ಕೋಲಾರ: ತಾಲ್ಲೂಕಿನ ಮಠಪುರ ಗೇಟ್ ಬಳಿ ಗುರುವಾರ ರಾತ್ರಿ ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕಲ್ಯಾಣಮೂರ್ತಿ (60) ಎಂಬುವರು ಮೃತಪಟ್ಟಿದ್ದಾರೆ.

ತಾಲ್ಲೂಕಿನ ತಿಪ್ಪೇನಹಳ್ಳಿಯ ಕಲ್ಯಾಣಮೂರ್ತಿ ಅವರು ಪತ್ನಿ ಭ್ರಮರಾಂಬಿಕ ಜತೆ ಬೈಕ್‌ನಲ್ಲಿ ಸಂಬಂಧಿಕರ ಮದುವೆಗೆ ಹೋಗಿದ್ದರು. ದಂಪತಿ ವೇಮಗಲ್‌ನಲ್ಲಿ ಮದುವೆ ಮುಗಿಸಿಕೊಂಡು ಊರಿಗೆ ಹಿಂದಿರುಗು ತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಕಲ್ಯಾಣಮೂರ್ತಿ ಅವರು ಟ್ರ್ಯಾಕ್ಟರ್‌ಗೆ ಹಿಂದಿನಿಂದ ಬೈಕ್ ಗುದ್ದಿಸಿದ್ದಾರೆ. ಈ ವೇಳೆ ವಾಹನದಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಭ್ರಮರಾಂಬಿಕ ಅವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರ್ಯಾಕ್ಟರ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ ಎಂದು ವೇಮಗಲ್ ಪೊಲೀಸರು ತಿಳಿಸಿದ್ದಾರೆ. ದೂರು ದಾಖಲಾಗಿದೆ.

ಅಂಬ್ಲಿಕಲ್: ವ್ಯಕ್ತಿ ಸಾವು

ನಂಗಲಿ: ಅಂಬ್ಲಿಕಲ್ ಗ್ರಾಮದ ಹೊರವಲಯದ ಅಶ್ವತ್ಥ ಕಟ್ಟೆಬಳಿ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ.

ಕುರುಡುಮಲೆ ಗ್ರಾಮದ ವೆಂಕಟೇಶಪ್ಪ (65) ಮೃತ ವ್ಯಕ್ತಿ. ಅವರು ಪ್ಲಾಸ್ಟಿಕ್ ಬಿಂದಿಗೆಗಳ ವ್ಯಾಪಾರಿಯಾಗಿದ್ದು, ಅಂಬ್ಲಿಕಲ್ ಗ್ರಾಮದಲ್ಲಿ ವ್ಯಾಪಾರಕ್ಕೆಂದು ಬಂದು ಗ್ರಾಮದ ಹೊರವಲಯದ ಅಶ್ವತ್ಥ ಕಟ್ಟೆ ಬಳಿ ರಾತ್ರಿ ತಂಗಿದ್ದರು ಎಂದು ತಿಳಿದುಬಂದಿದೆ.

ಗುರುವಾರ ಬೆಳಿಗ್ಗೆ ಪ್ಲಾಸ್ಟಿಕ್ ನೀರಿನ ಬಾಟಲಿ ತೆಗೆದುಕೊಂಡು ಬಹಿರ್ದೆಸೆಗೆಂದು ಅಶ್ವತ್ಥ ಕಟ್ಟೆಯಿಂದ ಸ್ವಲ್ಪ ದೂರ ಹೋದವರು ಸ್ಥಳದಲ್ಲಿಯೇ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ.

ನಂಗಲಿ ಪೊಲೀಸ್ ಸಬ್ಇನ್‌ಸ್ಪೆಕ್ಟರ್ ಎನ್.ಅನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.