ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲೂರು | ಮೊರಾರ್ಜಿ ವಸತಿ ಶಾಲೆ: ಓದಲು ಡೆಸ್ಕ್ ಇಲ್ಲ, ಆಡಲು ಮೈದಾನವಿಲ್ಲ

ವಿ. ರಾಜ್‌ಗೋಪಾಲ್
Published 21 ಡಿಸೆಂಬರ್ 2023, 6:13 IST
Last Updated 21 ಡಿಸೆಂಬರ್ 2023, 6:13 IST
ಅಕ್ಷರ ಗಾತ್ರ

ಮಾಲೂರು: ಪಟ್ಟಣದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಮಕ್ಕಳು ತೊಂದರೆ ಪಡುವಂತಾಗಿದೆ.

ಪಟ್ಟಣದ ಜೆಎಸ್‌ಎಸ್ ಸಂಸ್ಥೆಗೆ ಸೇರಿದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ 6ನೇ ತರಗತಿಯಿಂದ 8ನೇ ತರಗತಿಯವರೆಗೆ ಒಟ್ಟು 225 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ 156 ವಿದ್ಯಾರ್ಥಿಗಳು ಹಾಗೂ 69 ವಿದ್ಯಾರ್ಥಿನಿಯರು ಇದ್ದಾರೆ. 

ಬೋಧಕ ವರ್ಗದಲ್ಲಿ 11 ಸಿಬ್ಬಂದಿ ಇದ್ದಾರೆ. ಸೆಕ್ಯುರಿಟಿ, ಅಡುಗೆ ಸಹಾಯಕರು ಸೇರಿದಂತೆ ಒಟ್ಟು 12 ಸಿಬ್ಬಂದಿ ಹೊರಗುತ್ತಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಕಿರಿದಾದ ಕಟ್ಟಡ: ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ವಸತಿ ಶಾಲೆಯು ಕಿರಿದಾಗಿದ್ದು, ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಕುಳಿತುಕೊಳ್ಳಲು ಡೆಸ್ಕ್ ಇಲ್ಲ, ಹಾಗಾಗಿ ನೆಲದ ಮೇಲೆಯೇ ಕುಳಿತು ಪಾಠ ಕೇಳುತ್ತಿದ್ದಾರೆ. ರಾತ್ರಿ ಹೊತ್ತು ಮಲಗಲು ಮಂಚ, ಹಾಸಿಗೆ ವ್ಯವಸ್ಥೆ ಇಲ್ಲ. ನೆಲದ ಮೇಲೆಯೇ ಚಾಪೆ ಮೇಲೆ ಮಲಗುತ್ತಿದ್ದಾರೆ. 

69 ವಿದ್ಯಾರ್ಥಿನಿಯರಿಗೆ 2 ಶೌಚಾಲಯ: ವಸತಿ ಶಾಲೆಯಲ್ಲಿ ಒಟ್ಟು 69 ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ಇವರೆಲ್ಲರಿಗೂ ಸೇರಿ ಕೇವಲ ಎರಡೇ ಶೌಚಾಲಯವಿದೆ. ಹಾಗಾಗಿ, ನಿತ್ಯವೂ ಸರದಿಯಲ್ಲಿ ನಿಂತು ಶೌಚ ಕ್ರಿಯೆಗಳನ್ನು ಪೂರೈಸಬೇಕಾದ ಅನಿವಾರ್ವಯತೆ ಇಲ್ಲಿನ ವಿದ್ಯಾರ್ಥಿನಿಯರದ್ದು. 

156 ವಿದ್ಯಾರ್ಥಿಗಳಿಗೆ 12 ಶೌಚಾಲಯಗಳಿವೆ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಸಂಖ್ಯೆಗೆ ಅಗತ್ಯವಾದ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಿಕೊಡಬೇಕೆಂಬುದು ವಿದ್ಯಾರ್ಥಿಗಳ ಒಕ್ಕೊರಲ ಆಗ್ರಹವಾಗಿದೆ. 

ವಿದ್ಯಾರ್ಥಿಗಳಿಗೆ ಆಟದ ಮೈದಾನದ ಕೊರತೆ ಇದೆ. ಆದ್ದರಿಂದ ಗುಂಪು ಆಟ ಮತ್ತು ಅಥ್ಲೆಟಿಕ್ಸ್ ಆಟೋಟಗಳಲ್ಲಿ ಭಾಗವಹಿಸಲು ಮಕ್ಕಳು ಸಾಧ್ಯವಾಗುತ್ತಿಲ್ಲ. ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಮಕ್ಕಳು ಪಕ್ಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ತರಬೇತಿ ಪಡೆಯಬೇಕಿದೆ. 

ಬುಧವಾರ ಮಧ್ಯಾಹ್ನ ಮಕ್ಕಳಿಗೆ ನೋಟಿಸ್ ಬೋರ್ಡ್‌ನಲ್ಲಿ ಹಾಕಿದ್ದ ಪಟ್ಟಿಯಿಂತೆ ಮುದ್ದೆ, ಅನ್ನ, ಸೊಪ್ಪು–ಬೆಳೆ ಸಾಂಬಾರು, ಮಜ್ಜಿಗೆ ಊಟವನ್ನು ಬಡಿಸಲಾಗಿತ್ತು.

ಸುಬ್ರಮಣಿ
ಸುಬ್ರಮಣಿ
ವೆಂಕಟೇಶ್
ವೆಂಕಟೇಶ್
ಡೆಸ್ಕ್ ಶೌಚಾಲಯ ಬೇಕು
ಶಾಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಮೇಷ್ಟ್ರುಗಳು ಚೆನ್ನಾಗಿ ಪಾಠ ಮಾಡುತ್ತಾರೆ. ಊಟ– ತಿಂಡಿ ಸಮಯಕ್ಕೆ ಸರಿಯಾಗಿ ಕೊಡುತ್ತಾರೆ. ಆದರೆ ತರಗತಿಯಲ್ಲಿ ಕುಳಿತುಕೊಳ್ಳಲು ನಮಗೆ ಡೆಸ್ಕ್ ಇಲ್ಲ. ಆಡಲು ಆಟದ ಮೈದಾನವಿಲ್ಲ. ಶೌಚಾಲಯಗಳು ಬೇಕು 8 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಆಟದ ಮೈದಾನದ ಕೊರತೆ ಸರ್ಕಾರದ ಸೂಚನೆಯಂತೆ ಮಕ್ಕಳಿಗೆ ಉಟ ತಿಂಡಿ ಸಂಜೆ ಸ್ಯಾಕ್ಸ್ ಮತ್ತು ರಾತ್ರಿ ಊಟ ನೀಡುತ್ತಿದ್ದೇವೆ. ಶಾಲೆಯಲ್ಲಿ ಸಮರ್ಪಕ ಬೋಧನಾ ವರ್ಗವಿದ್ದು ಪಾಠಗಳು ಉತ್ತಮವಾಗಿ ನಡೆಯುತ್ತಿವೆ. ಶಾಲೆಯು ಬಾಡಿಗೆ ಕಟ್ಟಡದಲ್ಲಿದ್ದು ಮಕ್ಕಳಿಗೆ ಆಟದ ಮೈದಾನದ ಕೊರತೆ ಇದೆ.  ವೆಂಕಟೇಶ್ ಮುಖ್ಯ ಶಿಕ್ಷಕ ಭಿನ್ನಾಭಿಪ್ರಾಯ ಇಲ್ಲ ಬೋಧಕ ಮತ್ತು ಇತರ ಸಿಬ್ಬಂದಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಮಸ್ಯೆ ಉಂಟಾದಲ್ಲಿ ಪ್ರಾಂಶುಪಾಲರು ಎಲ್ಲಾ ಶಿಕ್ಷಕರ ಸಭೆ ಸೇರಿಸಿ ಮಾತನಾಡಿ ಬಗೆಹರಿಸುತ್ತಾರೆ.  ಸುಬ್ರಮಣಿ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT