ಮಾಲೂರು: ನಗರಸಭೆ ವ್ಯಾಪ್ತಿಯ ಬಡಜನರಿಗೆ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ 2003–04ರಲ್ಲಿ ಆಶ್ರಯ ಸಮಿತಿ ಯೋಜನೆ ಜಾರಿಗೊಳಿಸಲಾಗಿತ್ತು. ಈ ಯೋಜನೆಯಡಿ ನಿವೇಶನದ ಫಲಾನುಭವಿಯಾಗಲು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ತಲಾ ₹2,500 ಮತ್ತು ಸಾಮಾನ್ಯ ವರ್ಗದವರಿಗೆ ₹5,000 ಡಿ.ಡಿ ನಿಗದಿಪಡಿಸಲಾಗಿತ್ತು.

ಹೀಗೆ ಸಂಗ್ರಹಿಸಿದ ಹಣದಿಂದ 2.30 ಎಕರೆ ಜಮೀನು ಖರೀದಿಸಲಾಗಿತ್ತು. 2008ರಲ್ಲಿ ಮಾಲೂರಿಗೆ ಭೇಟಿ ನೀಡಿದ್ದ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಕೆಲವು ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನೂ ನೀಡಿದ್ದರು. ಆದರೆ, ನಂತರ ನಡೆದ ರಾಜಕೀಯ ಬೆಳವಣಿಗೆಯಿಂದಾಗಿ 2010ರಲ್ಲಿ ಉಚಿತ ನಿವೇಶನದ ಫಲಾನುಭವಿಯಾಗಲು ಹೆಚ್ಚುವರಿಯಾಗಿ ₹35,000 ವಂತಿಗೆ ನೀಡಬೇಕು ಎಂದು ಸೂಚಿಸಲಾಯಿತು. ಸೂರಿನ ಆಸೆಗಾಗಿ ಹೊಟ್ಟೆ, ಬಟ್ಟೆ ಕಟ್ಟಿ ಕೂಡಿಟ್ಟ ಹಣವನ್ನು 680 ಮಂದಿ ಡಿ.ಡಿ ಮೂಲಕ ಪಾವತಿ ಮಾಡಿದ್ದರು. ಆದರೆ, ಹೀಗೆ ಹಣ ಕಟ್ಟಿದ ಯಾರಿಗೂ ಸಹ ಈಗಲೂ ನಿವೇಶನ ಸಿಕ್ಕಿಲ್ಲ.

ಫಲಾನುಭವಿಗಳ ಖಾತೆಗೆ ಹಣ ಜಮೆ: ನಿವೇಶನಕ್ಕಾಗಿ ಪಾವತಿ ಮಾಡಿರುವ ₹35 ಸಾವಿರ ಹಣವನ್ನು ಫಲಾನುಭವಿಗಳ ಖಾತೆಗೆ ಬಡ್ಡಿ ಸಮೇತ ಪಾವತಿ ಮಾಡುವುದಾಗಿ 2018ರಲ್ಲಿ ಶಾಸಕ ಕೆ.ವೈ. ನಂಜೇಗೌಡ ಘೋಷಣೆ ಮಾಡಿದ್ದರು. ಜೊತೆಗೆ ಉಚಿತವಾಗಿ ನಿವೇಶನವನ್ನೂ ನೀಡುವುದಾಗಿ ತಿಳಿಸಿದ್ದರು. ಅದರಂತೆ, ಅವರು ಮತ್ತೆ ಶಾಸಕರಾದ ಬಳಿಕ 680 ಫಲಾನುಭವಿಗಳಿಗೆ ಬಡ್ಡಿಸಮೇತವಾಗಿ ಹಣ ಪಾವತಿ ಮಾಡಿದ್ದರು. ಜೊತೆಗೆ ಫಲಾನುಭವಿ ಗಳಿಗೆ ಉಚಿತ ವಾಗಿ ನಿವೇಶನ ನೀಡಲು 12 ಎಕರೆ ಜಮೀನನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡರು. ₹50 ಲಕ್ಷ ವೆಚ್ಚದಲ್ಲಿ ಪುರಸಭೆ ವತಿಯಿಂದ ಈ ಭೂಮಿಯನ್ನು ಸಮತಟ್ಟು ಮಾಡಲಾಗಿದೆ.

ಆದರೆ, ಈ ನಿವೇಶನಗಳ ಫಲಾನು ಭವಿಯಾಗುವವರು ಹೊಸ ಬಿಪಿಎಲ್ ಕಾರ್ಡ್ ಹೊಂದಿರಬೇಕು, ಅವರು ನಗರದಲ್ಲೇ ವಾಸವಿರಬೇಕು. ಫಲಾನು ಭವಿಗಳು ಸರ್ಕಾರಿ ನೌಕರಿಯಲ್ಲಿ ಇರಬಾರದು ಸೇರಿದಂತೆ ಹಲವು ಹೊಸ ನಿಯಮಗಳನ್ನು ಅಧಿಕಾರಿಗಳು ಜಾರಿ ಮಾಡಿದ್ದು, ಈ ನಿಯಮಗಳಿಂದಾಗಿ ಉಚಿತ ನಿವೇಶನ ಭಾಗ್ಯವು ಫಲಾನುಭವಿಗಳ ಕೈಗೆಟಕದಂತಾಗಿದೆ. ನಗರಸಭೆ ಅಧಿಕಾರಿಗಳು ಜಾರಿಗೆ ತಂದ ನಿಯಮಗಳಿಂದ ತೊಂದರೆಯಾಗಿದೆ ಎಂದು ಫಲಾನುಭವಿಗಳು ದೂರಿದ್ದಾರೆ.

ಫಲಾನುಭವಿಗಳಿಗೆ ನಿವೇಶನ ನೀಡಲು ಗುರುತಿಸಲಾಗಿರುವ ಭೂಮಿಯು ಕಲ್ಲು ಬಂಡೆಗಳಿಂದ ಕೂಡಿದೆ. ಮೂಲಸೌಕರ್ಯಗಳಾದ ಚರಂಡಿ, ರಸ್ತೆ, ವಿದ್ಯುತ್ ಮತ್ತು ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲದಿರುವುದು ಫಲಾನುಭವಿಗಳಲ್ಲಿ ಆತಂಕ ಮೂಡಿಸಿದೆ. ಸುಮಾರು 1,369 ಮಂದಿ ಉಚಿತ ನಿವೇಶನಕ್ಕಾಗಿ ಹಣ ಕಟ್ಟಿದ್ದರು. ಈ ಪೈಕಿ 680 ಮಂದಿ ಅಗತ್ಯ ದಾಖಲೆಗಳನ್ನು ನೀಡಿದ್ದಾರೆ. ಆದರೆ, ಉಳಿದ 689 ಮಂದಿ ಫಲಾನುಭವಿಗಳು ದಾಖಲೆಗಳನ್ನು ನೀಡಿಲ್ಲ ಎಂಬುದು ತಿಳಿದುಬಂದಿದ್ದು, ಇವರ ಸ್ಥಿತಿ ಅತಂತ್ರವಾಗಿದೆ.

ನಿವೇಶನ ರಹಿತ ಬಡವರು ಪುರಸಭೆಗೆ ಹಣ ಕಟ್ಟಿ ಸುಮಾರು 21 ವರ್ಷವಾಗಿದೆ. ಬಾಡಿಗೆ ಮನೆಗಳಲ್ಲಿ ವಾಸ ಮಾಡುವವರು ಒಂದೇ ಕಡೆ ಇರಲು ಸಾಧ್ಯವಾಗದೆ ಬೇರೆ ಬೇರೆ ಕಡೆ ವಾಸಿಸುತ್ತಿದ್ದಾರೆ. ಕೂಲಿ–ನಾಲಿ ಮಾಡುವ ಕೆಲವರು ಗ್ರಾಮೀಣ ಪ್ರದೇಶಗಳತ್ತ ಮುಖ ಮಾಡಿದ್ದಾರೆ. ಇಂಥವರು ನಗರದಲ್ಲೇ ವಾಸಿಸುತ್ತಿದ್ದೇನೆ ಎಂದು ದಾಖಲೆ ನೀಡುವುದಾದರೂ ಹೇಗೆ ಎಂದು ಫಲಾನುಭವಿಗಳು ಪ್ರಶ್ನಿಸಿದರು.

ನಿವೇಶನ ನೀಡುವುದಾಗಿ ಹಣ ಕಟ್ಟಿಸಿಕೊಂಡ ಪ್ರತಿಯೊಬ್ಬರಿಗೂ ನಿವೇಶನ ನೀಡಬೇಕು. ನಿವೇಶನ ನೀಡಲು ಹೊಸ ಬಿಪಿಎಲ್ ಕಾರ್ಡ್, ಹಳೆಯ ಸ್ಥಳದಲ್ಲೇ ವಾಸಿಸುತ್ತಿರಬೇಕು ಎಂಬ ನಿಯಮವನ್ನು ಕೈಬಿಡಬೇಕು ಎಂದು ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ದಿನೇಶ್ ಗೌಡ ಒತ್ತಾಯಿಸಿದರು.

ಎಲ್ಲರಿಗೂ ಸಿಗಲಿ

ನಿವೇಶನರಹಿತರು 25 ವರ್ಷದ ಹಿಂದೆ ಹಣ ಕಟ್ಟಿದ್ದಾರೆ. 20 ವರ್ಷದ ಹಿಂದೆ ಹಣ ಕಟ್ಟಿದ ಮಹಿಳೆ ಮದುವೆಯಾಗಿ, ಆಕೆ ಗಂಡನ ಮನೆಗೆ ಹೋಗಿರುತ್ತಾಳೆ. ಬೇರೆ ಕಡೆ ವಾಸಿಸುತ್ತಿರುತ್ತಾರೆ. ಇದರಿಂದಾಗಿ ದಾಖಲೆಗಳು ಬದಲಾವಣೆಯಾಗಿರುತ್ತದೆ. ಹೀಗಾಗಿ, ಹಣ ಕಟ್ಟಿದ ಎಲ್ಲರಿಗೂ ನಿವೇಶನ ನೀಡಬೇಕು ಎಂದು ಮಾಲೂರು ನಗರಸಭೆ ಮಾಜಿ ಸದಸ್ಯ ಆಂಜಿನಪ್ಪ ಒತ್ತಾಯಿಸಿದರು.

ಅಗತ್ಯ ದಾಖಲೆ ಸಲ್ಲಿಸಲೇಬೇಕು

ನಗರಸಭೆಯ ಆಶ್ರಯ ಸಮಿತಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದ ಅನುಸಾರ ಉಚಿತವಾಗಿ ನಿವೇಶನಕ್ಕೆ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ಒದಗಿಸಬೇಕು. ಈಗಾಗಲೇ ದಾಖಲೆ ನೀಡಿರುವ 680 ಫಲಾನುಭವಿಗಳಿಗೆ ಮೊದಲ ಹಂತದಲ್ಲಿ ನಿವೇಶನ ನೀಡಲಾಗುವುದು. ಉಳಿದ ಫಲಾನುಭವಿಗಳು ದಾಖಲೆ ನೀಡಿದ ನಂತರ 2ನೇ ಹಂತದಲ್ಲಿ ನಿವೇಶನ ನೀಡಲಾಗುವುದು. ಎಲ್ಲ ಫಲಾನುಭವಿಗಳಿಗೆ ನೀಡಲು ಅಗತ್ಯವಿರುವಷ್ಟು ನಿವೇಶನಗಳು ನಮ್ಮಲ್ಲಿ ಇವೆ.

- ಮಂಜುನಾಥ, ಮಾಲೂರು ನಗರಸಭೆ ಸಮುದಾಯ ವ್ಯವಹಾರಗಳ ಅಧಿಕಾರಿ

21 ವರ್ಷದ ಹಿಂದೆ ನಿವೇಶನಕ್ಕಾಗಿ ಪುರಸಭೆಗೆ ಹಣ ಕಟ್ಟಿದ್ದೆ. ಜೊತೆಗೆ ಬಿಪಿಎಲ್ ಕಾರ್ಡ್ ನೀಡಿದ್ದೆ. ಆದರೆ, ಈಗ ನಗರಸಭೆ ಅಧಿಕಾರಿಗಳು ಹೊಸ ಬಿಪಿಎಲ್ ಕಾರ್ಡ್ ಇದ್ದರೆ, ಮಾತ್ರ ನಿವೇಶನ ಹಂಚಿಕೆ ಮಾಡುವುದಾಗಿ ಹೇಳುತ್ತಿದ್ದಾರೆ..
ಗೀತಾ, ಫಲಾನುಭವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.