯಲ್ಲಿ ಲಾರಿಯ ಮಾಲೀಕ, ಲಾರಿಯ ಚಾಲಕ, ಸರಬರಾಜುದಾರರ (ಗ್ರ್ಯಾಂಡ್ ಎಂಟರ್ಪ್ರೈಸಸ್, ಎರ್ನಾಕುಲಂ, ಕೇರಳ) ಹಾಗೂ ಖರೀದಿದಾರರು (ಐಎನ್ಎ ಇಂಡಿಯಾ ಲಿಮಿಟೆಡ್, ಇಂಡಸ್ಟ್ರಿಯಲ್ ಏರಿಯಾ ಚೊಕ್ಕಂಡಹಳ್ಳಿ, ಹೊಸಕೋಟೆ) ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

ದಾಳಿಯಲ್ಲಿ ವಾಣಿಜ್ಯ ತೆರಿಗೆ ಡೆಪ್ಯುಟಿ ಕಮಿಷನರ್ ರಘುನಾಥಗೌಡ, ಜಂಟಿ ಕೃಷಿ ನಿರ್ದೇಶಕಿ ಎಂ.ಆರ್. ಸುಮಾ , ಕೋಲಾರದ ಸಹಾಯಕ ಕಮಿಷನರ್ ದಯಾನಂದ್, ವಾಣಿಜ್ಯ ತೆರಿಗೆ ಅಧಿಕಾರಿ(ಜಾರಿ-2) ಜೀವನ್ ಮತ್ತು ಸಹಾಯಕ ಕೃಷಿ ನಿರ್ದೇಶಕ (ಜಾರಿದಳ) ಮುರಳೀಧರ.ಎಂ ಇದ್ದರು.

ಕಾರ್ಖಾನೆಗಳಲ್ಲಿ ಬಳಸಲು ನಕಲಿ ದಾಖಲೆ ಸೃಷ್ಟಿ ಲಾರಿ ಮಾಲೀಕ, ಚಾಲಕ, ಸರಬರಾಜುದಾರರ, ಖರೀದಿದಾರರ ಮೇಲೆ ಎಫ್ಐಆರ್ ವಾಣಿಜ್ಯ ತೆರಿಗೆ ಅಧಿಕಾರಿ, ಕೃಷಿ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.