ಕೊಳಚೆ ನೀರು ಪಕ್ಕದಲ್ಲೇ ವ್ಯಾಪಾರ ವಹಿವಾಟು
ಕೆಸರಲ್ಲೇ ವ್ಯಾಪಾರ ನಡೆಸುತ್ತಿರುವ ವರ್ತಕರು
ಮುಖ್ಯರಸ್ತೆ ಬಳಿ ವ್ಯಾಪಾರ ನಡೆಸುತ್ತಿರುವ ರೈತರು

ಪುರಸಭೆ ವತಿಯಿಂದ ಪತ್ರಿ ದಿನ ಸ್ವಚ್ಛತಾ ಕಾರ್ಯ ನಡೆಯುತ್ತದೆ. ಸಂತೆಗೆ ಬರುವ ರೈತರು ವರ್ತಕರು ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಪುರಸಭೆ ವತಿಯಿಂದ ಶೀಘ್ರ ಶೌಚಾಲಯ ನಿರ್ಮಾಣ ಮಾಡಲಾಗುವುದು. ವರ್ತಕರು ಹಾಗೂ ಗ್ರಾಹಕರು ಸ್ವಚ್ಛತೆ ಕಾಪಾಡಬೇಕು.
–ಪ್ರದೀಪ್ ಕುಮಾರ್ ಪುರಸಭೆ ಮುಖ್ಯಾಧಿಕಾರಿ
ಪತ್ರಿ ದಿನ ₹60 ಕರ ವಸೂಲಿ ಮಾಡುತ್ತಾರೆ. ಆದರೆ ಯಾವುದೇ ಸೌಕರ್ಯ ಕಲ್ಪಿಸಿಲ್ಲ. ಕರ ವಸೂಲಿಗಾರರನ್ನು ಕೇಳಿದರೆ ಪುರಸಭೆ ವತಿಯಿಂದ ಸ್ವಚ್ಛಗೊಳಿಸುತ್ತಾರೆಂಬ ಊಡಾಫೆ ಉತ್ತರ ನೀಡುತ್ತಾರೆ.
–ರಾಜಮ್ಮ, ತರಕಾರಿ ವರ್ತಕಿ
ಸಂತೆಯಲ್ಲಿ ಕೊಳಚೆ ನೀರು ಹರಿಯುತ್ತಿರುವುದರಿಂದ ರಸ್ತೆ ಬದಿ ವ್ಯಾಪಾರ ವಹಿವಾಟು ನಡೆಸಲು ನಮಗೆ ಕಷ್ಟವಾಗುತ್ತಿದೆ. ಜೊತೆಗೆ ಗ್ರಾಹಕರು ಖರೀದಿಗೆ ಮುಂದಾಗುತ್ತಿಲ್ಲ.
–ವನಜಮ್ಮ, ವರ್ತಕರು