ಕೋಲಾರ: ಈಜುಕೊಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, ಕೋಲಾರದ ಕ್ರೀಡಾಪಟುಗಳ ದಶಕಗಳ ಬೇಡಿಕೆ ಈಗ ಈಡೇರುತ್ತಿದೆ. ಗುಣಮಟ್ಟದ ಕಾಮಗಾರಿ ಕೈಗೊಂಡು ಮುಂದಿನ 11 ತಿಂಗಳ ಅವಧಿಯೊಳಗೆ ಈಜುಕೊಳವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಕ್ರೀಡಾ ಮೂಲಸೌಕರ್ಯಕ್ಕೆ ಹೊಸ ಮೆರುಗು ನೀಡುವ ನಿಟ್ಟಿನಲ್ಲಿ ಒಳಾಂಗಣ ಕ್ರೀಡಾಂಗಣದ ಹಿಂಭಾಗದಲ್ಲಿ ಕ್ರೀಡಾ ಇಲಾಖೆಯಿಂದ ಅತ್ಯಾಧುನಿಕ ಈಜುಕೊಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ಕುಮಾರ್ ಮಾತನಾಡಿ, ಕ್ರೀಡಾ ಇಲಾಖೆಯ ಈ ಯೋಜನೆಯು ಜಿಲ್ಲೆಯ ಯುವಜನತೆಗೆ ಮತ್ತು ಈಜು ಕಲಿಯುವ ಆಸಕ್ತರಿಗೆ ವರದಾನವಾಗಲಿದೆ ಎಂದರು.

ಈಜುಕೊಳದಲ್ಲಿ ಏನೇನು ಸೌಲಭ್ಯ: ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ₹ 4.70 ಕೋಟಿ (ಟೆಂಡರ್ ಕಾರ್ಯಾದೇಶ) ಅನುದಾನದಲ್ಲಿ ಈಜುಕೊಳ ನಿರ್ಮಿಸಲಾಗುತ್ತಿದೆ. ಈಗಾಗಲೇ ಟೆಂಡರ್ ನೀಡಲಾಗಿದೆ.

25 ಮೀಟರ್ ಉದ್ದ, 21 ಮೀಟರ್ ಅಗಲ ವಿಸ್ತೀರ್ಣದ ಈಜುಕೊಳ, ಸುಸಜ್ಜಿತ ಚೇಂಜ್ ರೂಮ್ಗಳು, ಶೆಡ್ಗಳ ನಿರ್ಮಾಣ, ಆಧುನಿಕ ಎಲೆಕ್ಟ್ರೋ-ಮೆಕ್ಯಾನಿಕಲ್ ಫಿಲ್ಟರೇಶನ್ ವ್ಯವಸ್ಥೆ ಹಾಗೂ ವಿದ್ಯುದೀಕರಣ ಕಾಮಗಾರಿಗಳು ಒಳಗೊಂಡಿವೆ. 8 ಲೈನ್, 8 ಲಕ್ಷ ಲೀಟರ್ ನೀರಿನ ಸಾಮರ್ಥ್ಯ ಹೊಂದಿರಲಿದೆ.

ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ‘ಕುಡಾ’ ಅಧ್ಯಕ್ಷ ಮೊಹಮ್ಮದ್ ಹನೀಪ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಅಜಯ್ ಕುಮಾರ್, ಮಾಜಿ ಅಧ್ಯಕ್ಷ ಮಂಜುನಾಥ್ ಗೌಡ, ಮುರಳ ಮೋಹನ್, ಚೌಡಪ್ಪ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಟಿ., ಮುಖಂಡರಾದ ಕೆ.ಜಯದೇವ್, ಅಂಚೆ ಅಶ್ವಥ್, ಕೋಚ್ ವೆಂಕಟೇಶ್ ಇದ್ದರು.

ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ

ಲೆಕ್ಕ ಪರಿಶೋಧನಾ ಇಲಾಖೆ ಕಚೇರಿ ನೂತನ ಕಟ್ಟಡ ‘ಕುಡಾ’ ಬಡಾವಣೆ (₹ 1.50 ಕೋಟಿ) * ಯಡಹಳ್ಳಿ ಎಸ್ಟಿಪಿ ಟ್ಯಾಂಕ್ ನಿರ್ಮಾಣ ಎಫ್ಎಸ್ಟಿಪಿ ಪ್ಲಾಂಟ್ (₹ 60 ಲಕ್ಷ) ಮತ್ತು ಸಿಸಿ ರಸ್ತೆ (₹ 35 ಲಕ್ಷ) ತೊರದೇವಂಡಹಳ್ಳಿ ರಸ್ತೆ (₹ 19 ಲಕ್ಷ) ಮಲ್ಲಂಡಹಳ್ಳಿ ಗ್ರಾಮದಲ್ಲಿ ಹೈಮಾಸ್ಟ್ ಲೈಟ್ (₹5 ಲಕ್ಷ) ಸೀತಿ ದೇವಸ್ಥಾನ ಡಬಲ್ ಸಿ.ಸಿ.ರಸ್ತೆ (₹ 1.5 ಕೋಟಿ), ನಾಚಹಳ್ಳಿ ಗ್ರಾಮದಲ್ಲಿ ಹೈಮಾಸ್ಟ್ ಲೈಟ್ (₹ 5 ಲಕ್ಷ) * ಕೃಷ್ಣಾಪುರ-ಚಿಂತಾಮಣಿ ಗಡಿ ರಸ್ತೆ (₹ 80 ಲಕ್ಷ), ಅಮ್ಮನಲ್ಲೂರು ಗ್ರಾಮದಲ್ಲಿ ಸಿಸಿ ರಸ್ತೆ (₹ 40 ಲಕ್ಷ), ಕ್ಯಾಲನೂರು ಅಮ್ಮನಲ್ಲೂರು ಚಲ್ದಿಗಾನಹಳ್ಳಿ ಪಾಡಿಗಾನಹಳ್ಳಿ ರಸ್ತೆ (₹ 3 ಕೋಟಿ), ಬೀಚಗೊಂಡಹಳ್ಳಿ-ಚನ್ನಸಂದ್ರ ರಸ್ತೆ (₹ 1 ಕೋಟಿ), ಉರಟಿ ಅಗ್ರಹಾರ-ಚನ್ನಸಂದ್ರ ರಸ್ತೆ (₹ 1 ಕೋಟಿ)

₹ 15 ಕೋಟಿ ವೆಚ್ಚದ ಕಾಮಗಾರಿ

ಶಾಸಕ ಕೊತ್ತೂರು ಮಂಜುನಾಥ್ ಸೋಮವಾರ ಕೋಲಾರ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧೆಡೆ ಸುಮಾರು ₹ 15.17 ಕೋಟಿ ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಈಜುಕೊಳ ನಿರ್ಮಾಣ ರಸ್ತೆ ಸಿಸಿ ರಸ್ತೆ ಕಟ್ಟಡ ಹೈಮಾಸ್ಟ್ ದೀಪ ಎಸ್ಟಿಪಿ ಟ್ಯಾಂಕ್ ಎಫ್ಎಸ್ಟಿಪಿ ಪ್ಲಾಂಟ್ ನಿರ್ಮಾಣಕ್ಕೆ ಭೂಮಿಪೂಜೆ ಇದರಲ್ಲಿ ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.