ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ಬೆಲೆ ಏರಿಕೆ: ಕೋಮುಲ್ ಅಧ್ಯಕ್ಷ ಸ್ಪಷ್ಟಣೆ

Published 24 ಜುಲೈ 2023, 14:22 IST
Last Updated 24 ಜುಲೈ 2023, 14:22 IST
ಅಕ್ಷರ ಗಾತ್ರ

ಮಾಲೂರು: ಹಾಲು ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹3 ಏರಿಕೆ ಮಾಡಿದ್ದು, ಆ ಹಣವನ್ನು ಹಾಲು ಉತ್ಪಾದಕರಿಗೆ ನೀಡಲಾಗುತ್ತದೆ ಎಂದು ಕೋಮುಲ್ ಅಧ್ಯಕ್ಷ ಹಾಗೂ ಶಾಸಕ ಕೆ‌.ವೈ.ನಂಜೇಗೌಡ ಸ್ಪಷ್ಟಪಡಿಸಿದರು

ಪಟ್ಟಣದ ಕೋಮುಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ವಿದೇಶಗಳಲ್ಲಿ ಹೆಸರು ಮಾಡಿರುವ ನಂದಿನಿ ಹಾಲಿನ ಉತ್ಪಾದನೆ ರಾಜ್ಯದಲ್ಲಿ ಕಡಿಮೆಯಾಗುತ್ತಿದೆ. ಈ ಬಾರಿ ಆರು ಲಕ್ಷ ಲೀಟರ್‌ ಹಾಲು ಉತ್ಪಾದನೆ ಕುಂಠಿತಗೊಂಡಿದೆ. ಹಾಗಾಗಿ ಹಾಲು ಉತ್ಪಾದನೆ ಹೆಚ್ಚು ಮಾಡುವ ಉದ್ದೇಶದಿಂದ ₹3 ಏರಿಕೆ ಮಾಡಿದ್ದಾರೆ ಎಂದರು.

ಹಾಲನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮಾಡಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಒಂದು ಲೀಟರ್ ನಂದಿನಿ ಹಾಲು ₹39ಕ್ಕೆ ಮಾರಾಟವಾಗುತ್ತಿದೆ.  ಆದರೆ ಗುಜರಾತ್‌ ಮೂಲದ ಅಮೂಲ್‌ ನಂದಿನಿಗಿಂದ ₹10 ಹೆಚ್ಚಿಗೆ ಮಾರಾಟವಾಗುತ್ತಿದೆ. ಶಾಲಾ ಮಕ್ಕಳಿಗೆ ಹಾಲು ವಿತರಣೆ ಹಾಗೂ ಅಂಗನವಾಡಿಯಲ್ಲಿ ಹಾಲಿನ ಪೌಡರ್‌ ವಿತರಣೆ ಮಾಡುವ ಕಾರ್ಯಕ್ರಮಗಳನ್ನು ಸಿಎಂ ಜಾರಿಗೆ ತಂದ ನಂತರ ಹಾಲಿನ ಸದುಪಯೋಗ ಹೆಚ್ಚಳವಾಯಿತು ಎಂದು ಹೇಳಿದರು.

ಹಾಲಿನ ಬೆಲೆ ಹೆಚ್ಚಳ ಮಾಡಿದ ತಕ್ಷಣ ಪಶು ಆಹಾರದ ಬೆಲೆಯೂ ಹೆಚ್ಚಳವಾಗುತ್ತದೆ. ಇದರಿಂದ ಮತ್ತೆ ಹಾಲು ಉತ್ಪಾದಕರ ಮೇಲೆ ಹೊರೆ ಬೀಳುತ್ತದೆ. ಈ ಬೆಲೆ ನಿಯಂತ್ರಣ ಮಾಡುವುದು ಕೆಎಂಎಫ್‌. ಹಾಗಾಗಿ ಅದಕ್ಕೆ ಬೆಲೆ ಹೆಚ್ಚಳ ಮಾಡದಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT