ಮುಳಬಾಗಿಲು: ಕೋಳಿ ಜೂಜು ಪಂದ್ಯ ಆಡುತ್ತಿದ್ದ ಅಡ್ಡೆಯ ಮೇಲೆ ಮುಳಬಾಗಿಲು ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ನಾಲ್ವರು ಜೂಜುಕೋರರನ್ನು ಶುಕ್ರವಾರ ಬಂಧಿಸಿದ್ದಾರೆ.

ಮುಳಬಾಗಿಲು ತಾಲ್ಲೂಕಿನ ಹೊಸಕೆರೆಯ ರಮೇಶ್, ಚೋಳಂಗುಂಟೆಯ ಚಂದ್ರಶೇಖರ್, ದೊಡ್ಡ ಹೊನ್ನಶೆಟ್ಟಿ ಹಳ್ಳಿಯ ವಿವೇಕ್, ಮಣಿ ಹಾಗೂ ನುಕ್ಕನಹಳ್ಳಿ ಹರೀಶ್ ಬಂಧಿತರು.

ಹೊಸಕೆರೆ ಬಳಿಯ ಕೆರೆಯಲ್ಲಿ ಕೋಳಿ ಪಂದ್ಯ ಆಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಮುಳಬಾಗಿಲು ಗ್ರಾಮಾಂತರ ಸರ್ಕಲ್ ಇನ್ ಸ್ಪೆಕ್ಟರ್ ಸತೀಶ್ ಹಾಗೂ ಸಬ್ ಇನ್ಸ್ಪೆಕ್ಟರ್ ಅರುಣ್ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಿ ಐವರನ್ನು ಬಂಧಿಸಿ, ₹4,200 ನಗದು ಹಾಗೂ ಎರಡು ಹುಂಜಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗ್ರಾಮಾಂತರ ಪೊಲೀಸ್ ಠಾಣೆಯ ಮಂಜುನಾಥ ರೆಡ್ಡಿ, ಶಂಕರಪ್ಪ, ಸತ್ಯನಾರಾಯಣ, ಲಕ್ಷ್ಮಿ ನಾರಾಯಣ, ಆನಂದ್ ಹಾಗೂ ನಾಗಾರ್ಜುನ ದಾಳಿಯಲ್ಲಿ ಭಾಗವಹಿಸಿದ್ದರು.

ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.