ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಹಬ್ಬ: ಸಂವಿಧಾನ ಶಿಲ್ಪಿಗೆ ನಮನ

ಜಿಲ್ಲಾಡಳಿತ, ಸಂಘಟನೆಗಳಿಂದ ಮೇರು ನಾಯಕನ ಜಯಂತ್ಯುತ್ಸವ
Last Updated 15 ಏಪ್ರಿಲ್ 2023, 9:55 IST
ಅಕ್ಷರ ಗಾತ್ರ

ಕೋಲಾರ: ಎಲ್ಲೆಲ್ಲೂ ಸಂಭ್ರಮ, ಮೊಳಗಿದ ಜೈ ಭೀಮ್‌, ಜೈ ಅಂಬೇಡ್ಕರ್‌ ಘೋಷಣೆ. ಅಂಬೇಡ್ಕರ್‌ ಪ್ರತಿಮೆ, ಪುತ್ಥಳಿಗೆ ಹೂವಿನ ಅಲಂಕಾರ, ಅದ್ದೂರಿ ಮೆರವಣಿಗೆ, ಬೈಕ್‌ ರ‍್ಯಾಲಿ. ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ.

ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಶುಕ್ರವಾರ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. ದಿನವಿಡೀ ಕಾರ್ಯಕ್ರಮಗಳ ಮೂಲಕ ತಮ್ಮ ಜನ್ಮ ದಿನದಂತೆ, ಮನೆಯ ಹಬ್ಬದಂತೆ, ಊರಿನ ಉತ್ಸವದಂತೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಆಚರಿಸಿದರು.

ಜಿಲ್ಲಾಡಳಿತ, ವಿವಿಧ ಸಂಘ ಸಂಸ್ಥೆಗಳು, ದಲಿತ ಸಂಘಟನೆಗಳು ಅಂಬೇಡ್ಕರ್‌ ಜಯಂತಿ ಆಚರಿಸಿ, ಸಂವಿಧಾನ ಶಿಲ್ಪಿಯ ಗುಣಗಾನ ಮಾಡಿದವು.

ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ‌ ಟಿ.ಚನ್ನಯ್ಯ ರಂಗಮಂದಿರದಲ್ಲಿ ಅಂಬೇಡ್ಕರ್ ಅವರ 132ನೇ ಜನ್ಮದಿನ ಆಚರಿಸಲಾಯಿತು.

ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್‌ ಕುಮಾರ್‌ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿ.ಬಿ.ಭಾಸ್ಕರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚನ್ನಬಸಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಹಾಗೂ ಸಮುದಾಯದ ಮುಖಂಡರು ಇದ್ದರು.

ಅಂಬೇಡ್ಕರ್ ಜಯಂತಿಯನ್ನು ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗದಿಂದ ಅದ್ದೂರಿಯಾಗಿ ಆಚರಿಸಲಾಯಿತು. ಬಂಗಾರಪೇಟೆ ವೃತ್ತದಲ್ಲಿನ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಲ್ಲಕ್ಕಿ, ಸ್ತಬ್ಧಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸಂಸದ ಎಸ್‌.ಮುನಿಸ್ವಾಮಿ ಡ್ರಮ್‌ ಬಾರಿಸಿ, ಯುವಕರೊಂದಿಗೆ ಕುಣಿದರು.

ಮೆರವಣಿಗೆಯು ಡೂಂ ಲೈಟ್ ವೃತ್ತ, ಕ್ಲಾಕ್ ಟವರ್ ವೃತ್ತ, ಹೊಸ ಬಸ್ ನಿಲ್ದಾಣ ವೃತ್ತ, ಮೆಕ್ಕೆ ವೃತ್ತದ ಮುಖಾಂತರ ಹಾಲಿಸ್ಟರ್‌ ಭವನಕ್ಕೆ ಬಂತು.

ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಅಂಬೇಡ್ಕರ್ ಭಾವಚಿತ್ರವುಳ್ಳ ಹತ್ತಾರು ಪಲ್ಲಕ್ಕಿಗಳು, ಸ್ತಬ್ಧಚಿತ್ರಗಳು ಇದ್ದವು. ನಗರ ಠಾಣೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಗೊರವನಕೊಲ್ಲ ನೇತೃತ್ವದಲ್ಲಿ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

ಡಾ.ಬಿ.ಆರ್.ಅಂಬೇಡ್ಕರ್ ಸಮತಾ ಸೈನಿಕದಳ-ಎಎಸ್‌ಎಸ್‌ಡಿ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ನಗರದ ನಚಿಕೇತ ನಿಲಯದಲ್ಲಿರುವ ‌ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಪುಷ್ಪನಮನ ಸಲ್ಲಿಸಿ ಬೌದ್ಧ ದಮ್ಮಾನುಸಾರ ಪ್ರಾರ್ಥನೆ
ಸಲ್ಲಿಸಿದರು.

ರಾಜ್ಯ ಅಧ್ಯಕ್ಷ ಪಾರೇಹೊಸಹಳ್ಳಿ ನಾರಾಯಣಪ್ಪ, ಮುಖಂಡರಾದ ಮೂರಾಂಡಹಳ್ಳಿ ನಾರಾಯಣಸ್ವಾಮಿ, ಅರಹಳ್ಳಿ ವೆಂಕಟರಾಮಪ್ಪ, ಚಿನ್ನಾಪುರ ರಮೇಶ್, ಶಿಳ್ಳಂಗೆರೆ ನಾರಾಯಣಪ್ಪ, ಮುನಿಶಾಮಪ್ಪ, ದಿಂಬ ಚಾಮನಹಳ್ಳಿ ಅಂಬರೀಶ್, ಎಸ್.ಮುನಿಯಪ್ಪ, ವೆಂಕಟೇಶಪ್ಪ, ಚಿನ್ನಾಪುರ ಸುರೇಂದ್ರ, ಗಂಗಮ್ಮನಪಾಳ್ಯ ದಶರಥ, ದಿಂಬ ವೆಂಕಟರಾಜು, ಪಾರೇಹೊಸಹಳ್ಳಿ ನಾರಾಯಣಸ್ವಾಮಿ, ಎಂ.ನಾರಾಯಣಸ್ವಾಮಿ, ಗಾಜಲದಿನ್ನೆ ಮುನಿಯಪ್ಪ, ಚಿಕ್ಕನಹಳ್ಳಿ ಸುರೇಶ್ ಅಮ್ಮೇರಹಳ್ಳಿ ಆಂಜಿನಪ್ಪ ಇದ್ದರು.

ಬೈಕ್‌ ರ‍್ಯಾಲಿ, ಜೈಭೀಮ್‌ ಘೋಷಣೆ: ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದಿಂದ ಸ್ತಬ್ಧ ಚಿತ್ರದೊಂದಿಗೆ ನಗರದಲ್ಲಿ ಬೈಕ್‌ ರ‍್ಯಾಲಿ ನಡೆಯಿತು. ಯುವಕರು ಜೈಭೀಮ್‌ ಘೋಷಣೆ ಮೊಳಗಿಸಿದರು.

ದಲಿತ ಮುಖಂಡ ಟಿ.ವಿಜಯಕುಮಾರ್, ಭೀಮಸೇನೆ ರಾಜ್ಯ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ ನೇತೃತ್ವದಲ್ಲಿ ಬಂಗಾರಪೇಟೆ ವೃತ್ತದಲ್ಲಿ ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

‘ಅಂಬೇಡ್ಕರ್‌ ರಚಿತ ಸಂವಿಧಾನ ಉಳಿಸುವುದು ನಮ್ಮ ಮುಖ್ಯ ಗುರಿ. ಸಂವಿಧಾನ ಉಳಿಯದಿದ್ದರೆ ದೇಶ ಉಳಿಯುವುದಿಲ್ಲ. ಎಲ್ಲರೂ ಸಂವಿಧಾನ ಓದಬೇಕು’ ಎಂದು ವಿಜಯಕುಮಾರ್‌ ಹೇಳಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ, ‘ಸಂವಿಧಾನ ಭಾರತದ ಪವಿತ್ರ ಗ್ರಂಥ. ಇದು ನಮ್ಮ ಬದುಕಿಗೂ ದಾರಿ’ ಎಂದು ಹೇಳಿದರು.

ಅಂಬೇಡ್ಕರ್ ಸ್ವಾಭಿಮಾನಿ ಬಳಗದ ಅಧ್ಯಕ್ಷ ಬಿ.ಮಂಜುನಾಥ್, ಯುವಶಕ್ತಿ ಸುಬ್ಬು, ಕರಾಟೆ ಶ್ರೀನಿವಾಸ್, ಕಲ್ಕರೆ ವಿಜಿಕುಮಾರ್, ನಾಗನಾಳ ರಮೇಶ್, ಭೀಮಸೇನೆ ವೆಂಕಟಸ್ವಾಮಿ, ಅಂಜನ್ ಬೋದ್, ಮದನಹಳ್ಳಿ ವೆಂಕಟೇಶ್, ಗೋವಿಂದರಾಜು, ಕೋಡಿರಾಮಸಂದ್ರ ಯಲ್ಲಪ್ಪ ಇದ್ದರು.

ಅಂಬೇಡ್ಕರ್‌ ಪುತ್ಥಳಿ, ಭವನ ನಿರ್ಮಿಸಿ: ‘ಜಿಲ್ಲಾಧಿಕಾರಿ ಕಚೇರಿ ಮುಂದೆ ಅಂಬೇಡ್ಕರ್‌ ಪುತ್ಥಳಿ, ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಬೇಕು’ ಎಂದು ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗದ ಮುಖಂಡರು ಒತ್ತಾಯಿಸಿದರು.

ನಗರದ ಹಾಲಿಸ್ಟರ್ ಭವನದಲ್ಲಿ ನಡೆದ ಅಂಬೇಡ್ಕರ್‌ ಜಯಂತಿ ವೇದಿಕೆ ಕಾರ್ಯಕ್ರಮದಲ್ಲಿ ಡಾ.ಎಂ.ಚಂದ್ರಶೇಖರ್ ಮಾತನಾಡಿ, ‘ದಲಿತ ಮುಖಂಡರು ಪರಸ್ಪರ ಕಚ್ಚಾಡದೆ ಒಂದಾಗಿ ಹೋಗಬೇಕಿದೆ. ಒಂದು ಸಂಘ ಕಟ್ಟಿಕೊಂಡು ಒಬ್ಬರ ನೇತೃತ್ವದಲ್ಲಿ ಹಕ್ಕುಗಳಿಗಾಗಿ ಹೋರಾಡಬೇಕು’ ಎಂದರು.

ದಲಿತ ನಾರಾಯಣಸ್ವಾಮಿ, ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗದ ಅಧ್ಯಕ್ಷ ಡಿ.ಪಿ.ಎಸ್.ಮುನಿರಾಜು, ಪಧಾದಿಕಾರಿಗಳಾದ ಮೇಡಿಹಾಳ ಮುನಿ ಅಂಜನಪ್ಪ, ವಕೀಲ ಯುಗಂಧರ್ ನಾರಾಯಣಸ್ವಾಮಿ, ಹೊನ್ನೇನಹಳ್ಳಿ ಯಲ್ಲಪ್ಪ, ಪ್ರಜಾ ವಿಮೋಚನ ಚಳುವಳಿಯ ಪಿ.ವಿ.ಸಿ ಕೃಷ್ಣಪ್ಪ, ಕಲಾವಿದ ಮತ್ತಿಕುಂಟೆ ಕೃಷ್ಣ, ‌ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT