ಮಂಗಳವಾರ, ಜೂನ್ 2, 2020
27 °C

ಕೆಜಿಎಫ್‌: ಮದ್ಯದ ಅಂಗಡಿಗೆ ಕನ್ನ, ಮದ್ಯ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್‌: ಆಂಡರ್‌ಸನ್‌ಪೇಟೆಯ ಹೃದಯಭಾಗದಲ್ಲಿರುವ ಮದ್ಯದ ಅಂಗಡಿಗೆ ಮಂಗಳವಾರ ಮುಂಜಾನೆ ಕನ್ನ ಹಾಕಿದ ಕಳ್ಳರು ಸುಮಾರು ₹90 ಸಾವಿರ ಮೌಲ್ಯದ ಮದ್ಯ ಮತ್ತು ಅಂಗಡಿಯಲ್ಲಿದ್ದ ₹30 ಸಾವಿರ ನಗದನ್ನು ಅಪಹರಿಸಿದ್ದಾರೆ.

ಆಂಡರ್‌ಸನ್‌ಪೇಟೆಯ ಲಕ್ಕಿ ಮದ್ಯದ ಅಂಗಡಿಯ ಪಕ್ಕದಲ್ಲಿ ಬೇಕರಿ ಇದೆ. ಬೇಕರಿಯ ಹಿಂಭಾಗದಲ್ಲಿ ಶೀಟಿನ ಮೇಲ್ಛಾವಣಿ ಇದೆ. ಮೇಲ್ಛಾವಣಿ ಕಿತ್ತ ಕಳ್ಳರು ಬೇಕರಿ ಒಳಗೆ ಇಳಿದಿದ್ದಾರೆ. ಅಲ್ಲಿ ಮದ್ಯದ ಅಂಗಡಿಗೆ ಕನ್ನ ಕೊರೆದಿದ್ದಾರೆ. ಉಳಿ ಮತ್ತು ಸುತ್ತಿಗೆಯನ್ನು ಕನ್ನ ಕೊರೆಯಲು ಬಳಸಿದ್ದಾರೆ. ಒಬ್ಬ ವ್ಯಕ್ತಿ ಒಳಗೆ ಹೋಗುವಷ್ಟು ಕನ್ನ ಮಾಡಿದ ಕಳ್ಳರು ಮದ್ಯವನ್ನು ಅಪಹರಣ ಮಾಡಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಉಮೇಶ್ ಭೇಟಿ ನೀಡಿದ್ದರು. ಅಬಕಾರಿ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಆಂಡರ್‌ಸನ್‌ಪೇಟೆ ಪೊಲೀಸರು ಮಹಜರು
ನಡೆಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು