ಮುಳಬಾಗಿಲು: ನಗರದ ನೇತಾಜಿ ನಗರದಲ್ಲಿರುವ ರೇಣುಕಾ ಯಲ್ಲಮ್ಮ ದೇವಿ 18ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಶನಿವಾರ ಹಾಗೂ ಭಾನುವಾರ ಅದ್ದೂರಿಯಾಗಿ ನಡೆಯಿತು.

ವಾರ್ಷಿಕೋತ್ಸವದ ಪ್ರಯುಕ್ತ ರೇಣುಕಾ ಯಲ್ಲಮ್ಮ ದೇವಿ ದೇವಾಲಯ ಹಾಗೂ ದೇವಿಯನ್ನು ವಿದ್ಯುತ್ ದೀಪ, ಹೂ, ಹಣ್ಣು ಹಂಪಲು ಹಾಗೂ ಬಗೆ ಬಗೆಯ ಹಸಿರು ಎಲೆಗಳಿಂದ ಅಲಂಕರಿಸಲಾಗಿತ್ತು. ಕಳಶಾರಾಧನೆ, ಹೋಮ, ಧ್ವಜಾರೋಹಣ, ಅಭಿಷೇಕ, ಮಹಾ ಮಂಗಳಾರತಿ, ಪಂಚಾಮೃತ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು.

ಭಾನುವಾರ ಯಲ್ಲಮ್ಮ ದೇವಿಯ ಪುಷ್ಪ ಪಲ್ಲಕ್ಕಿ ಹಾಗೂ 500ಕ್ಕೂ ಹೆಚ್ಚು ಮಹಿಳೆಯರು ಕಶಸ ಹೊತ್ತು ನಗರದ ನೇತಾಜಿ ನಗರ, ಅಂಬೇಡ್ಕರ್ ವೃತ್ತ, ಪೊಲೀಸ್ ಠಾಣೆ ರಸ್ತೆ ಮತ್ತಿತರ ಕಡೆ ಮೆರವಣಿಗೆಯಲ್ಲಿ ಸಾಗಿದರು.

ಶಾಸಕ ಸಮೃದ್ಧಿ ಮಂಜುನಾಥ್, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಮಾಜಿ ಸಚಿವ ಎಚ್.ನಾಗೇಶ್, ವೈ.ಶಂಭಯ್ಯ, ಮಾಜಿ ಶಾಸಕ ಬಂಗಾರಪೇಟೆ ವೆಂಕಟಮುನಿಯಪ್ಪ, ಯಾಮಣ್ಣ, ಅಮರನಾಥ, ಕಾರ್ ಶ್ರೀನಿವಾಸ್, ಮೆಕಾನಿಕ್ ಶ್ರೀನಿವಾಸ್, ಜಮ್ಮನಹಳ್ಳಿ ಕೃಷ್ಣಪ್ಪ, ಅಯ್ಯಪ್ಪ, ಗೊಲ್ಲಹಳ್ಳಿ ವೆಂಕಟೇಶ್, ಮಂಜುನಾಥ ಸ್ವಾಮಿ, ಯಲ್ಲಪ್ಪ, ನಗರಸಭೆ ಸದಸ್ಯ ವಿಜಯ್ ಕುಮಾರ್, ಹರಿ, ಸುರೇಶ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.