ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: ವ್ಯಕ್ತಿ ಬಂಧನ; ₹8 ಲಕ್ಷ ಬೆಲೆಯ 10 ಕೆ.ಜಿ ಗಾಂಜಾ ವಶ

Published : 18 ಆಗಸ್ಟ್ 2024, 12:32 IST
Last Updated : 18 ಆಗಸ್ಟ್ 2024, 12:32 IST
ಫಾಲೋ ಮಾಡಿ
Comments

ಕೋಲಾರ: ಗಾಂಜಾ ಸಾಗಣೆ ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದು, ಸುಮಾರು ₹8 ಲಕ್ಷ ಬೆಲೆಯ 10 ಕೆ.ಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

ಆಂಧ್ರಪ್ರದೇಶದ ಈಸ್ಟ್ ಗೋದಾವರಿ ಜಿಲ್ಲೆಯ ಕಾಲಾ ನರೇಶ್ (29) ಬಂಧಿತ ಆರೋಪಿ. ಕೋಲಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ–75ರ ಚುಂಚದೇನಹಳ್ಳಿ ಗೇಟ್‍ನಲ್ಲಿನ ಆಂಜನೇಯಸ್ವಾಮಿ ದೇವಾಲಯದ ಬಳಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್ ಬಿ., ಎಎಸ್‌ಪಿಗಳಾದ ರವಿಶಂಕರ್, ಜಗದೀಶ್ ಮಾರ್ಗದರ್ಶನದಲ್ಲಿ ಡಿವೈಸ್‌ಪಿ ಎಂ.ಎಚ್.ನಾಗ್ತೆ ಮುಂದಾಳತ್ವದಲ್ಲಿ ಕೋಲಾರ ಗ್ರಾಮಂತರ ಠಾಣೆಯ ವೃತ್ತ ನಿರೀಕ್ಷಕ ಕೆ.ಕಾಂತರಾಜ್, ಸಿಬ್ಬಂದಿ ಮುರಳಿ, ಸಾದಿಕ್ ಪಾಷ, ರವಿಕುಮಾರ್, ರಾಜೇಶ್, ಜಿಲ್ಲಾ ಅಪರಾಧ ವಿಭಾಗದ ಪಿಎಸ್‍ಐ ಎಂ.ಆರ್.ಅಣ್ಣಯ್ಯ, ಸಿಬ್ಬಂದಿ ರಮೇಶ್, ಆಂಜಿನಪ್ಪ, ತಾಂತ್ರಿಕ ವಿಭಾಗದ ನಾಗರಾಜ್, ಮುರಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಎಸ್ಪಿ ನಿಖಿಲ್‌ ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT