ಕೋಲಾರ: ತಾಲ್ಲೂಕಿನ ತೇರಹಳ್ಳಿ ಬೆಟ್ಟದ ಹಳ್ಳಿಗಳಲ್ಲಿ ಪದೇಪದೇ ಉದ್ಭವಿಸುವ ನೀರಿನ ಬವಣೆ, ಶುದ್ಧ ಕುಡಿಯುವ ನೀರಿನ ಮರೀಚಿಕೆ ಕುರಿತಂತೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿಯನ್ನು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಂಗಳವಾರ ಪ್ರಸ್ತಾಪಿಸಿದ್ದಾರೆ.

‘ತೇರಹಳ್ಳಿ ಬೆಟ್ಟದಲ್ಲಿ ನೀರಿನ ಬವಣೆ, ಜನರ ಪರದಾಟ!’ ಕುರಿತ ವಿಶೇಷ ವರದಿ ‘ಪ್ರಜಾವಾಣಿ’ಯಲ್ಲಿ ಡಿ.8ರಂದು ಪ್ರಕಟವಾಗಿತ್ತು.

ಈ ವರದಿಯನ್ನು ಓದಿ, ಬೆಟ್ಟದಲ್ಲಿರುವ ಹಳ್ಳಿಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಅನುದಾನ ಕಲ್ಪಿಸಬೇಕೆಂದು ಅವರು ಶೂನ್ಯ ವೇಳೆಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂಬಂಧ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತಿ ರಾಜ್ ಸಚಿವರ ಗಮನಕ್ಕೆ ತಂದರು. ಆ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಇರಲಿಲ್ಲ. ಈ ಕುರಿತು ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗುವುದು ಎಂದು ಪರಿಷತ್ತಿನ ಸಭಾ ನಾಯಕ ಎನ್.ಎಸ್.ಬೋಸರಾಜು ಹೇಳಿದ್ದಾರೆ.

ಇದಕ್ಕೂ ಮೊದಲು ಸದನದಲ್ಲಿ ಮಾತನಾಡಿದ ಅನಿಲ್ ಕುಮಾರ್, ‘ಸ್ವಾತಂತ್ರ್ಯ ಬಂದು 78 ವರ್ಷವಾದರೂ ತೇರಹಳ್ಳಿ ಬೆಟ್ಟದ ಕೊಂಡರಾಜನಹಳ್ಳಿ ವ್ಯಾಪ್ತಿಯ ಆರೇಳು ಹಳ್ಳಿಗಳ ಜನರು ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಸುಮಾರು 500 ಮನೆಗಳಿದ್ದು, 2 ಸಾವಿರ ಜನರು ವಾಸಿಸುತ್ತಿದ್ದಾರೆ. ನೀರು ಹಸಿರು ಬಣಕ್ಕೆ ತಿರುಗಿದ್ದು, ಒಂಥರಾ ವಾಸನೆ ಬರುತ್ತದೆ. ಬಾವಿ ಕುಂಟೆ ಆಶ್ರಯಿಸುತ್ತಿದ್ದಾರೆ. ಇದರಿಂದ ಹಲವಾರು ರೋಗರುಜಿನ ಬರುವ ಆತಂಕವಿದೆ. ಈಗಲೇ ಈ ಸಮಸ್ಯೆ ಇದ್ದು, ಇನ್ನು ಬೇಸಿಗೆ ಕಾಲದಲ್ಲಿ ಮತ್ತಷ್ಟು ತೊಂದರೆ ಆಗುವ ಸಾಧ್ಯತೆ ಇರುತ್ತದೆ’ ಎಂದಿದ್ದಾರೆ.

ಹೀಗಾಗಿ, ಆ ಭಾಗದ ಜನರಿಗೆ ಸೌಲಭ್ಯ ಹಾಗೂ ಶುದ್ಧ ನೀರು ದೊರಕಿಸಿಕೊಡಲು ಅತ್ಯವಶ್ಯಕವಾದ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.