ಮಾಲೂರು: ನಗರದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಹೆಸರಿನಲ್ಲಿ ಯುಜಿಡಿ ಹಾಗೂ ಯರಗೋಳ್ ಕುಡಿಯುವ ನೀರಿನ ಸರಬರಾಜು ಪೈಪ್ಗಳನ್ನು ಒಡೆದು ಹಾಕಿದ್ದು, ತಾಲ್ಲೂಕಿನ ಜನತೆ ಕೊಳಚೆ ನೀರು ಕುಡಿಯುವಂತಾಗಿದೆ ಎಂದು ಆರೋಪಿಸಿ ಕದಸಂಸ ಕಾರ್ಯಕರ್ತರು ನಗರಸಭೆ ಆಯುಕ್ತ ಮಹದೇವ್ ಅವರಿಗೆ ಮನವಿ ಸಲ್ಲಿಸಿದರು.

ನಗರಸಭೆ ಕಚೇರಿ ಮುಂಭಾಗ ಮಂಗಳವಾರ ಕದಸಂಸ ಕಾರ್ಯಕರ್ತರು ಜಲಜೀವನ್ ಯೋಜನೆಯು ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.

ನಗರದಲ್ಲಿ ಯುಜಿಡಿ ಕಾಮಗಾರಿಯು ಮನೆ ಮನೆಗೂ ಜೋಡಣೆಯಾಗಿದೆ. ಅಲ್ಲದೆ, ಯರಗೋಳ್ ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿಯು ಮುಗಿದಿದೆ. ಆದರೆ ಜಲಜೀವನ್ ಮಿಷನ್ ಯೋಜನೆಗಾಗಿ ರಸ್ತೆ ಅಗೆಯುತ್ತಿದ್ದು, ಕೆಲವೆಡೆ ಯುಜಿಡಿ ಪೈಪ್ ಹಾಗೂ ಇನ್ನೂ ಕೆಲವೆಡೆ ಹೊಡೆದು ಕೊಳಚೆ ನೀರು ಕುಡಿಯುವ ನೀರು ಮಿಶ್ರಣವಾಗುತ್ತಿದೆ ಎಂದು ಕಿಡಿಕಾರಿದರು.

ಅಲ್ಲದೆ ಚೆನ್ನಾಗಿರುವ ರಸ್ತೆಗಳನ್ನು ಅಗೆದು ಸರಿಯಾದ ರೀತಿಯಲ್ಲಿ ಮುಚ್ಚದೆ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ. ಹಾಗಾಗಿ ಕೂಡಲೇ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಕದಸಂಸ ತಾಲ್ಲೂಕು ಸಂಚಾಲಕ ಎಸ್.ಎಂ.ವೆಂಕಟೇಶ್, ತಾಲ್ಲೂಕು ಸಂಘಟನಾ ಸಂಚಾಲಕ ಬಂಡಹಟ್ಟಿ ನಾರಾಯಣಸ್ವಾಮಿ, ಅಮರೇಶ್, ಅಂಗಶೆಟ್ಟಹಳ್ಳಿ ನಾರಾಯಣಸ್ವಾಮಿ, ವೆಂಕಟೇಶ್, ಪಿಲ್ಟರ್ ನಾರಾಯಣಸ್ವಾಮಿ, ಯಶವಂತಪುರ ಮುನಿರಾಜು, ಹುಂಗೇನಹಳ್ಳಿ ಶ್ರೀನಿವಾಸ್, ಅರಳೇರಿ ಮುನಿರಾಜು, ಗಾಂಧಿ ವೃತ್ತ ಬಾಬು ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.