ಬಂಗಾರಪೇಟೆ: ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಮಹದಾಸೆಯಿಂದ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಾರೆ. ಇದಕ್ಕಾಗಿ ಸಾವಿರಾರು ರೂಪಾಯಿ ವೆಚ್ಚ ಮಾಡುತ್ತಾರೆ. ಆದರೆ, ಇಂಥ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಖಾಸಗಿ ಶಾಲಾ ವಾಹನಗಳಲ್ಲಿ ಮಕ್ಕಳಿಗೆ ಸುರಕ್ಷತಾ ಕ್ರಮಗಳೇ ಇಲ್ಲ.

ಜೊತೆಗೆ ಶಾಲಾ ವಾಹನಗಳಲ್ಲಿ ಮಕ್ಕಳನ್ನು ದನ ಅಥವಾ ಕುರಿ ರೀತಿಯಲ್ಲಿ ತುಂಬಿಕೊಂಡು ಹೋಗಲಾಗುತ್ತಿದೆ. ಇದರಿಂದಾಗಿ ಖಾಸಗಿ ಶಾಲೆಗಳು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ನೀಡುವಷ್ಟು ಕಾಳಜಿಯನ್ನು ಅವರ ರಕ್ಷಣೆ ವಿಚಾರಕ್ಕೆ ನೀಡುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ.

ಉತ್ತಮ ಶಿಕ್ಷಣ ಸಿಗಲಿ ಎಂಬ ಕಾರಣಕ್ಕೆ ಪೋಷಕರು ತಮ್ಮ ಮಕ್ಕಳನ್ನು ಎಲ್ಕೆಜಿಯಿಂದಲೇ ಲಕ್ಷಾಂತರ ರೂಪಾಯಿ ವಂತಿಗೆ ನೀಡಿ ಉತ್ತಮ ಎನಿಸುವ ಶಾಲೆಗಳಿಗೆ ಸೇರಿಸುತ್ತಾರೆ. ಆದರೆ, ಆ ಮಕ್ಕಳನ್ನು ಶಾಲೆಗೆ ಕಳುಹಿಸಲು ಉತ್ತಮ ವಾಹನ ಸೌಕರ್ಯ ಮಾಡಿಸುವಲ್ಲಿ ಎಡವುತ್ತಿದ್ದಾರೆ ಎನ್ನಿಸುತ್ತಿದೆ. ಕಡಿಮೆ ಖರ್ಚಿನಲ್ಲಿ ಮಕ್ಕಳು ಶಾಲೆಗೆ ಹೋಗಿ, ಬರಲಿ ಎಂಬ ಕಾರಣಕ್ಕೆ ಕೆಲವು ಪೋಷಕರು ಮಾಸಿಕ ಇಂತಿಷ್ಟು ಹಣ ನೀಡಿ, ಆಟೊವನ್ನು ಗುರುತು ಮಾಡುತ್ತಾರೆ. ಆದರೆ, ಇಂಥ ಆಟೊಗಳಲ್ಲಿ ಕುರಿಗಳ ರೀತಿಯಲ್ಲಿ ಮಕ್ಕಳನ್ನು ತುಂಬಿಸಲಾಗಿರುತ್ತದೆ. ಶಾಲಾ ಮಕ್ಕಳ ತೂಕದ ಬ್ಯಾಗ್ಗಳು ಆಟೊಗಳ ಎರಡೂ ಬದಿಯಲ್ಲಿ ನೇತಾಡುತ್ತಿರುತ್ತವೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ, ಅಪಾಯ ಎದುರಾಗುತ್ತದೆ.

ಕೆಲವು ಪ್ರತಿಷ್ಠಿತ ಶಾಲೆಗಳು ಮಾತ್ರ ಎಲ್ಲ ನಿಯಮಗಳನ್ನು ಅನುಸರಿಸಿ ಶಾಲಾ ಬಸ್ಗಳನ್ನು ನಿಯೋಜಿಸುತ್ತವೆ. ಇಂತಹ ಶಾಲೆಗಳಲ್ಲಿ ಮಕ್ಕಳನ್ನು ಕರೆದೊಯ್ಯಲು ದುಬಾರಿ ಶುಲ್ಕ ವಿಧಿಸಲಾಗುತ್ತದೆ. ಆದರೆ ಸಾಕಷ್ಟು ಶಾಲೆಗಳಲ್ಲಿ ಶಾಲಾ ವಾಹನಗಳ ವ್ಯವಸ್ಥೆಯೇ ಇರುವುದಿಲ್ಲ. ಕೆಲವು ಕಡೆ ಇದ್ದರೂ, ನಿಯಮದಂತೆ ಸುರಕ್ಷತಾ ವ್ಯವಸ್ಥೆ ಇರುವುದಿಲ್ಲ.

ಕೆಲವು ಶಾಲೆಗಳಲ್ಲಿ ಮೆಟಡೋರ್/ ಮಾರುತಿ ವ್ಯಾನ್ನಂತಹ ವಾಹನಗಳನ್ನು ನಿಯೋಜಿಸಲಾಗಿರುತ್ತದೆ. ಅಲ್ಲಿಯೂ ಮಕ್ಕಳಿಗೆ ಬ್ಯಾಗ್ಗಳನ್ನು ಇಡಲು ವ್ಯವಸ್ಥೆ ಮತ್ತು ಕೂರಲು ಸ್ಥಳಾವಕಾಶ ಇರುವುದಿಲ್ಲ. ಸೀಟುಗಳ ಪ್ರಮಾಣಕ್ಕಿಂತ ಎರಡು, ಮೂರು ಪಟ್ಟು ಹೆಚ್ಚು ಮಕ್ಕಳನ್ನು ಹತ್ತಿಸಿಕೊಂಡಿರಲಾಗುತ್ತದೆ. ಅಲ್ಲದೆ ಸಾಕಷ್ಟು ಶಾಲೆಗಳಲ್ಲಿ ಸ್ವಂತ ವಾಹನಗಳು ಇಲ್ಲದ ಕಾರಣ ಹೊರಗುತ್ತಿಗೆ ನೀಡುತ್ತಾರೆ. ಪೋಷಕರಿಂದ ಪಡೆಯುವ ಶುಲ್ಕದಲ್ಲಿ ಅಲ್ಪ ಪ್ರಮಾಣವನ್ನು ವಾಹನಗಳ ಗುತ್ತಿಗೆದಾರರಿಗೆ ನೀಡುತ್ತಾರೆ. ಇದರಿಂದ ಗುತ್ತಿಗೆದಾರರು ಸಹ ಗುಣಮಟ್ಟದ ಸೇವೆ ನೀಡುವುದಿಲ್ಲ.

ಕೆಎಸ್ಆರ್ಟಿಸಿ ಮತ್ತು ಸಾರಿಗೆ ನಿಗಮಗಳು ಲಕ್ಷಾಂತರ ಕಿ.ಮೀ ಓಡಿ ಅವಧಿ ಮುಗಿದ ಬಸ್ಗಳನ್ನು ಟೆಂಡರ್ ಮೂಲಕ ಖರೀದಿಸುವ ಶಾಲಾ ಆಡಳಿತ ಮಂಡಳಿಗಳು, ಅದೇ ಬಸ್ಗಳಿಗೆ ಬಣ್ಣ ಬಳಿದು ಓಡಿಸುತ್ತವೆ. ಪ್ರಯಾಣಿಕರ ಬಳಕೆಗೆ ಬಾರದ ಬಸ್ಗಳು ಶಾಲಾ ಮಕ್ಕಳ ಬಳಕೆಗೆ ಯೋಗ್ಯವೇ ಎಂಬುದು ಜನರ ಪ್ರಶ್ನೆ. ಇಂತಹ ಬಸ್ಗಳಿಗೆ ಆರ್ಟಿಒ ಕಚೇರಿಗಳಲ್ಲಿ ಫಿಟ್ನೆಸ್ ಸರ್ಟಿಫಿಕೇಟ್ ನೀಡಲಾಗುತ್ತದೆ. ಕೆಲವು ಶಾಲೆಗಳಲ್ಲಿ ಫಿಟ್ನೆಸ್ ಸರ್ಟಿಫಿಕೇಟ್ ಸೇರಿಂದತೆ ಯಾವುದೇ ದಾಖಲೆಯೂ ಇರುವುದಿಲ್ಲ.

ಚಾಲಕರು ಕುಡಿದು ವಾಹನ ಓಡಿಸುವಂತಿಲ್ಲ. ಚಾಲಕನಿಗೆ ಕನಿಷ್ಠ 5 ವರ್ಷಗಳ ಅನುಭವ ಇರಬೇಕು. ಮಕ್ಕಳ ನಿಗಾ ವಹಿಸಲು ವಾಹನದಲ್ಲಿ ಶಿಕ್ಷಕರು ಅಥವಾ ಮಹಿಳಾ ಆಯಾಗಳನ್ನು ನಿಯೋಜಿಸಿರಬೇಕು. ಇಂತಹ ಹಲವು ವಿಚಾರಗಳ ಬಗ್ಗೆ ಪೋಷಕರು ಸಹ ನಿಗಾವಹಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.