ಶನಿವಾರ, ನವೆಂಬರ್ 28, 2020
22 °C

ಬಂಗಾರಪೇಟೆ: ಜಮೀನು ದಾಖಲೆ ನೀಡಲು ಮನವಿ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಗಾರಪೇಟೆ: ತಾಲ್ಲೂಕು ಆಡಳಿತ ಮಂಜೂರು ಮಾಡಿರುವ ತಳಾರಿ ನೌಕರಿ ಇನಾಂತಿ ಜಮೀನಿನ ದಾಖಲೆ ನೀಡದೆ ಅಲೆದಾಡಿಸಲಾಗುತ್ತಿದೆ ಎಂದು ತಾಲ್ಲೂಕಿನ ಕಸಬಾ ಹೋಬಳಿ ಮುಗಿಲಬೆಲೆ ಗ್ರಾಮದ ದೊಡ್ಡಕೃಷ್ಣಪ್ಪ ಮತ್ತು ರಾಮಕೃಷ್ಣಪ್ಪ
ದೂರಿದ್ದಾರೆ. 

ಈ ಸಂಬಂಧ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ನಡೆದ ಪಿಂಚಣಿ ಹಾಗೂ ಕಂದಾಯ ಅದಾಲತ್‌ನಲ್ಲಿ ಅವರು ಉಪ ವಿಭಾಗಾಧಿಕಾರಿ ವಿ. ಸೋಮಶೇಖರ್‌ ಅವರಿಗೆ ಮನವಿ ಸಲ್ಲಿಸಿದರು.

‘ಈ ಹಿಂದೆ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬಿ.ಕೆ. ಚಂದ್ರಮೌಳೇಶ್ವರ ನಮಗೆ ಜಮೀನು ಮಂಜೂರು ಮಾಡಿದ್ದರು. ಅವರ ಕೊಲೆಯಾದ ಬಳಿಕ ಬಂಗಾರಪೇಟೆ ತಹಶೀಲ್ದಾರ್ ಆಗಿ ಪ್ರಭಾರವಹಿಸಿಕೊಂಡಿದ್ದ ಕೆಜಿಎಫ್ ತಹಶೀಲ್ದಾರ್ ಕೆ. ರಮೇಶ್ ಅವರು ಹಿಂದಿನ ತಹಶೀಲ್ದಾರ್ ಆದೇಶದಂತೆ ಪಹಣಿಯಲ್ಲಿ ಹೆಸರು ನಮೂದಿಸಿ ಎಂದು ಆದೇಶ ಮಾಡಿದ್ದರು. ಕೂಡಲೇ ದಾಖಲೆ ಪತ್ರ ನೀಡಬೇಕು ಎಂದು ಕೋರಿದರು.

ಮನವಿ ಸ್ವೀಕರಿಸಿದ ಉಪ ವಿಭಾಗಾಧಿಕಾರಿ ಅವರು, ದಾಖಲೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ತಹಶೀಲ್ದಾರ್ ದಯಾನಂದ್ ಅವರಿಗೆ ಸೂಚಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.