ಗೈರಾದ ಅಧಿಕಾರಿಗಳಿಗೆ ಡಿ.ಸಿ ತರಾಟೆ
ಡಿಜಿಟಲ್ ಜನಗಣತಿ ಸಿದ್ಧತೆ ಸಭೆಗೆ ಗೈರುಹಾಜರಾದ ಮತ್ತು ಜನಗಣತಿ ತರಬೇತಿಗಳಲ್ಲಿ ಭಾಗವಹಿಸದ ತಹಶೀಲ್ದಾರ್‌ಗಳು ಹಾಗೂ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ರವಿ ತಕ್ಷಣವೇ ನೋಟಿಸ್ ಜಾರಿ ಮಾಡಬೇಕು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ನೀಡುವಂತೆ ಕಟ್ಟುನಿಟ್ಟಿನ ಆದೇಶ ಮಾಡಿದರು. ಪ್ರತಿ ಶುಕ್ರವಾರ ಜನಗಣತಿ ಕಾರ್ಯದ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ. ಪ್ರತಿ ಗುರುವಾರ ಸಂಜೆ ವೇಳೆಗೆ ಎಲ್ಲಾ ತಾಲ್ಲೂಕುಗಳಿಂದ ಗೂಗಲ್ ಮೀಟ್ ಮೂಲಕ ಮಾಹಿತಿ ಸಂಗ್ರಹಿಸಿ ಸಿದ್ಧರಿರಬೇಕು ಎಂದು ಸೂಚನೆ ನೀಡಿದರು.