ಬಂಗಾರಪೇಟೆ: ‘ಇನ್ನು ಮುಂದೆ ಎಂದಿಗೂ ವೃಷಭಾವತಿ ಕಾಮಸಮುದ್ರ ಕೆರೆ ಖಾಲಿಯಾಗುವುದಿಲ್ಲ. ಕೆ.ಸಿ.ವ್ಯಾಲಿ ನೀರು ಸದಾ ಹರಿಯಲಿದೆ’ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ತಾಲ್ಲೂಕಿನ ಕಾಮಸಮುದ್ರ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿ, 'ಅಧಿಕಾರಿಗಳೊಂದಿಗೆ ಚರ್ಚಿಸಿ ವೃಷಭಾವತಿ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆಯಲು ಅನುವು ಮಾಡಿಕೊಡುತ್ತೇನೆ' ಎಂದರು.

‘ಇಲ್ಲಿಂದ ತಮಿಳುನಾಡಿಗೆ ವ್ಯರ್ಥವಾಗಿ ಹರಿಯುತ್ತಿರುವ ನೀರಿಗೆ ಚಾಮನಹಳ್ಳಿ ಬಳಿ ಚೆಕ್ಡ್ಯಾಂ ನಿರ್ಮಿಸಿ, ಅಲ್ಲಿಂದ ಯರಗೋಳ್ ಡ್ಯಾಂಗೆ ಸಂಪರ್ಕ ಕಲ್ಪಿಸುವ ಬಗ್ಗೆ ಇಲ್ಲಿನ ಮುಖಂಡರು ಸಲಹೆ ನೀಡಿದ್ದಾರೆ. ಎಂಜಿನಿಯರ್ಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಪಂಚಾಯಿತಿ ವತಿಯಿಂದ ನರೇಗಾದಡಿ ಆದಿನಾರಾಯಣಕುಟ್ಟಿ ಅವರು ಕೆರೆ ಸಮೀಪ ನಿರ್ಮಿಸಿರುವ ರಸ್ತೆ ಗುಣಮಟ್ಟದಾಗಿದೆ ಎಂದರು.

ಬೆಳೆನಷ್ಟ ವೀಕ್ಷೆಣೆಗೆ ಮುಖ್ಯಮಂತ್ರಿಗಳು ಕೋಲಾರಕ್ಕೆ ಭೇಟಿ ನೀಡಿದ್ದಾರೆ. ಶಾಸಕರಿಗೆ ಆಹ್ವಾನ ಕೊಟ್ಟಿಲ್ಲ. ಅದು ಕೋಲಾರಕ್ಕೆ ಮಾತ್ರ ಭೇಟಿ ನೀಡಿದ್ದಾರೆ. ಬಂಗಾರಪೇಟೆ ತಾಲ್ಲೂಕಿನಲ್ಲಿ ನಷ್ಟ ಆಗಿಲ್ಲವೇ ಎಂದು ಪ್ರಶ್ನಿಸಿದರು.

ಬಂಗಾರಪೇಟೆ ತಾಲ್ಲೂಕಿನಲ್ಲಿ ಸತತ ಮಳೆಯಿಂದಾಗಿ ಅಂದಾಜು ₹60ರಿಂದ ₹70 ಕೋಟಿ ನಷ್ಟ ಆಗಿದೆ. ಅವರು ಇಲ್ಲಿಗೆ ಬರದಿದ್ದರೂ ಪ್ರತೇಕವಾಗಿ ಅವರನ್ನು ಭೇಟಿ ಮಾಡಿ,ನಷ್ಟ ಪರಿಹಾರಕ್ಕೆ ಒತ್ತಾಯಿಸಲಾಗುವುದು ಎಂದರು.

ಸತತ ಮಳೆಯಿಂದಾಗಿ ಅನೇಕರು ಮನೆ, ಬೆಳೆ ಕಳೆದುಕೊಂಡಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಕನಿಷ್ಠ ವಸತಿ ಸೇರಿದಂತೆ ಯಾವುದೇ ಅನುಕೂಲ ಮಾಡಿಲ್ಲ. ಈ ಬಗ್ಗೆ ಮುಂದಿನ ವಿಧಾನಸಭೆ ಸಮಾವೇಶದಲ್ಲಿ ಧ್ವನಿ ಎತ್ತಲಾಗುವುದು ಎಂದರು.

ಕಾಮಸಮುದ್ರ ಪಂಚಾಯಿತಿ ಅಧ್ಯಕ್ಷ ಆದಿನಾರಾಯಣಕುಟ್ಟಿ, ಉಪಾಧ್ಯಕ್ಷ ರಮೇಶಾಚಾರಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದರಾಜಲು, ಅಜ್ಮುತ್ತುಲ್ಲ, ರಂಗಾಚಾರಿ, ಜಿ.ವಿ.ಶ್ರೀನಿವಾಸಮೂರ್ತಿ, ಜಿ.ಎಂ.ಶ್ರೀನಿವಾಸಮೂರ್ತಿ, ನಾಗರಾಜ್, ಶಶಿಧರ ರೆಡ್ಡಿ, ಜೆಸಿಬಿ ನಾರಾಯಣಪ್ಪ, ಲಕ್ಷ್ಮೀನಾರಾಯಣ ಪ್ರಸಾದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.