ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಣ ಹಣ ಕೊನೆಗೆ ಹೆಣ: ಮಾಜಿ ಸಚಿವ ಎಂಟಿಬಿ ನಾಗರಾಜ್

Published 9 ಆಗಸ್ಟ್ 2024, 16:48 IST
Last Updated 9 ಆಗಸ್ಟ್ 2024, 16:48 IST
ಅಕ್ಷರ ಗಾತ್ರ

ಕೋಲಾರ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್‌ ಮಾಡುವ ಪ್ರಶ್ನೆಯೇ ಇಲ್ಲ. ತನಿಖೆಯಲ್ಲಿ ಸಾಬೀತಾದರೆ ಅದು ಮುಖ್ಯಮಂತ್ರಿ ಆಗಲಿ, ಪ್ರಧಾನಿಯಾಗಲಿ, ಮಂತ್ರಿ ಆಗಲಿ, ಶಾಸಕರಾಗಲಿ ಶಿಕ್ಷೆ ಆಗಬೇಕು. ಯಾರೇ ಭ್ರಷ್ಟಾಚಾರ ಎಸಗಿದರೂ ಅದು ತಪ್ಪು. ರಾಜೀನಾಮೆ ಕೇಳುವ ಹಕ್ಕು ಪ್ರತಿಪಕ್ಷದವರಿಗೆ ಇದೆ’ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ನಗರದ ಹೊರವಲಯದ ಅಂತರಗಂಗೆ ಬುದ್ಧಿಮಾಂದ್ಯ ಮತ್ತು ಅನಾಥ ಮಕ್ಕಳ ಆಶ್ರಮಕ್ಕೆ ಶುಕ್ರವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಹಣ ಹಣ ಎಂದು ಹಣ ಮಾಡುತ್ತಾರೆ. ಒಂದು ದಿನ ಹೆಣವಾಗಿ ಹೋಗುತ್ತಾರೆ’ ಎಂದರು.

‘ರಾಜಕೀಯ ಎನ್ನುವುದು ಪ್ರಜಾಸೇವೆ ಆಗಬೇಕು. ಆದರೆ ಇಂದು ಸ್ವಾರ್ಥ ಸೇವೆಗೆ ಇಳಿದಿದ್ದಾರೆ. ರಾಜಕಾರಣದಲ್ಲಿ ಎಲ್ಲಿವರೆಗೆ ಭ್ರಷ್ಟಾಚಾರ ಇರುತ್ತದೆಯೋ ಅಲ್ಲಿವರೆಗೆ ರಾಜಕಾರಣಿಗಳ ಕೆಸರೆರಚಾಟ ನಿಲ್ಲುವುದಿಲ್ಲ’ ಎಂದು ತಿಳಿಸಿದರು.

‘ಮುಡಾ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿದ್ದರಾಮಯ್ಯ ಪಕ್ಷ, ಜಾತಿ ಬದಿಗೊತ್ತಿ, ಪಾರದರ್ಶಕವಾಗಿ ತನಿಖೆ ನಡೆಸಬೇಕು. ಯಾರೇ ತಪ್ಪು ಮಾಡಿದರು ಶಿಕ್ಷೆಯಾಗಬೇಕು, ಬಡವರ ತೆರಿಗೆ ಹಣ ದುರುಪಯೋಗವಾಗಬಾರದು. ಎಸ್‌ಐಟಿ, ಇ.ಡಿ, ಸಿಬಿಐ ಎಲ್ಲಾ ತನಿಖೆ ಸಂಸ್ಥೆಗಳು ನಿಷ್ಪಕ್ಷಪಾತವಾಗಿರಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT