ಮಾಸ್ತಿ (ಮಾಲೂರು): ಮಾಸ್ತಿ ಗ್ರಾಮದಲ್ಲಿರುವ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಕಾಲೇಜಿನ 1991–2003ನೇ ಸಾಲಿನ ವಿದ್ಯಾರ್ಥಿಗಳು ಸೋಮವಾರ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಂಡರು.

ನಿವೃತ್ತ ಪ್ರಾಂಶುಪಾಲ ವೆಂಕಟೇಶಪ್ಪ ಮಾತನಾಡಿ, ‘ಮಾಸ್ತಿ ಸಂಸ್ಕೃತಿ ಪರಂಪರೆ ಹೊಂದಿರುವ ಭಾರತದಲ್ಲಿ ಗುರು ಸ್ಥಾನಕ್ಕೆ ಉನ್ನತ ಮಟ್ಟದ ಗೌರವವಿದೆ. ಒಂದು ದೇಶ ನಾಶವಾಗಬೇಕಾದರೆ, ಬಾಂಬ್ ಹಾಕಿ ದಾಳಿ ಮಾಡಬೇಕು ಎಂದಿಲ್ಲ. ಆ ದೇಶದ ಶಿಕ್ಷಣ ವ್ಯವಸ್ಥೆ ನಾಶವಾದರೆ ಸಾಕು, ಆ ದೇಶ ತನ್ನಷ್ಟಕ್ಕೆ ತಾನೇ ನಾಶವಾಗಲಿದೆ’ ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲ ಭೀಮರಾವ್ ಮಾತನಾಡಿ, ಕನ್ನಡದ ಆಸ್ತಿ ಎಂದೇ ಖ್ಯಾತಿ ಪಡೆದ ಮೇರು ಸಾಹಿತಿ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ತವರು ಗ್ರಾಮ ಮಾಸ್ತಿಯಲ್ಲಿ 12 ಶೈಕ್ಷಣಿಕ ವರ್ಷಗಳಲ್ಲಿ ಓದಿದ ಹಳೆ ವಿದ್ಯಾರ್ಥಿಗಳು ಸುಮಾರು 20 ವರ್ಷಗಳ ನಂತರ ಒಟ್ಟಾಗಿ ಸೇರಿ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ಎಂ.ಆರ್.ಗಿರೀಶ್, ವೆಂಕಟರಾಜ್ ನೇತೃತ್ವದಲ್ಲಿ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ವೇದಿಕೆಯಲ್ಲಿ ಹಳೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾದ ಬಿ. ಮುನಿಯಪ್ಪ, ಮುನಿಗುರು ಸ್ವಾಮಿ, ಎಸ್.ನಾರಾಯಣಸ್ವಾಮಿ, ಇಂದಿರಮ್ಮ, ಎಂ.ಗಿರಿಜಮ್ಮ, ಆಶಾ, ಶಶಿಕಲಾ, ಎಂ.ವಿ.ರಾಜಗೋಪಾಲ್, ಪ್ರೌಢಶಾಲೆ ಗುರುಗಳಾದ ಎಲ್ .ಪಾಪಯ್ಯ, ಗಂಗಾಧರಯ್ಯ, ತಿಪ್ಪೇಶ್ ನಾಯಕ್, ಕುಮಾರಸ್ವಾಮಿ, ಮೆಹಬೂಬ್ ಸುಭಾನ್, ಕಲ್ಲನಗೌಡ ಕಟ್ಟಪ್ಪನವರ್, ಅಪ್ಸರ್ ಪಾಷಾ, ಶಶಿ, ಕೆ.ಪಿ.ರವಿಶಂಕರ್, ಆರ್.ಶ್ರೀನಿವಾಸ್, ಹಾಗೂ ಕಾಲೇಜು ಪ್ರಾಂಶುಪಾಲರಾಗಿದ್ದ ಭೀಮರಾವ್, ವೆಂಕಟೇಶಪ್ಪ ಕೆ.ವಿ, ಉಪನ್ಯಾಸಕರಾದ ಮಹಮ್ಮದ್, ವೆಂಕಟಸ್ವಾಮಿ, ಸತೀಶ್, ನಾರಾಯಣಸ್ವಾಮಿ, ಡಾ.ರಾಮಕೃಷ್ಣಪ್ಪ, ಕುಮಾರಿ, ನಾಯ್ಡು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.