ಸೋಮವಾರ, ಏಪ್ರಿಲ್ 6, 2020
19 °C

ಮೊಬೈಲ್: ಆರೋಗ್ಯದ ಮೇಲೆ ಪರಿಣಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಆನ್ವಿ ಹಿಯರಿಂಗ್ ಸೊಲ್ಯೂಷನ್ಸ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಶ್ರವಣ ದೋಷ ಚಿಕಿತ್ಸಾ ಶಿಬಿರದಲ್ಲಿ 150ಕ್ಕೂ ಹೆಚ್ಚು ಮಂದಿ ತಪಾಸಣೆ ಮಾಡಿಸಿಕೊಂಡರು.

ನಗರ ಸೇರಿದಂತೆ ಜಿಲ್ಲೆಯ ಶ್ರೀನಿವಾಸಪುರ, ಬಂಗಾರಪೇಟೆ, ಮಾಲೂರು ಹಾಗೂ ಮುಳಬಾಗಿಲು ತಾಲ್ಲೂಕುಗಳಿಂದ ಶ್ರವಣ ದೋಷವುಳ್ಳವರು ಅಗಮಿಸಿ ಶಿಬಿರದಲ್ಲಿ ತಪಾಸಣೆ ಮಾಡಿಸಿಕೊಂಡರು.

ವೃದ್ದರು, ಮಹಿಳೆಯರು ಅಲ್ಲದೆ ಮಕ್ಕಳು ಪಾಲ್ಗೊಂಡು ಚಿಕಿತ್ಸೆ ಶ್ರವಣ ದೋಷದ ಬಗ್ಗೆ ಯಂತ್ರೋಪಕರಣಗಳಿಂದ ತಪಾಸಣೆ ಮಾಡಿಸಿಕೊಂಡರು. ಕೆಲವರಿಗೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಶಾಖೆಗೆ ಬರಲು ತಜ್ಞರು ಸೂಚಿಸಿದರು. ಅಗತ್ಯವಾದ ಉಪಕರಣೆಗಳನ್ನು ರಿಯಾಯಿತಿ ದರದಲ್ಲಿ ನೀಡಿದರು.

ಶಿಬಿರಕ್ಕೆ ಚಾಲನೆ ನೀಡಿದ ರಾಜ್ಯ ಸರಕು ಮತ್ತು ಖರೀದಿದಾರರ ಸಹಕಾರ ಸಂಘದ ನಿರ್ದೇಶಕ ವಿ.ಮುನಿರಾಜು ಮಾತನಾಡಿ, ‘ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರಿಂದ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ’ ಎಂದು ತಿಳಿಸಿದರು.

‘ಹುಟ್ಟು ಕಿವುಡರಿಗಿಂತ ಮೊಬೈಲ್ ಬಳಕೆಯಿಂದ ಕಿವುಡರ ಸಂಖ್ಯೆ ಹೆಚ್ಚಾಗುತ್ತಿದೆ. ಅತಿಯಾದ ಬಳಕೆಯಿಂದ ಚಿಕ್ಕ ವಯಸ್ಸಿಗೆ ಕಿವುಡರಾಗುತ್ತಿದ್ದಾರೆ. ಅಗತ್ಯ ಮೀರಿ ಬಳಕೆ ಮಾಡುವುದು ಸೂಕ್ತವಲ್ಲ’ ಎಂದರು.

ಶಿಬಿರದಲ್ಲಿ ಶ್ರವಣ ದೋಷ ತಜ್ಞ ಡಾ.ನಿರಂಜನ್, ತಾಂತ್ರಿಕ ತಜ್ಞರಾದ ಯಶಸ್ವಿನಿ, ನೀತೂ, ಪರಾಕ್ಷ ತಪಾಸಣೆ ನಡೆಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು