ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಿಲು ಬಳಿ ಕೈಗಾರಿಕಾ ಪ್ರದೇಶ ವೀಕ್ಷಣೆ

Last Updated 1 ಅಕ್ಟೋಬರ್ 2020, 8:26 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ – 75ರ ಕಮ್ಮದಟ್ಟಿ ಕಾಮನೂರು ಗೇಟ್‌ನಿಂದ ಕುರುಬರಹಳ್ಳಿ ಗೇಟ್‌ವರೆಗಿನ ಸುಮಾರು 1,599 ಎಕರೆ ಪ್ರದೇಶವನ್ನು ಕೈಗಾರಿಕಾ ವಲಯಕ್ಕೆ ಗುರುತಿಸುವ ಸಂಬಂಧ ಕೆಐಎಡಿಬಿ ಜಿಲ್ಲಾ ಅಧಿಕಾರಿ ಅನುರಾಧಾಹಾಗೂ ಉಪವಿಭಾಗಾಧಿಕಾರಿ ಸೋಮಶೇಖರ್ ಮತ್ತಿತರ ಅಧಿಕಾರಿಗಳೊಂದಿಗೆ ಅಬಕಾರಿ ಸಚಿವ ಎಚ್.ನಾಗೇಶ್ ಮಂಗಳವಾರ ಸಂಜೆ ಪರಿಶೀಲನೆ ಮಾಡಿದರು.

ನಂತರ ಮಾತನಾಡಿದ ಅವರು ‘ನೀರಿನ ಅಭಾವದಿಂದ ಕೈಗಾರಿಕಾ ಪ್ರದೇಶ ನಿರ್ಮಾಣ ಸಾಧ್ಯವಾಗಿರಲಿಲ್ಲ. ಕೆಸಿ ವ್ಯಾಲಿ ನೀರು ಈ ಭಾಗದಲ್ಲಿ ಕೆರೆಗಳಿಗೆ ಹರಿಯುವುದರಿಂದ ಮತ್ತೆ ನನೆಗುದಿಗೆ ಬಿದ್ದಿದ್ದ ಕಡತಕ್ಕೆ ಮರುಜೀವ ನೀಡಲಾಗುತ್ತಿದ್ದು, ಸರ್ಕಾರದ ಮಟ್ಟದಲ್ಲಿ ಅನುಮೋದನೆ ಪಡೆದು ಕೈಗಾರಿಕಾ ವಲಯ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೊಗ ಅವಕಾಶ ಸಿಗುವುದು’ ಎಂದರು.

‘ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ 200 ಮೀಟರ್‌ಗಳಷ್ಟು ಭೂ ಪ್ರದೇಶವನ್ನು ಕೈಗಾರಿಕಾ ವಲಯಕ್ಕೆ ಮೀಸಲಿಡಲಾಗಿದೆ. ಅದಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ನೀಡಲಾಗುವುದು. ಕೈಗಾರಿಕಾ ವಲಯಕ್ಕೆ ಗುರುತಿಸಲಾಗಿರುವ ಪ್ರದೇಶದಲ್ಲಿ ಆರು ಗ್ರಾಮಗಳ ರೈತರ ಜಮೀನುಗಳು ಬರಲಿದ್ದು ಅವರಿಗೂ ಸಹ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಕಲ್ಪಿಸಲಾಗುವುದು’ ಎಂದರು.

ಕೆಯುಡಿಬಿ ಅಧಿಕಾರಿ ವೆಂಕಟೇಶ್, ತಹಶೀಲ್ದಾರ್ ಕೆ.ಎನ್.ರಾಜಶೇಖರ್, ಕಂದಾಯ ನಿರೀಕ್ಷಕ ಸಿ.ಸುಬ್ರಮಣ್ಯಂ, ಮಾನಸ, ಕಿರಣ್‌‌ ಗಿರೀಶ್‌ ಗೌಡ, ದರಕಾಸ್ತು ಸಮಿತಿ ಸದಸ್ಯ ಪೆದ್ದಪ್ಪಯ್ಯ ರಾಜ್ಯ ಕುಕ್ಕಟ ಮಂಡಳಿ ಮಾಜಿ ಅಧ್ಯಕ್ಷ ಬಿ.ಕೆ.ವೆಂಕಟನಾರಾಯಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT