ಮಾಲೂರು ಕೆಂಪೇಗೌಡ ವೃತ್ತದಲ್ಲಿ ಸಂಚಾರ ದೀಪದ ವ್ಯವಸ್ಥೆ ಇಲ್ಲದೆ ವಾಹನ ದಟ್ಟಣೆ ಹೆಚ್ಚಾಗಿರುವುದು
ದ್ವಿಚಕ್ರ ವಾಹನದಲ್ಲಿ ಮಗಳನ್ನು ಕೂರಿಸಿಕೊಂಡು ಶಾಲೆಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಮಾರಿಕಾಂಬ ವೃತ್ತದಲ್ಲಿ ಕ್ರಾಸ್ ಮಾಡುವಾಗ 11 ವರ್ಷದ ಮಗಳು ಕೆಳಗೆ ಬಿದ್ದ ತಕ್ಷಣ ಹಿಂಬದಿಯಿಂದ ಬಂದ ಲಾರಿ ಹರಿಯಿತು. ನನ್ನ ಮಗಳು ಕಣ್ಣು ಮುಂದೆ ಸಾವಿಗೀಡಾದಳು
– ಲಕ್ಷ್ಮಿದೇವಿ, ಮಾಲೂರು ಪಟ್ಟಣ ನಿವಾಸಿ
ಪಟ್ಟಣದ ಮುಖ್ಯ ವೃತ್ತಗಳಲ್ಲಿ ಸಂಚಾರ ದೀಪದ ವ್ಯವಸ್ಥೆ ಮಾಡದೆ ಇರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಪೊಲೀಸ್ ಇಲಾಖೆ ಎಚ್ಚರ ವಹಿಸಿ ಮುಖ್ಯ ರಸ್ತೆ ವೃತ್ತಗಳಲ್ಲಿ ಸಂಚಾರ ದೀಪ ಅಳವಡಿಸಬೇಕು
– ದಿನೇಶ್ ಗೌಡ, ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ
ಮಾಲೂರು ಮಾರಿಕಾಂಬ ವೃತ್ತದಲ್ಲಿ ವಾಹನಗಳು ಅಡ್ಡಾದಿಡ್ಡಿ ಚಾಲನೆ ಮಾಡುತ್ತಿರುವುದು