ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ತವರಿನತ್ತ ಕಾರ್ಮಿಕರ ಪಯಣ

Last Updated 3 ಮೇ 2020, 15:45 IST
ಅಕ್ಷರ ಗಾತ್ರ

ಮಾಲೂರು: ಸರ್ಕಾರದ ಆದೇಶದಂತೆ ಪಟ್ಟಣದ ರೈಲ್ವೆ ನಿಲ್ದಾಣದಿಂದ ಸಾವಿರಾರು ಕಾರ್ಮಿಕರು ಭಾನುವಾರ ಉತ್ತರ ಭಾರತದ ರಾಜ್ಯಗಳಿಗೆ ರೈಲಿನಲ್ಲಿ ತೆರಳಿದರು.

ಬೆಂಗಳೂರಿನ ವಿವಿಧ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಕಾರ್ಮಿಕರು ಪೊಲೀಸ್ ಸರ್ಪಗಾವಲಿನಲ್ಲಿ ತಮ್ಮ ಊರುಗಳಿಗೆ ಸೇರಿಕೊಂಡರು.

ಸಾರ್ವಜನಿಕರು ಒಂದೆಡೆ ಜಮಾಯಿಸದಂತೆ ಬೆಂಗಳೂರು, ಕೋಲಾರ ಮತ್ತು ಕೆಜಿಎಫ್ ಸೇರಿದಂತೆ 4 ಜಿಲ್ಲೆಗಳಲ್ಲಿ ನೂರಾರು ಪೊಲೀಸರು ರೈಲ್ವೆ ನಿಲ್ದಾಣದಲ್ಲಿ ಬಂದೋಬಸ್ತ್ ಕೈಗೊಂಡಿದ್ದರು.

ರೈಲಿನ ಮೂಲಕ ಬಿಹಾರ ರಾಜ್ಯಕ್ಕೆ ಕಾರ್ಮಿಕರನ್ನು ಕಳುಹಿಸುತ್ತಿರುವ ಹಿನ್ನೆಲೆಯಲ್ಲಿ ಸಿಆರ್‌ಪಿಎಫ್ ಹಾಗೂ ಸ್ಥಳಿಯ ಪೊಲೀಸರನ್ನು ಬಳಸಿಕೊಂಡು ಕಾರ್ಮಿಕರನ್ನು ತಪಾಸಣೆಗೆ ಒಳಪಡಿಸಲಾಗಿತ್ತು.

ಬೆಂಗಳೂರಿನ ವರ್ತೂರು, ವೈಟ್‌ಫಿಲ್ಡ್, ಸರ್ಜಾಪುರ, ಕೋಲಾರ ಸೇರಿದಂತೆ ವಿವಿಧೆಡೆಯಿಂದ ಒಡಿಶಾಸ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ರಾಜ್ಯಗಳಿಗೆ ಕಳುಹಿಸಲು ಒಟ್ಟು 3 ಸಾವಿರ ಕೂಲಿ ಕಾರ್ಮಿಕರನ್ನು ಸೋಂಕು ನಿವಾರಕ ಸಿಂಪಡನೆ ಮಾಡಿರುವ ಬಸ್ ಮೂಲಕ ಕಾರ್ಮಿಕರನ್ನು ನಿಲ್ದಾಣಕ್ಕೆ ಕರೆತರಲಾಯಿತು.

ಕಾರ್ಮಿಕರಿಗೆ ಸರ್ಕಾರದಿಂದ ಉಚಿತ ಪಾಸ್ ವ್ಯವಸ್ಥೆ ಸೇರಿದಂತೆ 2-3 ದಿನಗಳಿಗೆ ಅಗತ್ಯವಾದ ಊಟ-ತಿಂಡಿ ವ್ಯವಸ್ಥೆ ಸಹ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT