ಕೆಜಿಎಫ್: ಜಿಲ್ಲಾಧಿಕಾರಿ ಎಂ.ಆರ್.ರವಿ ಭಾನುವಾರ ಬೆಳ್ಳಂಬೆಳಿಗ್ಗೆ ಸೈಕಲ್ನಲ್ಲಿ ನಗರಸಭೆ ಅಧಿಕಾರಿಗಳೊಂದಿಗೆ ನಗರದಲ್ಲಿ ಜಾಥ ನಡೆಸಿ, ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು.

ರಾಬರ್ಟಸನ್ಪೇಟೆಯ ಸೂರಜ್ಮಲ್ ವೃತ್ತದಿಂದ ಜಾಥ ಪ್ರಾರಂಭಿಸಿದ ಅವರು, ಮೊದಲು ಕಿಂಗ್ ಎಡ್ವರ್ಡ್ ಹಾಲ್ ಉದ್ಯಾನಕ್ಕೆ ಭೇಟಿ ನೀಡಿದರು. ಆ ಉದ್ಯಾನದ ಅವ್ಯವಸ್ಥೆ ಕಂಡು ಗರಂ ಆದರು. ನಗರದ ಮಧ್ಯಭಾಗದಲ್ಲಿರುವ ಉದ್ಯಾನದ ಸ್ವಚ್ಛತೆ ಕಾಪಾಡಲು ಸಾಧ್ಯವಾಗಿಲ್ಲವಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಉದ್ಯಾನದಲ್ಲಿ ಬಳಕೆಯಲ್ಲಿ ಇಲ್ಲದ ಶೌಚಾಲಯವನ್ನು ಸುಪರ್ದಿಗೆ ಪಡೆದು, ಅದನ್ನು ಸಾರ್ವಜನಿಕ ಸೇವೆಗೆ ನೀಡಬೇಕು. ಉದ್ಯಾನದ ಮಧ್ಯದಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬವನ್ನು ಸ್ಥಳಾಂತರಿಸಬೇಕೆಂದು ತಾಕೀತು ಮಾಡಿದರು.

ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಪಕ್ಕದಲ್ಲಿರುವ ಕೇಂದ್ರ ಸರ್ಕಾರಕ್ಕೆ ಸೇರಿದ ಖಾಲಿ ಜಾಗದಲ್ಲಿ ಕಸದ ರಾಶಿಯನ್ನು ಗಮನಿಸಿದ ಅವರು ಆರೋಗ್ಯ ನಿರೀಕ್ಷಕಿ ಗೌರಿ ಮತ್ತು ಮೇಸ್ತ್ರಿ ರಾಮು ಅವರನ್ನು ತರಾಟೆಗೆ ತೆಗೆದುಕೊಂಡರು. ಕಸ ತೆಗೆಯುವದಕ್ಕಿಂತ ಕಸ ಹಾಕುವುದನ್ನು ತಡೆಯಬೇಕು. ಯಾವುದಾದರೂ ಹೋಟೆಲ್, ವ್ಯಾಪಾರಿಗಳು ಕಸ ಹಾಕುತ್ತಿದ್ದರೆ ಅವರ ವ್ಯಾಪಾರಿ ಲೈಸನ್ಸ್ ರದ್ದು ಮಾಡಿ ಎಂದು ಸೂಚಿಸಿದರು.

ಎಂ.ಜಿ.ಮಾರುಕಟ್ಟೆಗೆ ಭೇಟಿ ನೀಡಿದ ಅವರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಮಾರುಕಟ್ಟೆಯ ಅವ್ಯವಸ್ಥೆ ಕುರಿತು ಮಾಹಿತಿ ನೀಡಿದರು. ಮಾರುಕಟ್ಟೆಯಲ್ಲಿ ಗ್ರಾಹಕರು ಓಡಾಡದ ರೀತಿಯಲ್ಲಿ ಇರುವ ಒತ್ತುವರಿಯನ್ನು ತೆರವು ಮಾಡಬೇಕೆಂದು ಆಗ್ರಹಿಸಿದರು. ಮಾರುಕಟ್ಟೆ ವ್ಯವಸ್ಥಾಪಕ ಮುನಿಯಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ, ಬಾಡಿಗೆ ಶೇ 100ರಷ್ಟು ವಸೂಲಿಯಾಗಬೇಕು. ರಸ್ತೆ ಒತ್ತುವರಿ ತೆರವುಗೊಳಿಸಬೇಕು. ಇದೆಲ್ಲಾ ಕೆಲಸ ಎಂಟು ದಿನಗಳಲ್ಲಿ ಆಗಬೇಕೆಂದು ಖಡಕ್ ಸೂಚಿಸಿದರು. ಮಾರುಕಟ್ಟೆಯಲ್ಲಿ ಬರುವ ಆದಾಯದಲ್ಲಿ ಶೇ. 20 ರಷ್ಟು ಮಾರುಕಟ್ಟೆ ಅಭಿವೃದ್ಧಿಗೆ ಉಪಯೋಗಿಸಿ ಎಂದು ಸಲಹೆ ನೀಡಿದರು.

ಬಸ್ ನಿಲ್ದಾಣದಲ್ಲಿ ನಾಲ್ಕು ಮದ್ಯದಂಗಡಿಗಳು ಇರುವುದಕ್ಕೆ ಅವರು ಆಶ್ಚರ್ಯ ವ್ಯಕ್ತಪಡಿಸಿದರು. ನಿಯಮ ಮೀರಿ ವ್ಯಾಪಾರ ನಡೆಸಿದರೆ ವರದಿ ನೀಡಿ ಎಂದರು. ಬಸ್ ನಿಲ್ದಾಣದಲ್ಲಿ ಪೊಲೀಸರು ಮತ್ತು ಅಬಕಾರಿ ಇಲಾಖೆಯವರು ಗಸ್ತು ತಿರುಗಬೇಕು. ಬಸ್ ನಿಲ್ದಾಣದಲ್ಲಿರುವ ಪುರುಷರ ಶೌಚಾಲಯದಲ್ಲಿ ಅಲ್ಲಿ ಕೆಲಸ ಮಾಡುವವರು ಮನೆ ಮಾಡಿಕೊಂಡಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ, ಶೌಚಾಲಯದಲ್ಲಿ ವಾಸ ಅಮಾನವೀಯ. ಇಂತಹ ವ್ಯವಸ್ಥೆ ನಿಮ್ಮ ಗಮನಕ್ಕೆ ಏಕೆ ಬರಲಿಲ್ಲ ಎಂದು ನಗರಸಭೆ ಆಯುಕ್ತ ಆಂಜನೇಯಲು ಅವರನ್ನು ಪ್ರಶ್ನಿಸಿದರು. ಶೌಚಾಲಯದಲ್ಲಿ ಶೌಚಕ್ಕೆ ಹತ್ತು ರೂಪಾಯಿ ಪಡೆಯುತ್ತಿದ್ದಾರೆ ಎಂಬ ಸಾರ್ವಜನಿಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಕೂಡಲೇ ಶೌಚಾಲಯದ ಶುಲ್ಕವನ್ನು ಪ್ರದರ್ಶನ ಮಾಡಬೇಕೆಂದು ತಿಳಿಸಿದರು.

ನಗರಸಭೆ ಮುಂಭಾಗದಲ್ಲಿರುವ ಸುಭಾಷ್ ಚಂದ್ರ ಬೋಸ್ ಉದ್ಯಾನದಲ್ಲಿ ಅವ್ಯವಸ್ಥೆ ಕಂಡು ಅಸಮಾಧಾನ ವ್ಯಕ್ತಪಡಿಸಿದರು. ನಗರಸಭೆ ಮುಂದೆ ಇರುವ ಉದ್ಯಾನವನ್ನು ಸುಂದರವಾಗಿಟ್ಟುಕೊಳ್ಳಲು ನಿಮಗೆ ಸಾಧ್ಯವಾಗಿಲ್ಲ. ಸುಮಾರು ₹20 ಲಕ್ಷ ವೆಚ್ಚದಲ್ಲಿ ಉದ್ಯಾನ ನಿರ್ಮಾಣ ಮಾಡಬಹುದು. ಪ್ರಸ್ತಾವನೆ ಕಳಿಸಿಕೊಡಿ. ಅದಕ್ಕೆ ಮಂಜೂರಾತಿ ನೀಡುತ್ತೇನೆ ಎಂದು ಆಯುಕ್ತರಿಗೆ ತಿಳಿಸಿದರು.

ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಂಗಾಧರ್, ವ್ಯವಸ್ಥಾಪಕ ಶಶಿಕುಮಾರ್, ಜಿಲ್ಲಾ ಯೋಜನಾಧಿಕಾರಿ ಅಂಬಿಕಾ, ನಗರಸಭೆ ಸದಸ್ಯ ಪ್ರವೀಣ್, ಕರುಣಾಕರನ್, ಮಾಣಿಕ್ಯಂ ಇದ್ದರು.

ಶೌಚಾಲಯದಲ್ಲಿಯೇ ಮನೆ ನಿರ್ವಹಣೆ ಇಲ್ಲದ ಉದ್ಯಾನ ಕಸದ ನಿರ್ವಹಣೆಗೆ ಸೂಚನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.