ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಬಾಗಿಲು: ಕಾರ್ಯಾರಂಭವಾದ ಕೂಸಿನ ಮನೆ

Published 9 ಜುಲೈ 2024, 12:30 IST
Last Updated 9 ಜುಲೈ 2024, 12:30 IST
ಅಕ್ಷರ ಗಾತ್ರ

ಮುಳಬಾಗಿಲು: ನರೇಗಾ ಕಾಮಗಾರಿಯಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರ ಮಕ್ಕಳಿಗಾಗಿ ಸಿದ್ಧಪಡಿಸಿದ್ದ ಕೂಸಿನ ಮನೆ ನಾಲ್ಕು ತಿಂಗಳಾದರೂ ಕಾರ್ಯಾರಂಭ ಮಾಡದೆ ಬೀಗ ಜಡಿದಿದ್ದು, ಮಂಗಳವಾರ ಬೀಗ ತೆರೆದಿದೆ.

ಮುಳಬಾಗಿಲು ತಾಲ್ಲೂಕಿನ ಹೆಬ್ಬಣಿ ಗ್ರಾಮದಲ್ಲಿ ನಾಲ್ಕು ತಿಂಗಳಿನಿಂದಲೂ ಕೂಸಿನ ಮನೆ ತೆರೆದಿರಲಿಲ್ಲ. ಈ ಬಗ್ಗೆ ಜುಲೈ 9ರಂದು ಪ್ರಜಾವಾಣಿಯಲ್ಲಿ ‘ಹೆಬ್ಬಣಿ ಗ್ರಾಮದಲ್ಲಿ ಇನ್ನೂ ತೆರೆಯದ ಕೂಸಿನ ಮನೆ’ ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸರ್ವೇಶ್ ಮಂಗಳವಾರ ಮಧ್ಯಾಹ್ನ ಕೂಸಿನ ಮನೆ ಬಾಗಿಲು ತೆರೆಸಿದ್ದಾರೆ. ಜತೆಗೆ ನೇಮಕವಾಗಿದ್ದ ಇಬ್ಬರು ಸಹಾಯಕಿಯರನ್ನು ಕರ್ತವ್ಯಕ್ಕೆ ಬರುವಂತೆ ತಿಳಿಸಿ, ಆರೈಕೆ ಕೇಂದ್ರ ಸ್ವಚ್ಛಗೊಳಿಸಿದ್ದಾರೆ. ಆರು ಮಂದಿ ಮಕ್ಕಳು ಕೂಸಿನ ಮನೆಗೆ ಬಂದಿದ್ದರು.

ಪಿಡಿಒ ಗೌಸ್ ಹಾಗೂ ಸಹಾಯಕಿಯರು ಮಕ್ಕಳಿಗೆ ಬಿಸ್ಕೆಟ್‌, ಹಾಲು ಹಾಗೂ ಸಿಹಿ ಹಂಚುವ ಮೂಲಕ ಕೂಸಿನ ಮನೆ ಕಾರ್ಯಾರಂಭಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT